

ಕುಂದಾಪುರ, ಮೇ.27; ಸಂತ ಮೇರಿ ಸಮೂಹ ಶಿಕ್ಷಣ ಸಂಸ್ಥೆಗಳು ಹಾಗು ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಗಳ ಸಹಯೋಗದಲ್ಲಿ ಶಿಕ್ಷಕರಿಗೆ ಆಯೋಜಿಸಿರುವ ಪುನರ್ಶ್ಚೆತನ ಕಾರ್ಯಗಾರವು ಶಾಲಾ ಸಭಾಂಗಣದಲ್ಲಿ ದಿನಾಂಕ 27/05/2025 ರಂದು ಪ್ರಾರ್ಥನ ಗೀತೆ ಹಾಗೂ ದೀಪ ಬೆಳಗಿಸುವುದರೊಂದಿಗೆ ಆರಂಭಗೊಂಡಿತು ಈ ಕಾರ್ಯಗಾರದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕರು ಸ್ಥಳೀಯ ಚರ್ಚಿನ ಪ್ರಧಾನ ಧರ್ಮಗುರುಗಳು ಅತೀ ವಂದನೀಯ ಗುರುಗಳಾದ ಪೌಲ್ ರೇಗೋ ವಹಿಸಿದ್ದರು.
ಪುನರ್ಶ್ಚೆತನ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಡಾ| ರಾಯನ್ ಮಥಾಯಸ್ ಇವರು ಹಲವಾರು ಚಟುವಟಿಕೆಗಳ ಮೂಲಕ ಶಿಕ್ಷಕರನ್ನು ಹುರಿದುಂಬಿಸಿ ಶಾಲೆಯಲ್ಲಿ ‘ಝೊನ್ ಆಲ್ಫಾ’ ಮಕ್ಕಳನ್ನು ಯಾವ ರೀತಿಯಲ್ಲಿ ನಡೆಸಿಕೊಳ್ಳಬೇಕು, ಅವರಿಗೆ ತಕ್ಕಂತೆ ಶಿಕ್ಷಕರು ತಮ್ಮ ಜ್ಞಾನವನ್ನು ಹೇಗೆ ವೃದ್ಧಿಸಿಕೊಳ್ಳಬೇಕು ಎಂಬುವುದರ ಬಗ್ಗೆ ಉತ್ತಮ ರೀತಿಯಲ್ಲಿ ಮಾಹಿತಿ ನೀಡಿದರು.
ಸಂತ ಮೇರಿ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಎಲ್ಲಾ ಶಿಕ್ಷಕರು ಈ ಕಾರ್ಯಗಾರದಲ್ಲಿ ಪಾಲ್ಗೊಂಡು ಇದರ ಸದುಪಯೋಗವನ್ನು ಪಡೆದುಕೊಂಡರು. ಈ ಕಾರ್ಯಗಾರವನ್ನು ಸಂತ ಮೇರಿ ಪ್ರೌಢಶಾಲೆಯ ಸಹ ಶಿಕ್ಷಕಿ ಸಿಸ್ಟರ್ ಚೇತನಾರವರು ನಿರೂಪಿಸಿದರು. ಸಂತ ಮೇರಿ ಸಯುಕ್ತ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ನಾಗರಾಜ್ ಶೆಟ್ಟಿ ಇವರು ಸ್ವಾಗತಿಸಿ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ಸಹ ಶಿಕ್ಷಕಿ ಪ್ರತಿಮಾ ಶೆಟ್ಟಿಯವರು ವಂದಿಸಿದರು.















