ಶಿಕ್ಷಕರ ಕರ್ತವ್ಯ ಲೋಪದಿಂದ ಮುಚ್ಚಲಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಖಾಸಗಿಯವರ ವಾಸಸ್ಥಾನದಿಂದ ಬಿಡುಗಡೆ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ : ನೆಲವಂಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಟ್ಟುವಾರಿಪಲ್ಲಿ ಗ್ರಾಮದಲ್ಲಿ ಕಳೆದ 15 ವರ್ಷಗಳ ಹಿಂದೆ ಇದ್ದಂತಹ ಶಿಕ್ಷಕರ ಕರ್ತವ್ಯ ಲೋಪದಿಂದ ಮುಚ್ಚಲಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಖಾಸಗಿ ವ್ಯಕ್ತಿಗಳು ವಾಸ ಮಾಡುವ ಮೂಲಕ ಸರ್ಕಾರಿ ಶಾಲಾ ಕಟ್ಟಡವನ್ನು ತಮ್ಮ ಸ್ವಂತ ಆಸ್ತಿ ಎನ್ನುವಂತೆ ಜಾನುವಾರುಗಳ ಸಹಿತ ಕಾಲ ಕಳೆಯಲು ಮುಂದಾದರು.
ಈ ಬಗ್ಗೆ ಹಲವು ಬಾರಿ ಶಿಕ್ಷಣಾಧಿಕಾರಿಗಳಿಗೆ ಗ್ರಾಮಸ್ಥರು ದೂರು ನೀಡಿದ್ದರು ಖಾಸಗಿ ವ್ಯಕ್ತಿಗಳನ್ನು ಕಟ್ಟಡದಿಂದ ಖಾಲಿ ಮಾಡಿಸುವ ಕೆಲಸ ಮಾಡಲಿಲ್ಲ ಇದರಿಂದ ಬೇಸರವಾದ ಗ್ರಾಮಸ್ಥರು ಇತ್ತೀಚಿಗೆ ನೂತನವಾಗಿ ಅಧ್ಯಕ್ಷರಾದ ಗೌತಮಿಮುನಿರಾಜ್ ನೇತೃತ್ವದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಸರ್ಕಾರದ ಆಸ್ತಿ ಉಳಿಸುವ ಪ್ರಯತ್ನ ಮಾಡಿ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ , ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಪಂಚಾಯತಿ ಸಿಬ್ಬಂದಿ , ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಶಾಲಾ ಕಾಂಪೌಂಡ್ ಸರಿ ಪಡಿಸಿ ಶಾಲೆಯಲ್ಲಿ ಇದ್ದಂತಹ ಖಾಸಗಿ ವ್ಯಕ್ತಿಗಳನ್ನು ಖಾಲಿ ಮಾಡಿಸಲಾಯಿತು .
ಈ ಸಂದರ್ಭದಲ್ಲಿ ನೆಲವಂಕಿ
ಪಿಡಿಓ ಗೌಸ್ ಸಾಬ್ , ರಾಯಲಪಾಡು ಪಿ.ಎಸ್.ಐ. ನರಸಿಂಹಮೂರ್ತ, ಯುವ ಮುಖಂಡರಾದ ವಕೀಲ ಮುನಿರಾಜು , ಚಿಕ್ಕರಂಗೇಪಲ್ಲಿ ಸಿ.ಎಂ.ರಮೇಶ್ , ಬಿಡಿಗಾನಪಲ್ಲಿ ಸೋಮು , ಕೊತ್ತಪಲ್ಲಿ ರಘುನಾಥರೆಡ್ಡಿ , ಕೊಂಡಪ್ಪ , ಸುಬ್ರಮಣ್ಯಂ , ಸಿಬ್ಬಂದಿ ರಾಮಚಂದ್ರರಾವ್ , ಇತರರು ಇದ್ದರು .