ವರದಿ : ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೋಲಾರ :ಕೋಲಾರ ಜಿಲ್ಲೆಯನ್ನ ಕಡೆಗಣಿಸಿದ ರಾಜ್ಯ ಬಿಜೆಪಿ ಸರ್ಕಾರ ಉಸ್ತುವಾರಿ ಮಂತ್ರಿಯಿಲ್ಲ, ಜಿಲ್ಲಾಧಿಕಾರಿ ನೇಮಕ ಆಗಿಲ್ಲ ಕೊರೋನಾ ನಿಯಂತ್ರಿಸುವಲ್ಲಿ ಸರ್ಕಾರ ವಿಫಲ ಕೋಲಾರ ತಾಲೂಕು ಜೆಡಿಎಸ್ ಅಧ್ಯಕ್ಷ ಕುರ್ಕಿ ರಾಜೇಶ್ವರಿ ಆರೋಪ ಮಾಡಿದ್ದಾರೆ-
ಕೋಲಾರ ಜಿಲ್ಲೆಯಲ್ಲಿ ಕೊರೋನ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು , ಇದರ ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವರು ಆಗಮಿಸದೆ ಇರುವುದು ದುರದೃಷ್ಟ ಸಂಗತಿ . ರಾಜ್ಯ ಬಿಜೆಪಿ ಸರ್ಕಾರಕ್ಕೆ ಕೋಲಾರ ಜಿಲ್ಲೆಯ ಬಗ್ಗೆ ಕಾಳಜಿಯಿಲ್ಲ ಎಂದು ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಕುರ್ಕಿ ರಾಜರಾಜೇಶ್ವರಿ ಆರೋಪಿಸಿದರು . ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು , ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಜಿಲ್ಲೆಗೆ ಧ್ವಜಾರೋಹಣಕ್ಕೆ ಸಿಮೀತವಾಗಿ ಉಸ್ತುವಾರಿ ಸಚಿವರನ್ನು ನೇಮಕ ಮಾಡಲಾಗುತ್ತಿದೆ . ಕೊರೋನ ನಿಯಂತಣಕ್ಕೆ ನೇಮಕಗೊಂಡಿರುವ ಸಚಿವ ಮುನಿರತ್ನ ಮೂರನೆ ಆಶೆ ಆರಂಭವಾದಾಗಿನಿಂದ ಇತ್ತ ತಲೆ ಹಾಕದೆ ಇರುವುದು ಜಿಲ್ಲೆಯನ್ನು ಕಡೆಗಣಿಸಿರುವುದು ಸ್ಪಷ್ಟವಾಗಿ ಕಾಣುತ್ತಿದೆ ಎಂದರು . ಕಳೆದ ಕೆಲ ತಿಂಗಳುಗಳ ಹಿಂದೆ ಸುರಿದ ಮಳೆಯಿಂದಾಗಿ ತೋಟಗಾರಿಕೆ , ಕೃಷಿ ಬೆಳೆಗಳು ಸುಮಾರು ಹೆಕ್ಟೇರ್‌ಗಳಷ್ಟು ನಾಶವಾಗಿದೆ . ಮುನಿರತ್ನ ಅವರು ತೋಟಗಾರಿಕೆ ಸಚಿವರಾಗಿದ್ದರಿಂದ ಜಿಲ್ಲೆಯ ರೈತರ ಸಮಸ್ಯೆಗಳು ಬೆಗೆಹರಿಯುತ್ತವೆ ಎಂಬ ನಿರೀಕ್ಷೆಯಿತ್ತು . ಆದರೆ ಬೆಳೆ ಹಾನಿ ವೀಕ್ಷಣೆಗೆ ರಾಜ್ಯದ ಮುಖ್ಯಮಂತಿಗಳು ಜಿಲ್ಲೆಗೆ ಆಗಮಿಸಿದಾಗ ಮುನಿರತ್ನ ಆಗಮಿಸಿದ್ದರು . ಆದರೆ ಇದುವರೆಗೂ ತೋಟಗಾರಿಕೆ ಅಧಿಕಾರಿಗಳ ಸಭೆಯನ್ನು ಕರೆದಿಲ್ಲ ಎಂದರೆ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಗಮನ ಹರಿಸುತ್ತಿದ್ದಾರೆ ಎಂಬುದು ಅರ್ಥವಾಗುತ್ತದೆ ಎಂದು ದೂರಿದರು .
ಉಸ್ತುವಾರಿ ಸಚಿವರಾಗಿ ಮುನಿರತ್ನ ನೇಮಕಗೊಂಡ ಮೇಲೆ ಕೊರೋನ ನಿಯಂತ್ರಣ ಸಂಬಂಧ ಹಮ್ಮಿಕೊಂಡಿದ್ದ ಸಭೆಗಳನ್ನು ಹೊರತು ಪಡಿಸಿದರೆ ಪ್ರಗತಿ ಪರಿಶೀಲನಾ ಸಭೆ ನಡೆಸಿಲ್ಲ . ಮುಂದಿನ ತಿಂಗಳು ರಾಷ್ಟ್ರೀಯ ಮತ್ತು ರಾಜ್ಯ ಬಜೆಟ್ ಅಧಿವೇಶನ ನಡೆಯಲಿದೆ . ಆದರೆ ಜಿಲ್ಲೆಯಲ್ಲಿ ಇದುವರೆಗೂ ಅಭಿವೃದ್ಧಿ ಕೆಲಸಗಳಿಗೆ ಅಗತ್ಯವಾಗಿ ಬೇಕಾಗಿರುವ ಕ್ರಿಯಾ ಯೋಜನೆ ಸಂಬಂಧ ಸಭೆ ಕರೆದಿಲ್ಲ . ಸರ್ಕಾರಕ್ಕೆ ಜಿಲ್ಲೆಯ ಮೇಲೆ ಕಾಳಜಿಯಿದ್ದರೆ ಅಧಿಕೃತ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಲಿ ಎಂದು ಸಲಹೆ ನೀಡಿದರು . ಜಿಲ್ಲೆಯಲ್ಲಿ ಪಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿಯನ್ನು ಸರ್ಕಾರ ವರ್ಗಾವಣೆ ಮಾಡಿ ನಾಲೈದು ದಿನಗಳು ಕಳೆದರು ಖಾಲಿಯಾಗಿರುವ ಹುದ್ದೆಗೆ ಜಿಲ್ಲಾಧಿಕಾರಿಗಳನ್ನು ನೇಮಕ ಮಾಡುವ ಪಯತ್ನ ಸಹ ಸರ್ಕಾರ ಮಾಡಿಲ್ಲ . ಇನ್ನು ಉಲ್ಬಣಗೊಳ್ಳುತ್ತಿರುವ ಕೊರೋನ ಸೋಂಕನ್ನು ನಿಯಂತಣ ಮಾಡಲು ಹೇಗೆ ಸಾಧ್ಯ . ಜನ ಸಾಮಾನ್ಯರನ್ನು ದಿಕ್ಕು ತಪ್ಪಿಸುವ ಹೇಳಿಕೆಗಳನ್ನು ಸಚಿವ ಸಂಪುಟದ ಸಚಿವರೇ ನೀಡುತ್ತಿದ್ದಾರೆ . ಕೊರೋನ ನಿಯಂತಣ ವಿಚಾರದಲ್ಲಿ ಸರ್ಕಾರಕ್ಕೆ ಬದ್ಧ ನಿಲುವು ಇಲ್ಲವಾಗಿದೆ ಎಂದು ಟೀಕಿಸಿದರು.
ಮೂರನೆ ಅಲೆಯು ಹೆಚ್ಚಾಗಿ ಮಕ್ಕಳ ಮೇಲೆ ಪರಿಣಾಮ ಬೀರುತ್ತಿರುವ ಬಗ್ಗೆ ತಜ್ಞರು ಅಭಿಪ್ರಾಯ ತಿಳಿಸಿದ್ದಾರೆ . ಸರ್ಕಾರ ಕೆಲ ದಿನಗಳ ಕಾಲ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಮಕ್ಕಳನ್ನು ಕೊರೋನ ಮುಕ್ತರನ್ನಾಗಿಸಲು ಕ್ರಮಕೈಗೊಳ್ಳಬೇಕು ಎಂದು ಸಲಹೆ ನೀಡಿದರು .