ಶ್ರೀನಿವಾಸಪುರ.ಸೆ,13: ಬಡವರ ಅನ್ನ ಹಾಗೂ ಮಾಂಗಲ್ಯವನ್ನು
ಕಿತ್ತುಕೊಳ್ಳುತ್ತಿರುವ ಗ್ರಾಮೀಣ ಪ್ರದೇಶದ ಅಕ್ರಮ
ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಲ್ಲಿ ವಿಫಲವಾಗಿರುವ ಅಬಕಾರಿ
ಇಲಾಖೆಯ ಬಡ ವಿರೋಧಿ ನೀತಿಯನ್ನು ಖಂಡಿಸಿ ದಿನಾಂಕ: 17-09-2022
ರಂದು ಮಾಂಗಲ್ಯಗಳ ಸಮೇತ ಅಬಕಾರಿ ಕಚೇರಿ ಮುತ್ತಿಗೆ
ಹಾಕಲು ಪ್ರವಾಸಿ ಮಂದಿರದಲ್ಲಿ ಕರೆದಿದ್ದ ರೈತ ಸಂಘದ
ಸಭೆಯಲ್ಲಿ ತೀರ್ಮಾನಿಸಲಾಯಿತು.
ಕಿಲೋಮೀಟರ್ ಗಟ್ಟಲೆ ಅಲೆದಾಡಿದರು ಹನಿ ನೀರು ಸಿಗದೆ
ಇರಬಹುದು ಆದರೆ ದಿನದ 24 ಗಂಟೆ ಗ್ರಾಮೀಣ ಪ್ರದೇಶದ ದಿನಸಿ
ಅಂಗಡಿಗಳಲ್ಲಿ ಗಲ್ಲಿಗಲ್ಲಿಯಲ್ಲೂ ಅಕ್ರಮ ಮದ್ಯ ಮಾರಾಟ
ಮಾಡುವ ಮುಖಾಂತರ ಗ್ರಾಮೀಣ ಪ್ರದೇಶದಲ್ಲಿ ಅಶಾಂತಿ ಹಾಗೂ
ಬಡವರ ಅನ್ನವನ್ನು ಅಬಕಾರಿ ಇಲಾಖೆ ಅಧಿಕಾರಿಗಳೇ
ಕಸಿದುಕೊಳ್ಳುತ್ತಿದ್ದಾರೆ. ಮಹಿಳಾ ಜಿಲ್ಲಾಧ್ಯಕ್ಷ ಎ.ನಳಿನಿಗೌಡ
ಅವ್ಯವಸ್ಥೆ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.
ಎರಡು ವರ್ಷ ಸಾಂಕ್ರಾಮಿಕ ರೋಗಗಳಿಂದ ತತ್ತರಿಸಿ
ದುಡಿಯುವ ಕೈಗೆ ಕೆಲಸವಿಲ್ಲದೆ ಮಕ್ಕಳ ವಿದ್ಯಾಭ್ಯಾಸ ಹಿರಿಯರ
ಆರೋಗ್ಯಕ್ಕೆ ಖಾಸಗಿ ಸಾಲ ಮಾಡಿದ ಹಣ ತೀರಿಸುವ ಸಮಯದಲ್ಲಿ
ಗಲ್ಲಿಗಲ್ಲಿಯಲ್ಲೂ ಅಕ್ರಮ ಮದ್ಯ ಮಾರಾಟಕ್ಕೆ ಅಕ್ರಮ
ಪರವಾನಿಗೆ ನೀಡುವ ಮುಖಾಂತರ ಸರ್ಕಾರ ನಡೆಯಬೇಕಾದರೆ
ಅಬಕಾರಿ ಇಲಾಖೆಯ ಆದಾಯ ಹೆಚ್ಚಾಗಬೇಕೆಂಬ ಸರ್ಕಾರದ
ಆದೇಶಕ್ಕೆ ಅಬಕಾರಿ ಇಲಾಖೆ ಅಧಿಕಾರಿಗಳು ಗ್ರಾಮೀಣ ಪ್ರದೇಶ
ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ
ಕುಮ್ಮಕ್ಕು ನೀಡುವ ಮೂಲಕ ಅಬಕಾರಿ ಇಲಾಖೆ ಚಿನ್ನದ ಮೊಟ್ಟೆ
ಇಡುವ ಇಲಾಖೆಯಾಗಿ ಮಾರ್ಪಟ್ಟಿದೆ ಎಂದು ಆರೋಪ ಮಾಡಿದರು.
ಅಕ್ರಮ ಮದ್ಯ ಮಾರಾಟ ತಡೆಯಬೇಕಾದರೆ ಅಧಿಕಾರಿಗಳಿಗೆ
ಬಡ ಕೂಲಿ ಕಾರ್ಮಿಕರು ದೂರು ನೀಡಿದರೆ ನೆಪಮಾತ್ರಕ್ಕೆ ದಾಳಿ
ಮಾಡಿ ದಂಡ ವಿಧಿಸಿ, ಪತ್ರಿಕಾ ಮಾದ್ಯಮಕ್ಕೆ ಪೊಟೋ ನೀಡಿ ಆ
ನಂತರ ಯಥಾಸ್ಥಿತಿ ಮಾರಾಟ ಮಾಡಲು ಅವಕಾಶ ನೀಡುತ್ತಾರೆಂದು
ಆಕ್ರೋಷ ವ್ಯಕ್ತಪಡಿಸಿದರು.
ರಾಜ್ಯ ಸಂಚಾಲಕ ಬಂಗವಾದಿ ನಾಗರಾಜ್‍ಗೌಡ ಮಾತನಾಡಿ ಅಬಕಾರಿ
ಅಧಿಕಾರಿಗಳಿಗೆ ಹಣ ನೀಡಿದರೆ ಬಂಗಾರಪೇಟೆ ತಾಲ್ಲೂಕಿನಲ್ಲಿ ಮಾರಾಟ
ಮಾಡುತ್ತಾರೆ. ನಿಯಮವನ್ನು ಉಲ್ಲಂಘನೆ ಮಾಡಿ ಮದ್ಯದ ಅಂಗಡಿ
ಮಾಲೀಕರು ದಿನದ 24 ಗಂಟೆ ರಾಜ್ಯ ರೋಷವಾಗಿ ಮದ್ಯ ಮಾರಾಟ
ಮಾಡುವ ಮುಖಾಂತರ ಕೂಲಿ ಮಾಜಿ ಜೀವನ ಮಾಡುತ್ತಿರುವ
ಬಡವರು ದುಡಿದ ಹಣವನ್ನು ಮದ್ಯದ ಅಂಗಡಿಗೆ ಅಡಹಿಟ್ಟು ಮನೆಗೆ
ಹೋಗಿ ಹೆಂಡತಿ ಮಕ್ಕಳನ್ನು ಒಡೆಯುವ ಜೊತೆಗೆ
ಕೊಲೆಗಳಾಗಿರುವುದು ಉದಾಹರಣೆಗಳು ಬೇಕಾದಷ್ಟು
ಇದ್ದರೂ ಇದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ತಿಂಗಳ ಮಾಮೂಲಿ
ಪಡೆದುಕೊಳ್ಳುವ ಮುಖಾಂತರ ಅಕ್ರಮ ಮದ್ಯ ಮಾರಾಟ
ಅಧಿಕಾರಿಗಳ ನೆರಳಿನಲ್ಲಿ ನಡೆಯುತ್ತಿದೆ ಎಂದು ಕಿಡಿಕಾಡಿದರು.
ಗ್ರಾಮೀಣ ಪ್ರದೇಶದ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ
ಹಾಕಿ ಬಡವರ ಅನ್ನ ಹಾಗೂ ಮಾಂಗಲ್ಯವನ್ನು ಉಳಿಸಿಕೊಡುವಂತೆ
ಅಬಕಾರಿ ಅಧಿಕಾರಿಗಳನ್ನು ಒತ್ತಾಯಿಸಿ ದಿನಾಂಕ: 17-09-2022 ರ ಶನಿವಾರ
ಮಾಂಗಲ್ಯಗಳ ಸಮೇತ ಅಬಕಾರಿ ಇಲಾಖೆ ಮುತ್ತಿಗೆ ಹಾಕುವ
ವಿಚಾರವನ್ನು ಸಭೆಯಲ್ಲಿ ತೀರ್ಮಾನಿಸಲಾಯಿತೆಂದರು.
ಸಭೆಯಲ್ಲಿ ತಾಲ್ಲೂಕಾದ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ, ರಾಜ್ಯ
ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಕೋಟೆ ಶ್ರೀನಿವಾಸ್, ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ
ಹನುಮಯ್ಯ, ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ, ಗೀರೀಶ್,
ಮುನ್ನಾ, ಹರೀಶ್, ಯಲ್ಲಪ್ಪ, ಮಂಗಸಂದ್ರ ತಿಮ್ಮಣ್ಣ,
ವೆಂಕಟೇಶಪ್ಪ, ಸುಪ್ರೀಂಚಲ, ಬಂಗಾರಿ ಮಂಜು, ಜುಬೇರ್ ಪಾಷ,
ಪಾರುಕ್‍ಪಾಷ, ರಾಮಸಾಗರ ವೇಣು ಸಂದೀಪ್‍ರೆಡ್ಡಿ, ಸಂದೀಪ್‍ಗೌಡ,
ಕಿರಣ್, ವೆಂಕಟರವಣಪ್ಪ ನಾಗಯ್ಯ , ಮುನಿರಾಜು, ಮುನಿಕೃಷ್ಣ
ಮುಂತಾದವರು ಇದ್ದರು.