

ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ಬ್ರಹ್ಮರಥೋತ್ಸವ ಮಾ. 30 ರಂದು ಶ್ರೀ ರಾಮನವಮಿಯಂದು ಜರುಗಲಿದೆ.
ರಥೋತ್ಸವ ಸಂಬಂಧ ಮಾ. 26 ರಿಂದ ಕಾರ್ಯಕ್ರಮಗಳು ನಡೆಯುತ್ತಿದ್ದು 30 ರಂದು ಗುರುವಾರ ಬೆಳಿಗ್ಗೆಯಿಂದ ಪಂಚಮೃತ ಅಭಿಷೇಕ, ಕನಕಾಭಿಷೇಕ, ತುಲಾಭಾರ, ಮಹಾಪೂಜೆ, ಮಹಾಬಲಿ ಪ್ರಧಾನ ನಡೆದು ಸಂಜೆ ಬ್ರಹ್ಮರಥಾರೋಹಣ ನಡೆಯಲಿದೆ ನಂತರ ರಾತ್ರಿ ಬ್ರಹ್ಮರಥೋತ್ಸವ ಜರುಗಲಿರುವುದು.
ಮಾರ್ಚ್ 31 ರಂದು ಓಕುಳಿ ಸಂಭ್ರಮದ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳು, ಓಕುಳಿ ಉತ್ಸವ, ಚೂರ್ಣೋತ್ಸವ, ಅವಭೃತ ಸ್ನಾನ, ಧ್ವಜಾರೋಹಣ ಹಾಗೂ ರಾತ್ರಿ ಮೃಗಬೇಟೆ ಉತ್ಸವ ಜರುಗಲಿದೆ ಎಂದು ಆಡಳಿತ ಮೊಕ್ತೇಸರ ಕೆ. ರಾಧಾಕೃಷ್ಣ ಶೆಣೈ ತಿಳಿಸಿದ್ದು, ರಥೋತ್ಸವಕ್ಕೆ ಸರ್ವರನ್ನು ಆಹ್ವಾನಿಸಿದ್ದಾರೆ.