

ಕುಂದಾಪುರ. ದಿನದ ಎರಡನೇ ಕಾರ್ಯಕ್ರಮ:- ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಘಟಕ ದಿಂದ ಕಿಡ್ನಿ ಸಮಸ್ಯೆ ಯಿಂದ ಬಳಲುತ್ತಿದ್ದ ಕೋಟೇಶ್ವರದ ಗಣಪತಿ ದೇವಾಡಿಗ ಇವರಿಗೆ ಎಂಟು ಸಾವಿರ ರೂಪಾಯಿ ದೇಣಿಗೆ ನೀಡಲಾಯಿತು. ರೋಗಿಯ ಮಗಳು ಈ ದೇಣಿಗೆ ಯನ್ನು ಸ್ವೀಕರಿಸಿದರು. ಸಭಾಪತಿ ಎಸ್ ಜಯಕರ ಶೆಟ್ಟಿ ಇದನ್ನು ಹಸ್ತಾಂತರಿಸಿದರು. ಕಾರ್ಯಕ್ರಮ ದಲ್ಲಿ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಗಣೇಶ್ ಆಚಾರ್ಯ, ಶಾಂತಾರಾಮ್ ಪ್ರಭು, ನಾರಾಯಣ ದೇವಾಡಿಗ, ಸತ್ಯನಾರಾಯಣ ಪುರಾಣಿಕ ಮತ್ತು ಬಿ.ಎಮ್. ಚಂದ್ರಶೇಖರ ಉಪಸ್ಥಿತರಿದ್ದರು.
