ವರದಿ:ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ
ಮಳೆಯಿಂದ ನಷ್ಟವಾಗಿರುವ ಬೆಳೆಗೆ ಪರಿಹಾರ ನೀಡಿ 4 ನೇ ಕೊರೋನ ಅಲೆ ಮಾವು ಮಾರುಕಟ್ಟೆಯ ಮೇಲೆ ಪರಿಣಾಮ ಬೀರದಂತೆ ಜಾಗೃತಿ ವಹಿಸಿ
ಶ್ರೀನಿವಾಸಪುರ : ಅಕಾಲಿಕ ಮುಂಗಾರು ಮಳೆಯಿಂದ ನಷ್ಟವಾಗಿರುವ ಬೆಳೆ ಸಮೀಕ್ಷೆ ಮಾಡಲು ವಿಶೇಷ ತಂಡ ರಚನೆ ಮಾಡಿ ನಷ್ಟವಾಗಿರುವ ಪ್ರತಿ ಎಕೆರೆಗೆ 5 ಲಕ್ಷ ಪರಿಹಾರ ನೀಡಿ 4 ನೇ ಕೊರೋನ ಅಲೆ ಮಾವು ಮಾರುಕಟ್ಟೆಯ ಮೇಲೆ ಪರಿಣಾಮ ಬೀರದಂತೆ ಜಾಗೃತಿ ವಹಿಸ ಬೇಕೆಂದು ರೈತ ಸಂಘದಿಂದ ತಾಲ್ಲೂಕು ದಂಡಾಧಿಕಾರಿಗಳಾದ ಶರೀನಾತಾಜ್ ರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಬೆಳೆ ಇದ್ದರೆ ಬೆಲೆ ಇಲ್ಲ , ಬೆಲೆ ಇದ್ದರೆ ಬೆಳೆ ಇಲ್ಲ ಇವರೆಡು ಇದ್ದರೆ ಪ್ರಕೃತಿ ವಿಕೋಪದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿದ ರೈತನ ಬದುಕು ಬಿರುಗಾಳಿಗೆ ಹಾರಿಹೋಗಿ ಹಾಲಿ ಕಲ್ಲಿನಲ್ಲಿ ಕರಗಿ ಹೋಗುತ್ತಿದ್ದರು.
ಜನ ಪ್ರತಿನಿಧಿಗಳು ರೈತರ ಕಷ್ಟಗಳಿಗೆ ಸ್ಪಂಧಿಸುತ್ತಿಲ್ಲವೆಂದು ರೈತ ಸಂಘದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜ ಗೌಡ ಅವ್ಯವಸ್ಥೆ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದರು. ಸತತವಾಗಿ ಎರಡು ವರ್ಷಗಳಿಂದ ಸಾಂಕ್ರಾಮಿಕ ರೋಗಗಳ ಹಾವಳಿಯಿಂದ ಬೆಳೆದ ಬೆಳೆಗೆ ಸೂಕ್ತವಾದ ಮಾರುಕಟ್ಟೆ ಇಲ್ಲದೆ ಪಸಲನ್ನು ತೋಟದಲ್ಲಿಯೇ ಕೊಳೆಯುವ ಜೊತೆಗೆ ರಸ್ತೆಯ ಅಕ್ಕಪಕ್ಕ ಚರಂಡಿಗಳಲ್ಲಿ ಸುರಿದು ರೈತ ಆಕ್ರೋಷ ವ್ಯಕ್ತಪಡಿಸಿದಾಗ ಸರ್ಕಾರ ರೈತರ ಸಮಸ್ಯೆಗೆ ಸ್ಪಂಧಿಸಿ ಪರಿಹಾರ ಘೋಷಣೆ ಮಾಡಿ ಎರಡು ವರ್ಷಕಳೆದರೂ ಇದುವರೆಗೂ ರೈತರಿಗೆ ಪರಿಹಾರದ ಹಣ ಸೇರಿಲ್ಲ ಅಷ್ಟರ ಮಟ್ಟಿಗೆ ಅಧಿಕಾರಿಗಳ ವೈಫಲ್ಯ ಕಂಡು ಬರುತ್ತದೆ ಎಂದು ಅಧಿಕಾರಿಗಳ ವಿರುದ್ದ ಆರೋಪ ಮಾಡಿದರು.
ಇತ್ತೀಚೆಗೆ ಸುರಿಯುತ್ತಿರುವ ಮುಂಗಾರು ಮಳೆಯ ಆರ್ಭಟದ ಬಿರುಗಾಳಿ ಹಾಗೂ ಆಲಿಕಲ್ಲು ಮಳೆಗೆ ಪಸಲಿನಲ್ಲಿ ಕುಂಟಿತವಾಗಿ ಇದ್ದಂತಹ ಶೇಕಡ 50 ರ ಮಾವು ಪಸಲು ಸಂಪೂರ್ಣವಾಗಿ ನೆಲ ಕಚ್ಚಿದೆ ಇದರ ಮೇಲೆ ಬಂಡವಾಳ ಹಾಕಿದ ರೈತ ಮಾವು ವ್ಯಾಪಾರಸ್ಥರು ಹಾಗೂ ದಲ್ಲಾಳರು ದಿಕ್ಕು ತೋಚದಂತೆ ತಲೆ ಮೇಲೆ ಕೈಹಿಟ್ಟುಕೊಂಡು ಸರ್ಕಾರ ನೀಡುವ ಪರಿಹಾರಕ್ಕೆ ಜಾತಕಪಕ್ಷಿಗಳಂತೆ ಕಾದು ಕುಳಿತಿದ್ದರು ಸಮಸ್ಯೆಗೆ ಸ್ಪಂಧಿಸಿದ ಸರ್ಕಾರದ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದರು.
ಸಾಂಕ್ರಾಮಿಕ ರೋಗಗಳು ಅತಿ ವೃಷ್ಟಿ ಅನಾವೃಷ್ಟಿ ಹಾಗೂ ಪ್ರಕೃತಿ ವಿಕೋಪಗಳಿಂದ ರೈತರು ಬೆಳೆದ ಬೆಳೆ ನಾಶವಾದಾಗ ಅನುಕೂಲವಾಗಲೆಂದು ಸಾವಿರಾರು ರೂಪಾಯಿ ಬೆಳೆಗಳಿಗೆ ವಿಮ ಪಾವತಿಸಿ ಮಾಡಿದ ರೈತರಿಗೆ ಕಟ್ಟ ಕಾಲದಲ್ಲಿ ಸ್ಪಂಧಿಸಬೇಕಾದ ವಿಮಾ ಕಂಪನಿಗಳು ನಾಪತ್ತೆಯಾಗಿದ್ದಾವೆ . ಇವರನ್ನು ಹುಡುಕಿಕೊಟ್ಟು ರೈತರ ಸಮಸ್ಯೆಗಳಿಗೆ ಸ್ಪಂಧಿಸಬೇಕಾದ ಅಧಿಕಾರಿಗಳು ಸಹ ನಾಪತ್ತೆಯಾಗಿ ರೈತರನ್ನು ಸಂಕಷ್ಟಕ್ಕೆ ಸಿಲುಕಿ ಸಿದ್ದಾರೆಂದು ಆರೋಪ ಮಾಡಿದರು .
ಬೆಳೆ ನಷ್ಟ ವೀಕ್ಷಣೆ ಮಾಡಲು ವಿಶೇಷ ತಂಡ ರಚನೆ ಮಾಡಿ ಮುಂಗಾರು ಆರ್ಭಟಕ್ಕೆ ಸಿಲುಕಿರುವ ರೈತರನ್ನು ಸಂಕಷ್ಟದಿಂದ ಪಾರು ಮಾಡಲು ಸರ್ಕಾರಕ್ಕೆ ಅಂಕಿ ಅಂಶಗಳ ಪ್ರಕಾರ ನಷ್ಟವಾಗಿರುವ ಮಾವು , ಟೊಮೊಟೊ , ಮತ್ತಿತರ ವಾಣಿಜ್ಯ ಬೆಳೆಗಳನ್ನು ಅಧಿಕಾರಿಗಳು ಸಮೀಕ್ಷೆ ನಡೆಸಿ ಅಧಿಕಾರಿಗಳು ಸರ್ಕಾರಕ್ಕೆ ಜಿಲ್ಲಾಧಿಕಾರಿಗಳ ಮುಖಾಂತರ ನೀಡಬೇಕು. ಆದರೆ ತೋಟಗಾರಿಕೆ , ಕೃಷಿ , ಕಂದಾಯ ಅಧಿಕಾರಿಗಳ ಹಗ್ಗಾಜಗ್ಗಾಟದಲ್ಲಿ ರೈತರಿಗೆ ಸಮರ್ಪಕವಾದ ಬೆಳೆ ಪರಿಹಾರ ಸಿಗುತ್ತಿಲ್ಲ . ತಮಗೆ ಇಷ್ಟಬಂದ ಹಾಗೆ ಅಧಿಕಾರಿಗಳು ವರದಿ ನೀಡಿ ಅಕ್ರಮ ದಾಖಲೆಗಳ ಫಲಾನುಭವಿಗಳಿಗೆ ಪರಿಹಾರ ಸಿಗುತ್ತದೆ . ನಿಜವಾದ ರೈತರಿಗೆ ಸಿಗುತ್ತಿಲ್ಲ . ಇದು ಅಧಿಕಾರಿಗಳು ರೈತರಿಗೆ ಮಾಡುತ್ತಿರುವ ದ್ರೋಹವಾಗಿದೆ .
ಸರ್ಕಾರ ವಿಶೇಷ ತಂಡ ರಚನೆ ಮಾಡಬೇಕೆಂದು ಒತ್ತಾಯ ಮಾಡಿದರು. ಪ್ರತಿ ಎಕೆರೆಗೆ 5 ಲಕ್ಷ ಪರಿಹಾರ ನೀಡಿ ದುಬಾರಿಯಾಗಿರುವ ಕೃಷಿ ಕ್ಷೇತ್ರದಲ್ಲಿ ಒಂದು ಎಕರೆ ಬೆಳೆ ಮಾಡಲು ಒಂದುವರೆ ಲಕ್ಷ ಖರ್ಚು ಬರುತ್ತದೆ . ಆದರೆ ಸರ್ಕಾರ ಹಳೆ ಪದ್ಧತಿಯನ್ನು ಕೈಬಿಟ್ಟು ಈಗಿನ ದುಬಾರಿಯಾಗಿರುವ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ , ಬೆಳೆ ನಷ್ಟ ಪರಿಹಾರವಾಗಿ ಎರಡುವರೆ ಎಕರೆಗೆ 10 ಸಾವಿರ ಪರಿಹಾರ ಕನಿಷ್ಟ ಪಕ್ಷ ಒಂದು ದಿನದ ಕೂಲಿ ಸಹ ಬರುತ್ತಿಲ್ಲ .
ಇದನ್ನು ಕೈಬಿಟ್ಟು ಸರ್ಕಾರ ಪ್ರತಿ ಎಕರೆಗೆ 5 ಲಕ್ಷ ಪರಿಹಾರ ನೀಡ ಬೇಕೆಂದು ಮಾನ್ಯರಲ್ಲಿ ಮನ ವಿ ಮಾಡಿದರು . ಮನವಿ ಸ್ವೀಕರಿಸಿ ಮಾತನಾಡಿದ ತಾಲ್ಲೂಕು ದಂಡಾಧಿಕಾರಿ ಶರೀನಾ ತಾಜ್
ಅಕಾಲಿಕ ಮಳೆ ಸೃಷ್ಟಿ ಮಾಡಿರುವ ಅವಾಂತರ ಮತ್ತು ಬೆಳೆ ನಷ್ಟವರದಿಯನ್ನು ಸ೦ಬ೦ಧಪಟ್ಟ ಅಧಿಕಾರಿಗಳಿಂದ ತರಿಸಿಕೊಂಡು ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಕಳುಹಿಸಿ ಸಮಸ್ಯೆ ಬಗೆ ಹರಿಸುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ , ಜಿಲ್ಲಾಧ್ಯ ಐತಂಡಹಳ್ಳಿ ಮಂಜುನಾಥ , ಮಹಿಳಾ ಜಿಲ್ಲಾಧ್ಯಕ್ಷ ಎ. ನಳಿನಿಗೌಡ , ಆಲವಾಟ ಶಿವ , ಶೇಕ್ ಷಪಿವುಲ್ಲಾ , ಸಹದೇವಣ್ಣ , ಕೋಲಾರ ತಾ.ಅಧ್ಯಕ್ಷ ಈಕಂಬಳ್ಳಿ ಮಂಜುನಾಥ , ಮಂಗಸಂದ್ರ ತಿಮ್ಮಣ್ಣ , ವಕ್ಕಲೇರಿ ಹನುಮಯ್ಯ , ದ್ಯಾವಂಡಹಳ್ಳಿ ರಾಜಣ್ಣ , ರಮೇಶ , ಮಾಲೂರು ತಾಲ್ಲೂಕು ಅಧ್ಯಕ್ಷ ಯಲ್ಲಣ್ಣ , ಕೊಳ್ಳೂರು ವೆಂಕಟ್ , ರಾಜೇಂದ್ರ , ಆಚಂಪಲ್ಲಿ ಗಂಗಾಧರ , ವೆಂಕಟಸ್ವಾಮಿ ತೆರಹಳ್ಳಿ ರಮೇಶ್ , ನಾರಾಯಣಸ್ವಾಮಿ , ಆಂಜಿನಪ್ಪ , ಮುಂತಾದವರು ಇದ್ದರು .