JANANUDI NEWS NETWORK (EDITOR : BERNARD D’COSTA)

ಕುಂದಾಪುರ: ಉಡುಪಿ ಜಿಲ್ಲೆಯದ್ಯಾಂತ ಮಳೆ ಅವಾಂತರ ಮನೆ ಹಟ್ಟಿಗಳು ಜಲಾವ್ರತ ನದಿ ಹೊಳೆಗಳು ಉಕ್ಕಿ ಹರಿಯುತ್ತಿವೆ. ಉಡುಪಿ ಜಿಲ್ಲೆಯ ಸೌಪರ್ಣಿಕ ನದಿ ಉಕ್ಕಿ ಹರಿಯುತ್ತದೆ. ಜಲಾವೃತಗೊಂಡಿರುವ ಬೈಂದೂರು ತಾಲ್ಲೂಕಿನ ನಾವುಂದದಲ್ಲಿ ನೆರೆ ಉಂಟಾಗಿದೆ. ಮಲೆನಾಡಿನ ತಪ್ಪಲಿನಲ್ಲಿ ನಿರಂತರ ಮಳೆ. ಸುರಿಯುತ್ತಿರುವುದರಿಂದ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ನಾವುಂದದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. 100ಕ್ಕೂ ಹೆಚ್ಚು ಮನೆಗಳು ಭಾಗಶಃ ಮುಳುಗಡೆಯಾಗಿವೆ. ಜೊತೆಗೆ ಸಾವಿರಾರು ಹೇಕ್ಟೆರ್ ವ್ಯವಸಾಯ ಭೂಮಿ ಮುಳುಗಡೆಯಾಗಿ ಆತಂಕಕಾರಿ ಸ್ಥಿತಿ ಎದುರಾಗಿದೆ.
ಜಿಲ್ಲಾಡಳಿತ ನೆರೆ ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯ ಮುಂದುವರಿಸಿದೆ. ಆದರೆ, ಬಹುತೇಕರು ಕಾಳಜಿ ಕೇಂದ್ರಗಳಿಗೆ ತೆರಳಲು ಒಪ್ಪುತ್ತಿಲ್ಲ. ಪ್ರತಿ ವರ್ಷ ನೆರೆ ಬಂದು ಗ್ರಾಮ ನಲುಗುತ್ತಿದ್ದರೂ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಬದಲು ತಾತ್ಕಾಲಿಕ ವ್ಯವಸ್ಥೆ ಮಾದುವುದಿಲ್ಲ ಎಂದು ಅಧಿಕಾರಿಗಳ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ. ಮರವಂತೆಯ ತೀರ ಪ್ರದೇಶದಲ್ಲಿ ಕಡಲ್ಕೊರೆತ ಹೆಚ್ಚಾಗಿದ್ದು ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ತೀರದಲ್ಲಿರುವ ತೆಂಗಿನ ಮರಗಳು ಸಮುದ್ರಕ್ಕೆ ಆಹುತಿಯಾಗುತ್ತಿವೆ. ಕಡಲ್ಕೊರೆತ ತಡೆಗೆ ಸ್ಥಳೀಯರು ಮರಳಿನ ಚೀಲಗಳ ದಿಬ್ಬಗಳನ್ನು ಹಾಕಿದ್ದು, ಅಲೆಗಳ ಹೊಡೆತಕ್ಕೆ ಸಮುದ್ರ ಪಾಲಾಗುತ್ತಿವೆ.
ಬ್ರಹ್ಮಾವರ ತಾಲ್ಲೂಕಿನಲ್ಲಿ ಮಡಿಸಾಲು ಹೊಳೆ ಉಕ್ಕಿ ಹರಿದು ಆರೂರು ಉಪ್ಪೂರು ಬೆಳ್ಮಾರು ಗ್ರಾಮಗಳಲ್ಲಿ ನೆರೆ ಬಂದಿತ್ತು. ಬಳಿಕ ಸೆರೆ ತಗ್ಗಿದೆ. ನೀಲಾವರ, ಬಾವಲಿಕುದ್ರು, ಕೂರಾಡಿ, ಬಾರ್ಕೂರು ಪ್ರದೇಶದಲ್ಲಿ ಸೀತಾನದಿ ಉಕ್ಕಿ ಮನೆಗಳು, ಕೃಷಿ ಭೂಮಿ ಜಲಾವೃತ ಗೊಂಡಿದೆ. ಜುಲೈ 9ರಂದು ಭಾರಿ ಮಳೆಯಾಗಲಿದೆ ಎಂದು. ಹವಾಮಾನ ಇಲಾಖೆ ರೆಡ್ ಅಲರ್ಟ್ ಮುನ್ಸೂಚನೆ ನೀಡಿದೆ. ಶಿರೂರಿನಲ್ಲಿ 25.6 ಸೆಂ.ಮೀ, ಗೋಳಿಹೊಳೆಯಲ್ಲಿ 25.4 ಸೆಂ.ಮೀ ಮಳೆಯಾಗಿದೆ.
ಉಡುಪಿ ಜಿಲ್ಲೆಯಲ್ಲಿ ಜು.೧೦ ರ ತನಕ ರೇಡ್ ಅಲರ್ಟ್, ಮತ್ತು ೧೧, ೧೨ ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಮುಂದಿನ ೪೮ ಗಂಟೆ ಭಾರಿ ಮಳೆಯಾಗುವ ಸಂಭವ ಇದೆಯೆಂದು ಹವಾಮನ ಇಲಾಖೆ ಎಚ್ಚರಿಸಿದೆ. ಉಡುಪಿ, ದ.ಕ, ಉ.ಕ ಈ ಮೂರು ಜಿಲ್ಲೆಗಳಲ್ಲಿ ೨೦೦ ಕ್ಕೂ ಹೆಚ್ಚು ಮಳೆಯಾಗುವಸೂಚನೆ ನೀಡಿದೆ..ಮಿನುಗಾರರು, ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಜಾಗ್ರತೆ ನೀಡಿದ್ದಾರೆ. ಜನ ಸಾಮನ್ಯರು ತಗ್ಗು ಪ್ರದೇಶಗಳಿಗೆ ಹೋಗಬಾರದೆಂದು ಎಚ್ಚರಿಸಿದ್ದಾರೆ.





