ಇಂಟರ್‍ನೇಟ್ ಸಹಾಯ ಇಲ್ಲದೆ ಹಣ ಪಾವಾತಿ ಮಾಡುವ ನೂತನ ವ್ಯವಸ್ಥೆ ಆರ್.ಬಿ.ಐ. ಜಾರಿ ಮಾಡಿದೆ

JANANUDI.COM NETWORK


ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿ ಡಿಜಿಟಲ್ ವಹಿವಾಟುಗಳನ್ನು ಹೆಚ್ಚಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ಹೊಸ ಸೌಲಭ್ಯನ್ನು ಪರಿಚಯಿಸಿದೆ. ಪ್ರತಿ ವಹಿವಾಟಿಗೆ ರೂ 200 ವರೆಗೆ ಇ0ಟರ್ನೆಟ್ ಇಲ್ಲದೇ ಆಫ್ ಲೈನ್ ನಲ್ಲಿ ಪಾವತಿಗಳನ್ನು ಪಾವತಿಸಲು ಅನುಮತಿ ನೀಡಿದೆ. ಇದು ಒಟ್ಮಾರೆ ರೂ 2,000 ಮಿತಿಗೆ ಒಳಪಟ್ಟಿರುತ್ತದೆ ಎಂದು ತಿಳಿಸಿದೆ.
ಈ ಯೋಜನೆಯಡಿ ಕಾರ್ಡ್, ವ್ಯಾಲೆಟ್ ಬಳಸಿ ಒ0ದು ಬಾರಿಗೆ ಗರಿಷ್ಠ 200 ರು.ನ0ತೆ ಒ0ದು ದಿನಕ್ಕೆ ಗರಿಷ್ಠ 2000 ರೂ ಹಣ ವರ್ಗಾವಣೆ ಮಾಡಬಹುದು. ಎಸ್.ಎಮ್.ಎಸ್, ಕ್ಯುಆರ್ ಕೋಡ್ ಬಳಸಿ ಈ ರೀತಿ ಹಣ ವರ್ಗಾವಣೆ. ಮಾಡಬಹುದಾಗಿದೆ. ಜೊತೆಗೆ ಈ ರೀತಿಯ ಹಣ ವರ್ಗಾವಣೆಗೆ ದೃಢೀಕರಣದ ಹೆಚ್ಚುವರಿ ಅಂಶದ (ಎ ಎಫ್ ಎ) ಅಗತ್ಯವಿರುವುದಿಲ್ಲ ಎ0ದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.
ಸೆಪ್ಟ0ಬರ್ 2020 ರಿ0ದ ಜೂನ್ 2021 ರ ಅವಧಿಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ನಡೆಸಿದ ಆಫ್ ಲೈನ್ ವಹಿವಾಟಿನ ಪ್ರಾಯೋಗಿಕ ಪ್ರಯೋಗಗಳಿಂದ ಪಡೆದ ಉತ್ತೇಜಿತರಾಗಿ ಇದೇ ಫೆಮ್ರ್ವರ್ಕ್ ನಿಂದ ಇದು ಒಳಗೊಂಡಿದೆ ಎ0ದು ಅದು ಹೇಳಿದೆ. ಆಫ್ ಲೈನ್ ವಹಿವಾಟುಗಳು ಕಳಪೆ ಅಥವಾ ದುರ್ಬಲ ಇಂಟರ್ನೆಟ್ ಅಥವಾ ಟೆಲಿಕಾಂ ಸಂಪರ್ಕವಿರುವ ಪ್ರದೇಶಗಳಲ್ಲಿ, ವಿಶೇಷವಾಗಿ ಅರೆ-ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಡಿಜಿಟಲ್ ವಹಿವಾಟುಗಳಿಗೆ ಉತ್ತೇಜನವನ್ನು ನೀಡುತ್ತದೆ ಎ0ದು ನಿರೀಕ್ಷಿಸಿ. ಈ ನಿಯಮವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅನ್ನಯಿಸುತ್ತದೆ” ಎ0ದು ಆರ್.ಬಿ.ಐ. ಹೇಳಿದೆ.