ಉಡುಪಿ ಜಿಲ್ಲಾ ಇಂಟೆಕ್ ಸಮಿತಿಯ ಪದಗ್ರಹಣ ಕಾರ್ಯಕ್ರಮವು ಜಿಲ್ಲಾ ಕಾಂಗ್ರೆಸ್ ಭವನದಲ್ಲಿ INTUC ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಕೇಶ್ ಮಲ್ಲಿ ಅವರ ಉಪಸ್ಥಿತಿಯಲ್ಲಿ ನಡೆಯಿತು ಪದಗ್ರಹಣವನ್ನು ನೆರವೇರಿಸಿದ ರಾಕೇಶ್ ಮಲ್ಲಿ ಅವರು ಮಾತನಾಡುತ್ತಾ ಮುಂದಿನ ದಿನಗಳಲ್ಲಿ ಎಲ್ಲಾ ಬೂತು ಗಳಲ್ಲಿಯೂ ಸಮಿತಿಗಳನ್ನು ರಚಿಸಿ ಸಂಘಟನೆಯನ್ನು ಬಲಾಢ್ಯಗೊಳಿಸಬೇಕು ಇದರಿಂದ ಜಿಲ್ಲೆಯ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸಲು ಅನುಕೂಲವಾಗುವುದು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಮಾತನಾಡುತ್ತಾ ಜಿಲ್ಲಾ ಇಂಟಕ್ ಸಮಿತಿಯ ರಚನೆಯೊಂದಿಗೆ ಸಂಘಟನೆಯು ಮುಂದಿನ ದಿನಗಳಲ್ಲಿ ಬಲಾಡ್ಯಗೊಂಡು ಕಾರ್ಮಿಕರ ಪ್ರತಿಯೊಂದು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾ ಕಾರ್ಮಿಕರ ಸಮಸ್ಯೆಯನ್ನು ನಿವಾರಿಸುವಂತಾಗಲಿ ಎಂದು ಹಾರೈಸಿದರು. ಜಿಲ್ಲಾ ಇಂಟಕ್ ಘಟಕದ ಅಧ್ಯಕ್ಷರಾದ ಕಿರಣ್ ಹೆಗ್ಡೆ ಅವರು ಮಾತನಾಡುತ್ತಾ ಈಗಾಗಲೇ ಜಿಲ್ಲಾ ಸಮಿತಿ ಹಾಗೂ ಜಿಲ್ಲೆಯ 10 ಬ್ಲಾಕ್ ಗಳಿಂದಲೂ ಸಮಿತಿಗಳನ್ನು ರಚಿಸಲಾಗಿದೆ ಕಾರ್ಮಿಕರನ್ನು ಒಗ್ಗೂಡಿಸಿಕೊಂಡು ಅವರ ಸಮಸ್ಯೆಯನ್ನು ಪರಿಹರಿಸುವಲ್ಲಿ ಸಂಘಟನೆ ತೊಡಗಿಸಿಕೊಳ್ಳುತ್ತದೆ ಎಂದರು.
ಸಮಾರಂಭದಲ್ಲಿ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ˌಪಕ್ಷದ ಮುಖಂಡರಾದ ಸುಧಿರ್ ಕುಮಾರ್ ಮುರೋಳಿ ˌ ಪ್ರಸಾದ್ ರಾಜ್ ಕಾಂಚನ್ ನೀರೇ ಕೃಷ್ಣಶೆಟ್ಟಿ ˌ ಬ್ಲಾಕ್ ಅಧ್ಯಕ್ಷರುಗಳಾದ ನವೀನ್ ಶೆಟ್ಟಿ ˌಸತೀಶ್ ಸರ್ವೇಗಾರ್ ˌಚಂದ್ರ ಪೂಜಾರಿ ಕೋಟˌ ಚಂದ್ರ ಅಮೀನ್ ಕುಂದಾಪುರ ˌ ಸುಜಿತ್ ಜಾನ್ˌ ವಾಸುದೇವ ಪೈ ˌ ದಿವಾಕರ್ ನಿಟ್ಟೆ ˌ ಸುಮನ್ ಬೋಳಾರ್ ˌ ಉಮೇಶ್ ಕಾಂಚನ್’ ರಾಘವೇಂದ್ರ ಕೊಟ್ಟಾರಿ ˌಗುರು ˌರೋಷನ್ ಶೆಟ್ಟಿ ಉಪಸ್ಥಿತರಿದ್ದರು ˌ ರಫೀಕ್ ಅಹ್ಮದ್ ಸ್ವಾಗತಿಸಿ ಶ್ರೀಮತಿ ಜ್ಯೋತಿ ಹೆಬ್ಬಾರ್ ಕಾರ್ಯಕ್ರಮ ನಿರ್ವಹಿಸಿದರು