ಆರ್. ಎನ್. ಶೆಟ್ಟಿ ಪಿ.ಯು. ಕಾಲೇಜಿನಲ್ಲಿ ‘ಮಹಿಳಾ ಉತ್ಸವ್-ಬಂಧನ್ -2021’ ಸಪ್ತಾಹದ ,ಮಾಹಿತಿ ಉಪನ್ಯಾಸ.

JANANUDI.COM NETWORK

“ಆತ್ಮರಕ್ಷಣಾ ಮಾರ್ಗಗಳ ನಿಖರವಾದ ತಿಳುವಳಿಕೆ ಪ್ರತಿಯೊಬ್ಬ ಹುಡುಗಿ ಅಥವಾ ಮಹಿಳೆಗೂ ಇರಬೇಕು‌. ಆತ್ಮ ರಕ್ಷಣೆಯ ಸ್ಪಷ್ಟ ಅರಿವು ದೇಹದಲ್ಲಿ ಶಕ್ತಿ, ಧೃಢತೆಯನ್ನು ಕಾಪಾಡುವಲ್ಲಿ ಸಹಕಾರಿಯಾಗುವುದು” ಎಂದು ಕುಂದಾಪುರ ಎ.ಎಸ್.ಐ ಶ್ರೀ ಸುಧಾಕರ್ ರವರು ಕುಂದಾಪುರದ ಆರ್. ಎನ್ ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ  ಜೆಸಿಐ ಕುಂದಾಪುರ ಸಿಟಿಯ ಮಹಿಳಾ ಘಟಕ ಜೆಸಿರೆಟ್ ಕುಂದಾಪುರ ಸಿಟಿ  ಇದರ ಸಹಯೋಗದಲ್ಲಿ ‘ ಮಹಿಳಾದಿನ’ ದ ಪ್ರಯುಕ್ತ ಹಮ್ಮಿಕೊಂಡ  ಮಹಿಳಾ ಉತ್ಸವ್- ‘ಬಂಧನ್’-2021′- ಸಪ್ತಾಹದ ಅಂಗವಾಗಿ ನಡೆದ ಮಾಹಿತಿ ಉಪನ್ಯಾಸ ಕಾರ್ಯಕ್ರಮದಲ್ಲಿ ತಿಳಿಸಿದರು.  ಕಾರ್ಯಕ್ರಮದ ಮುಖ್ಯ ಅತಿಥಿ ಜೆ.ಸಿ.ಐ ವಲಯಾಧ್ಯಕ್ಷೆ ಶ್ರೀಮತಿ ಸೌಜನ್ಯ ಹೆಗ್ಡೆಯವರು
ಆತ್ಮರಕ್ಷಣೆಯೆಂದರೆ ಮಹಿಳೆಯರು ತಮ್ಮನ್ನು ರಕ್ಷಿಸಿಕೊಳ್ಳುವುದರ ಜೊತೆಗೇ ಅಗತ್ಯವಿದ್ದ ಇತರರಿಗೂ ಸಹಾಯ ಮಾಡುವುದಾಗಿರುತ್ತದೆ. ಈ ನಿಟ್ಟಿನಲ್ಲಿ ಮಹಿಳಾ ದಿನಾಚರಣಾ ಅಂಗವಾಗಿ  ಜೆ.ಸಿಐ ಕುಂದಾಪುರ ಸಿಟಿಯವರು ವಾರದುದ್ದಕ್ಕೂ ನಡೆಸುತ್ತಿರುವ ಮಾಹಿತಿ ಕಾರ್ಯಕ್ರಮ ಶ್ಲಾಘನೀಯ ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ ಕುಮಾರ ಶೆಟ್ಟಿಯವರು, ಮಹಿಳೆಯರಲ್ಲಿ ಆತ್ಮಸ್ಥೈರ್ಯವಿದ್ದು, ಸಮಸ್ಯೆಯನ್ನು ಇತರರೊಂದಿಗೆ ಹಂಚಿಕೊಂಡರೆ ಹಲವು ಸಂಘಸಂಸ್ಥೆಗಳ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎಂದು ತಿಳಿಸಿದರು. ಜೆಸಿಐ ಕುಂದಾಪುರ ಸಿಟಿ ಇದರ ಸ್ಥಾಪಕಾಧ್ಯಕ್ಷರಾದ ಶ್ರೀ ಹುಸೇನ್ ಹೈಕಾಡಿ, ನಿಕಟಪೂರ್ವ ವಲಯಾಧ್ಯಕ್ಷರಾದ ಶ್ರೀ ಕಾರ್ತಿಕೇಯ ಮಧ್ಯಸ್ಥ, ಜೆಸಿಐ ಅಧ್ಯಕ್ಷರಾದ ಶ್ರೀ ವಿಜಯ ಭಂಡಾರಿ, ವಲಯಾಧಿಕಾರಿ ಶ್ರೀ ಪ್ರಶಾಂತ ಹವಾಲ್ದಾರ್, ಜ್ಯೂನಿಯರ್ ಜೆ.ಸಿಯ ಅಧ್ಯಕ್ಷರಾದ ಸ್ಯಾಮ್ಯುಯಲ್ ಲೂಯಿಸ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಜೆಸಿರೆಟ್ ಕುಂದಾಪುರ ಸಿಟಿ ಇದರ ಅಧ್ಯಕ್ಷರಾದ ಡಾ. ಸೋನಿಯವರು ಸ್ವಾಗತಿಸಿದರು.  ಜೆ.ಸಿಐ ಕುಂದಾಪುರ ಸಿಟಿಯ ಕಾರ್ಯದರ್ಶಿ ಶ್ರೀ ಗುರುರಾಜ್ ಕೋತ್ವಾಲ್ ರವರು ಧನ್ಯವಾದ ಸಲ್ಲಿಸಿದರು. ಜೆಸಿರೆಟ್ ಅಧ್ಯಕ್ಷೆ ಡಾ. ಸೋನಿ ಮತ್ತು ಕಾಲೇಜಿನ ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕಿ‌ ಪ್ರೆಸಿಲ್ಲಾ ರವರು ಕಾರ್ಯಕ್ರಮ ನಿರ್ವಹಿಸಿದರು
.