ಕೋಡಿಪಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷರಾಗಿ ರೆಡ್ಡಮ್ಮೆ, ಉಪಾಧ್ಯಕ್ಷರಾಗಿ ಮುನಿಯಮ್ಮ ಅವಿರೋಧವಾಗಿ ಆಯ್ಕೆ

ಶ್ರೀನಿವಾಸಪುರ 3 : ತಾಲೂಕಿನ ರಾಯಲ್ಪಾಡು ಹೋಬಳಿಯ ಕೋಡಿಪಲ್ಲಿ ಗ್ರಾಮಪಂಚಾಯಿತಿಗೆ ಸಂಬಂದಿಸಿದಂತೆ ನಡೆದ ಅಧ್ಯಕ್ಷ , ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ರೆಡ್ಡಮ್ಮೆ , ಕಾಂಗ್ರೆಸ್ ಬೆಂಬಲಿತ ಉಪಾಧ್ಯಕ್ಷರಾಗಿ ಮುನಿಯಮ್ಮ ರವರು ಅವಿರೋಧವಾಗಿ ಆಯ್ಕೆಯಾಗಿ ಗ್ರಾಮ ಪಂಚಾಯಿತಿಯು ಪುನಃ 2 ನೇ ಅವಧಿಗೆ ಕಾಂಗ್ರೆಸ್ ಮುಡಿಲು ಸೇರಿದೆ.
ಕೋಡಿಪಲ್ಲಿ ಗ್ರಾಮಪಂಚಾಯಿತಿಗೆ ಸಂಬಂದಿಸಿದಂತೆ ಒಟ್ಟು 16 ಸದಸ್ಯರಿದ್ದು, 14 ಕಾಂಂಗ್ರೆಸ್ ಬೆಂಬಲಿತ ಸದಸ್ಯರಿದ್ದು, 2 ಜೆಡಿಎಸ್ ಬೆಂಬಲಿತ ಸದಸ್ಯರಿದ್ದು ಗ್ರಾಮಪಂಚಾಯಿತಿ ಕಛೇರಿಯಲ್ಲಿ ಬುಧವಾರ 2ನೇ ಅವಧಿಗೆ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ರೆಡ್ಡಮ್ಮ ಹಾಗೂ ಅದೇ ಪಕ್ಷದ ಶಿಲ್ಪ ರವರು ನಾಮಪತ್ರ ಸಲ್ಲಿಸಿದ್ದರು ಕೊನೆಗಳಿಗೆಯಲ್ಲಿ ಶಿಲ್ಪ ರವರು ನಾಮಪತ್ರ ಹಿಂಪಡೆದ ಹಿನ್ನೆಲೆಯಲ್ಲಿ ರೆಡ್ಡಮ್ಮ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮುನಿಯಪ್ಪ ಒಬ್ಬರೇ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು ಈ ಹಿನ್ನೆಲೆಯಲ್ಲಿ ಮುನಿಯಪ್ಪ ರವರು ಸಹ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವಿಶೇಷವಾಗಿ ಅಧ್ಯಕ್ಷ , ಉಪಾಧ್ಯಕ್ಷ ಹಾಗು ಸದಸ್ಯರೆಲ್ಲರೂ ಸಹ ತಮ್ಮ ನಾಯಕರಾದ ಕೆ.ಆರ್.ರಮೇಶ್‍ಕುಮಾರ್‍ರವರ ಭಾವಚಿತ್ರಕ್ಕೆ ನಮಿಸಿ, ತಮ್ಮ ನಾಯಕನಿಗೆ ಜೈಕಾರಗಳನ್ನು ಕೂಗಿದರು.
ಚುನಾವಣಾ ಅಧಿಕಾರಿ ಎಂ.ಶ್ರೀನಿವಾಸನ್, ಪಿಡಿಒ ಆರ್.ವಿ.ರವಿಕುಮಾರ್, ಮುಖಂಡರಾದ ಕೋಡಿಪಲ್ಲಿ ಸುಬ್ಬಿರೆಡ್ಡಿ, ವಿಶ್ವನಾಥರೆಡ್ಡಿ, ಸಿಬ್ಬಂದಿಗಳಾದ ಈಶ್ವರ್, ಓಬಳೇಶ್ ಇದ್ದರು.