

ಕೋಲಾರ ತಾಲ್ಲೂಕಿನ ಕ್ಯಾಲನೂರು ಕೆಪಿಎಸ್ ಶಾಲೆಯ ದೈಹಿಕ ಶಿಕ್ಷಕ ಡಾ.ಜಿ.ಎಂ.ಶ್ರೀನಿವಾಸ್ ಅವರು ಕ್ರೀಡಾಚಟುವಟಿಕೆಗಳಿಗೆ ನೆರವಾಗಲು ಬರೆದಿರುವ ನಾಲ್ಕು ಪುಸ್ತಕಗಳಾದ ಥ್ರೋಬಾಲ್ ನವೀನ ನಿಯಮಗಳು, ಕಬಡ್ಡಿ ನವೀನ ನಿಯಮಗಳು, ಕರಾಟೆ ಕೈಪಿಡಿ ಮತ್ತು ಸ್ಪರ್ಧಾತ್ಮಕ ಸಾಹಿತ್ಯ ಕೈಪಿಡಿಗಳನ್ನು ಮೂಡಬಿದರೆಯಲ್ಲಿ ನಡೆದ ರಾಜ್ಯಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ ಸಮ್ಮೇಳನದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಭಾಧ್ಯಕ್ಷ ಅಬ್ದುಲ್ ಖಾದರ್, ಎಂಎಲ್‍ಸಿ ಅರುಣ ಷಹಾಪುರ,ಪುಟ್ಟಣ್ಣ, ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಎಸ್.ಚೌಡಪ್ಪ, ಮುಡಬಿದರೆ ಭಾವನಾ ಮತ್ತಿತರರಿದ್ದರು.