ಅಕ್ಟೋಬರ್ 27ರಂದು ಕುಂದಾಪುರ ಭಂಡಾರ್ಕರ್ಸ್ ಆರ್ಟ್ಸ್ & ಸೈನ್ಸ್ ಕಾಲೇಜಿನಲ್ಲಿ “ರೇಡಿಯೋ ಕುಂದಾಪುರ 89.6 ಎಫ್ ಎಂ” ಲೋಗೋ ಮತ್ತು ಅಧಿಕೃತ ರಾಗ ಬಿಡುಗಡೆ ಸಮಾರಂಭ

ಕುಂದಾಪುರ ಭಂಡಾರ್ಕರ್ಸ್ ಕಾಲೇಜಿನ ರೇಡಿಯೋ ಕುಂದಾಪುರ 89.6 ಎಫ್ ಎಂ ನ ಲಾಂಛನ ಮತ್ತು ಅಧಿಕೃತ ರಾಗ ಬಿಡುಗಡೆ ಸಮಾರಂಭ ಅಕ್ಟೋಬರ್ 27ರಂದು   ಕಾಲೇಜಿನ ಸಭಾಂಗಣದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.ಪ್ರಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕರಾದ ರವಿ ಬಸ್ರೂರು  ಲಾಂಛನ ಬಿಡುಗಡೆ ಮಾಡಲಿದ್ದಾರೆ. ಜಾದುಗಾರ & ಸಾಹಿತಿ ಓಂ ಗಣೇಶ ಇವರು ಸಿಗ್ನೇಚರ್ ಟ್ಯೂನ್ ಬಿಡುಗಡೆ ಮಾಡಲಿದ್ದಾರೆ. ಸಮಾರಂಭದ ಉದ್ಘಾಟನೆಯನ್ನು ವಿಶ್ವಸ್ತ ಮಂಡಳಿಯ ಹಿರಿಯ ಸದಸ್ಯರು ಕೆ.ಶಾಂತರಾಮ್ ಪ್ರಭು ಅವರು ಮಾಡಲಿದ್ದಾರೆ.ಸಮಾರಂಭದ  ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆಯ ಮಾಜಿ ಅಧ್ಯಕ್ಷರಾಗಿರುವ ಎ ಎಸ್ ಎನ್ ಹೆಬ್ಬಾರ್ ವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ  ಸಾರ್ವಜನಿಕರಿಗೆ ಮತ್ತು ಕಲಾಸಕ್ತರಿಗೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ಅವರು  ಆಮಂತ್ರಣವನ್ನು ನೀಡಿದ್ದಾರೆ.

ಭಂಡಾರ್ಕರ್ಸ್ ಕಾಲೇಜಿನ ಮಹತ್ವದ ಸಮುದಾಯ ಯೋಜನೆ “ರೇಡಿಯೋ ಕುಂದಾಪುರ 89.6 ಎಫ್ ಎಮ್ “ಸಿದ್ಧಗೊಳ್ಳುತ್ತಿದ್ದು ತಾಂತ್ರಿಕ ಕಾರ್ಯ ಪೂರ್ಣಗೊಳ್ಳುತ್ತಿದೆ.ಈ ಬಾನುಲಿ ಕೇಂದ್ರ 25 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕೇಳಬಹುದಾಗಿದ್ದು, ಧ್ವನಿ ಪರೀಕ್ಷೆ ಯಶಸ್ವಿಯಾಗಿದೆ.ಕುಂದಾಪುರ ತಾಲೂಕಿನ ಜನರು ದೇಶ ವಿದೇಶದಲ್ಲಿದ್ದರು ರೇಡಿಯೋ ಕುಂದಾಪುರ ಕೇಳುವಂತೆ ಮಾಡುವ ಆಪ್ ರೂಪಿಸಲಾಗುತ್ತಿದ್ದು ದೆಹಲಿಯ ತಂತ್ರಜ್ಞರು ಈ ಬಗ್ಗೆ ಸಿದ್ಧತೆ ನಡೆಸುತ್ತಿದ್ದಾರೆ.

ಉದ್ದೇಶ :


ಜನರ ನಾಡಿ ಮಿಡಿತದ ಮಾಧ್ಯಮವಾಗಿ ಎಲ್ಲಾ ಸಮುದಾಯದ ಆಚಾರ ವಿಚಾರಗಳ ಸಾಂಸ್ಥಿಕವಾಗಿ ವಿಚಾರ ವಿನಿಮಯ ಮಾಡುವುದು. ಎಲ್ಲಾ ಸಮುದಾಯದ ಸುಸ್ಥಿರ ಸಬಲೀಕರಣಕ್ಕೆ ಸೃಜನಶೀಲ ಮತ್ತು ಉಪಯುಕ್ತ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದು. ಶಿಕ್ಷಣ ಸಂಸ್ಕೃತಿ, ಪರಿಸರ ,ಕೃಷಿ,ಮೀನುಗಾರಿಕೆ,ಆರೋಗ್ಯ,ಪ್ರವಾಸೋದ್ಯಮ, ಸ್ವ ಉದ್ಯಮ ಮತ್ತು ಉದ್ಯೋಗ ಸಂಬಂಧಿತ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದು. ಕುಂದಾಪುರ ನಗರ ಮತ್ತು ಸುತ್ತಮುತ್ತಲಿನ ಗ್ರಾಮೀಣ ಸಮುದಾಯದ ಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ರಮಗಳನ್ನು ರೂಪಿಸಿ ಪ್ರಸಾರ ಮಾಡಲು ರೇಡಿಯೋ ಕುಂದಾಪುರ ಸಮುದಾಯ ರೇಡಿಯೋ ಕೇಂದ್ರ ಧ್ವನಿ ಯಾಗುವುದು. ಎಲ್ಲಾ ಸಮುದಾಯಗಳ ಸಾಂಸ್ಥಿಕ ಬದುಕಿನ ಪ್ರತಿಬಿಂಬವಾಗಿ ರೇಡಿಯೋ ಕುಂದಾಪುರ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದು. ಸಮುದಾಯದ ಒಳಗೊಳ್ಳುವಿಕೆಯೊಂದಿಗೆ ನಿತ್ಯ ಜೀವನಕ್ಕೆ ಅಗತ್ಯವಾದ ಅರಿವು ತಿಳಿವಿನ ವಿಚಾರ ವಿನಿಮಯವನ್ನು ಬಾನುಲಿ ಮುಖಾಂತರ ಮಾಡುವುದು.