JANANUDI NEWS NETWORK (EDITOR : BERNARD D’COSTA)

ಕುಂದಾಪುರ, ಜು. 9: ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ ಘಟಕ ದಿಂದ ಚೈತನ್ಯ ವಿಶೇಷ ಶಾಲೆಯ ಮಗುವಿಗೆ ಜು. 8 ರಂದು ರೂಪಾಯಿ 13,500/- ಬೆಲೆ ಬಾಳುವ ಶ್ರವಣ ಸಾಧನ ವನ್ನು ಸಭಾಪತಿ ಶ್ರೀ ಎಸ್. ಜಯಕರ ಶೆಟ್ಟಿ ಇವರು ಹಸ್ತಾಂತರಿಸಿದರು. ಈ ಕಾರ್ಯಕ್ರಮದಲ್ಲಿ ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯ ಕಾರಿ ಸಮಿತಿಯ ಸದಸ್ಯರುಗಳಾದ ಗಣೇಶ್ ಆಚಾರ್ಯ, ಡಾ. ಸೋನಿ, ಶಾಂತಾರಾಮ್ ಪ್ರಭು, ಸೀತಾರಾಮ ನಕ್ಕತ್ತಾಯ, ಸದಾನಂದ ಶೆಟ್ಟಿ, ಸತ್ಯನಾರಾಯಣ ಪುರಾಣಿಕ್ ಮತ್ತು ಅಬ್ದುಲ್ ಬಶೀರ್ ಉಪಸ್ಥಿತರಿದ್ದರು.