

ಶ್ರೀನಿವಾಸಪುರ 3 : ರೈಲ್ವೆ ಕೋಚ್ , ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಕ್ಯಾನ್ಸರ್ ಆಸ್ಪತ್ರೆ ಸುಳ್ಳ ಅಶ್ವಾಸನೆ ನೀಡಿ ಕ್ಷೇತ್ರ ಜನತೆಗೆ ಮೋಸ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಟೀಕಿಸಿದರು.
ತಾಲೂಕಿನ ಸೋಮಯಾಜಪಲ್ಲಿ ಗ್ರಾಮದಲ್ಲಿ ಮಂಗಳವಾರ ಜೆಡಿಎಸ್ ಪಕ್ಷದಿಂದ ರೋಡ್‍ಶೋ ಮುಖಾಂತರ ಮತಯಾಚನೆ ಮಾಡಿ ಮಾತನಾಡಿದರು.
ಪಂಚರತ್ನ ಯೋಜನೆ ಮುಖಾಂತರ ಗ್ರಾಮೀಣ ಭಾಗದಲ್ಲಿ ಹೈಟೆಕ್ ಆಸ್ಪತ್ರೆ, ಉಚಿತ ಶಿಕ್ಷಣ , ರೈತರ ಒಂದು ಎಕರೆ ಭೂಮಿಗೆ 10 ಸಾವಿರದಂತೆ 10 ಎಕರೆಗೆ 1 ಲಕ್ಷ ಹಣವನ್ನು ಮುಂಗಡವಾಗಿ ನೀಡಲಾಗುವುದು. ವೃದ್ಧಾಪ್ಯ ವೇತನವು 1500 ರೂಗಳಿಂದ 5000 ಕ್ಕೆ ಏರಿಸಲಾಗುವುದು. ಸ್ತ್ರೀ ಶಕ್ತಿ ಸಾಲ ಮನ್ನಾ ಮಾಡಲಾಗುವುದು.
ಶಾಸಕ ರಮೇಶ್‍ಕುಮಾರ್‍ರವರು ಆರೋಗ್ಯ ಸಚಿವರಾಗಿದ್ದಾಗ ಅರಣ್ಯ ಭೂಮಿಯ ಮಿಸ್ ಡಾಕ್ಯುಮೆಂಟ್ ಮಾಡಿದ್ದು, ಅದರಂತೆ ಅರಣ್ಯ ಭೂಮಿಯನ್ನು ಒತ್ತವರಿ ಮಾಡಿದ್ದು, ಅದನ್ನ ತೆರೆವುಗೊಳಿಸುವ ಕಾರ್ಯಮಾಡಲಾಗುವುದು.
ಕಳೆದ 10 ವರ್ಷಗಳಿಂದ ರೈತರಿಗೆ ಸಾಗುವಳಿ ಚೀಟಿ ನೀಡಿಲ್ಲ .ಎಸ್‍ಸಿ, ಎಸ್‍ಟಿ ರೈತರಿಗೆ ಸರ್ಕಾರದಿಂದ ಗಂಗಾಕಲ್ಯಾಣ ಯೋಜನೆ ಅಡಿಯಲ್ಲಿ ಬೋರ್‍ವೆಲ್ ಕೊರೆಸಿಲ್ಲ. ಬಡವರ ಬಗ್ಗೆ ಕಾಳಜಿ ಇಲ್ಲ.
ಕೆಸಿ ವ್ಯಾಲಿ ನೀರಿನಿಂದ ಜನರ ಆರೋಗ್ಯದ ಮೇಲೆ ಪ್ರಭಾವ ಬೀರುವುದರಿಂದ ಪಂಚರತ್ನ ಯೋಜನೆ ಅಡಿಯಲ್ಲಿ ಈ ಭಾಗದ ಜನರಿಗೆ ಶುದ್ದಕುಡಿಯುವ ನೀರನ್ನ ಕೊಡಲಾಗುವುದು. ಕೆಳದ 10 ವರ್ಷಗಳಿಂದ ಕ್ಷೇತ್ರವು ಅಭಿವೃದ್ಧಿ ಶೂನ್ಯವಾಗಿದೆ. ಇದು ನನ್ನ ಕೊನೆಯ ಚುನಾವಣೆ ಆದ್ದರಿಂದ ತಾವೆಲ್ಲರೂ ನನಗೆ ಅತ್ಯಧಿಕ ಮತವನ್ನ ನೀಡುವುದರ ಮೂಲಕ ಚುನಾವಣೆಯಲ್ಲಿ ಗೆಲ್ಲಿಸುವಂತೆ ಮನವಿ ಮಾಡಿದರು.
ಜೆಡಿಎಸ್ ಪಕ್ಷದ ಮುಖಂಡ ಶೇಷಾಪುರ ಗೋಪಾಲಕೃಷ್ಣ ಮಾತನಾಡಿ ಲೋಕಸಭಾ ಚುನಾವಣೆಯಲ್ಲಿ ಕೆ.ಎಚ್.ಮುನಿಯಪ್ಪ ಸೋಲಲು ಕೆ.ಆರ್.ರಮೇಶ್‍ಕುಮಾರ್ ಕಾರಣ. ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಂದು ಹೇಳುವ ರಮೇಶ್‍ಕುಮಾರ್ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಮೂಲ ಕಾರಣ.
ರಮೇಶ್‍ಕುಮಾರ್ ರವರ ಮೊಸಳೆ ಕಣ್ಣೀರಿಗೆ ಮತದಾರರು ಬೆರಗಾಗದೆ, ರೈತ ಪರ ಹಾಗು ಬಡವರ ಬಗ್ಗೆ ಕಾಳಜಿ ಇರುವ ಜಿ.ಕೆ.ವೆಂಕಟಶಿವಾರೆಡ್ಡಿ ರವರನ್ನ ಗೆಲ್ಲಿಸಿ ಎಂದು ಮನವಿ ಮಾಡಿದರು.
ಜಿ.ಪಂ.ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಮಾಜಿ ಸದಸ್ಯ ಎಂ.ವಿ.ಶ್ರೀನಿವಾಸ್, ಗ್ರಾ.ಪಂ.ಸದಸ್ಯ ಕೂಲಗುರ್ಕಿ ತಿಮ್ಮರಾಯಪ್ಪ, ಮುಖಂಡರಾದ ವಕೀಲ ಕೆ.ಮಾರುತಿರೆಡ್ಡಿ, ಬಾಜಾಜ್ ನಾರಾಯಣಸ್ವಾಮಿ, ಬಂಡಪಲ್ಲಿ ಕೃಷ್ಣಾರೆಡ್ಡಿ, ಕೊರ್ನಹಳ್ಳಿ ಆಂಜನಪ್ಪ, ಸಂತೋಷ,ದಿಗವಪಲ್ಲಿ ಸುರೇಶ್‍ರೆಡ್ಡಿ, ಕೋಳಿಫಾರಂ ಆರ್.ರಮೇಶ್ ದೊಡಮಲದೊಡ್ಡಿ ಶ್ರೀನಾಥರೆಡ್ಡಿ, ಸದಾಶಿವ, ಆರ್.ಬಾಬ ಇದ್ದರು.
