JANANUDI.COM NETWORK

ಕುಂದಾಪುರ,ಜ.29: ಕಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿಯ ಆಶ್ರಯದಲ್ಲಿ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ್, ಪ್ರಸಾದ್ ನೇತ್ರಾಲಯ ಉಡುಪಿ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂಧತ್ವ ನಿವಾರಣ ವಿಭಾಗ ಉಡುಪಿ, ಇವರ ಸಂಯೋಕತ್ವದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಮತ್ತು ಆಯುರ್ವೇದ ಸೌಂದರ್ಯ ಮಾಹಿತಿ ಹಾಗೂ ತಪಾಸಣೆ ಶಿಬಿರವು ಜನವರಿ 17 ರಂದು ಕುಂದಾಪುರ ಸಂತ ಮೇರಿಸ್ ಪಿ.ಯು.ಕಾಲೇಜ್ ಸಭಾಂಗಣದಲ್ಲಿ ನಡೆದಿತ್ತು. ಈ ಶಿಬಿರದಲ್ಲಿ ಭಾಗವಹಿಸಿದವರಲ್ಲಿ ಕನ್ನಡಕ ಅಗತ್ಯ ಇದ್ದವರಿಗೆ ರೆಡ್ ಕ್ರಾಸ್ ಸಂಸ್ಥೆ ಉಚಿತ ಕನ್ನಡಕಗಳನ್ನು ನೀಡಲಿದೆಯೆಂದು ರೆಡ್ ಕ್ರಾಸ್ ಸಂಸ್ಥೆ ಹೇಳಿತ್ತು.
ಇಂದು ಜನವರಿ 29 ರಂದು ಆ ಶಿಬಿರದ ಫಲಾನುಭವಿಗಳಿಗೆ ಕುಂದಪುರ ಜನೌಷಧಿ ಕೇಂದ್ರದ ಎದುರುಗಡೆ 70 ಜನರಿಗೆ ಕನ್ನಡಕಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಕುಂದಾಪುರ ರೆಡ್ ಕ್ರಾಸ್ ಸಂಸ್ಥೆಯ ಚೇಯರ್‍ಮೇನ್ ಎಸ್.ಜಯಕರ ಶೆಟ್ಟಿ,ಕಾರ್ಯದರ್ಶಿ ಸೀತಾರಾಮ್ ಶೆಟ್ಟಿ, ಖಜಾಂಚಿ ಶಿವರಾಮ್ ಶೆಟ್ಟಿ, ಮೇನೆಜ್‍ಮೆಂಟ್ ಕಮಿಟಿ ಸದಸ್ಯರಾದ ಡಾ|ಸೋನಿ ಡಿಕೋಸ್ತಾ, ಸೀತಾರಾಮ ನಕ್ಕತ್ತಾಯ,ಬಶೀರ್, ಎ.ಎಮ್.ಶೆಟ್ಟಿ, ಗಣೇಶ ಆಚಾರ್ಯ ಕುಂದಾಪುರ ವಲಯ ಕಥೊಲಿಕ್ ಸಭಾ ಅಧ್ಯಕ್ಷೆ ಮೇಬಲ್ ಡಿಸೋಜಾ, .ನಿಯೋಜಿತ ಅಧ್ಯಕ್ಷೆ ಶಾಂತಿ ಪಿರೇರಾ, ಮಾಜಿ ಕೇಂದ್ರಿಯ ಅಧ್ಯಕ್ಷ ಕಿರಣ್ ಕ್ರಾಸ್ತಾ, ಕುಂದಾಪುರ ಕಥೊಲಿಕ್ ಸಭಾದ ಅಧ್ಯಕ್ಷ ಬರ್ನಾಡ್ ಡಿಕೋಸ್ತಾ ಮತ್ತಿತರರು ಉಪಸ್ಥಿತರಿದ್ದರು.