

ಶಂಕರನಾರಾಯಣ :ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಮದರ್ ತೆರೇಸಾ ಮೆಮೋರಿಯಲ್ ಟ್ರಸ್ಟ್ (ರಿ )ಶಂಕರನಾರಾಯಣ ಪ್ರವರ್ತಿತ ಮದರ್ ತೆರೇಸಾ ಆಂಗ್ಲ ಮಾಧ್ಯಮ ಶಾಲೆಗೆ ಶಿಕ್ಷಣ ಕ್ಷೇತ್ರದಲ್ಲಿ ಹತ್ತು ಹಲವು ಪ್ರಶಸ್ತಿಯೊಂದಿಗೆ (ಜಿಲ್ಲಾಮಟ್ಟದ ಉತ್ತಮಶಿಕ್ಷಕ ಪ್ರಶಸ್ತಿ ಕಾರವಾರ ಮತ್ತು ಉಡುಪಿಜಿಲ್ಲೆ, ಆದರ್ಶಶಿಕ್ಷಕ ಉಡುಪಿಜಿಲ್ಲೆ, ಸಾಧಕ ಪ್ರಶಸ್ತಿ ಜೆ ಸಿ ಐ ಉಪ್ಪುಂದ,, ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಶುಭದಾ ಶಾಲೆಗಳು, ಹಾಗೂ ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೇರಳ ) ಸುದೀರ್ಘ 25ವರ್ಷಗಳ ಸೇವಾನುಭವ ಹೊಂದಿರುವ ಉಪ್ಪುಂದದ ಶ್ರೀ ರವಿದಾಸ್ ಶೆಟ್ಟಿ- MA, MEd. ನೂತನ ಮುಖ್ಯಶಿಕ್ಷಕರಾಗಿ ನೇಮಕಗೊಂಡಿರುತ್ತಾರೆ
ಆಯ್ಕೆಯಾದ ನೂತನ ಮುಖ್ಯಶಿಕ್ಷಕರಿಗೆ ಸಂಸ್ಥೆಯ ಆಡಳಿತಮಂಡಳಿ, ಬೋಧಕ ಮತ್ತು ಬೋಧಕೇತರ ವೃಂದ,ಪಾಲಕರು ಶುಭಕೋರಿರುತ್ತಾರೆ
ಮುಖ್ಯಶಿಕ್ಷಕರಾಗಿ ಅಧಿಕಾರ ಸ್ವೀಕರಿಸಿದ ಶ್ರೀ ರವಿದಾಸ್ ಶೆಟ್ಟಿ
ಸಂಸ್ಥೆಯ ಸರ್ವತೋಮುಖ ಏಳಿಗೆಗಾಗಿ ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಸೇವೆಸಲ್ಲಿಸುವುದಾಗಿ ಸಂಸ್ಥೆಯ
ಆಡಳಿತಮಂಡಳಿಗೆ ಭರವಸೆ ನೀಡಿರುತ್ತಾರೆ