

“ಪಿ.ಯು.ಸಿ ಹಂತದಲ್ಲಿ ಮುಂದಿನ ವ್ಯಾಸಂಗದ ಆಯ್ಕೆಯ ಬಗ್ಗೆ ಗೊಂದಲ, ಅನಿಶ್ಚಿತತೆ ಸಹಜವಾಗಿರುವಂಥದ್ದು.ವಿದ್ಯಾರ್ಥಿಗಳು ಚೆನ್ನಾಗಿ ಅಭ್ಯಸಿಸಿದರೆ ಕಡಿಮೆ ವೆಚ್ಚದಲ್ಲಿ ಮೆಡಿಕಲ್/ ಇಂಜಿನಿಯರಿಂಗ್ ಶಿಕ್ಷಣ ಪಡೆಯಬಹುದು. ಜ್ಞಾನ ಪಡೆದುಕೊಳ್ಳುವ ಪ್ರಯತ್ನದಲ್ಲಿ ಯಶಸ್ವಿಯಾದರೆ ಹಣ ತಾನಾಗೇ ಬರುತ್ತದೆ. ನನ್ನ ಈ ಸಾಧನೆಗೆ ಆರ್. ಎನ್. ಎಸ್ ಕಾಲೇಜು ಪ್ರೇರಣೆ. ಇಲ್ಲಿನ ಉಪನ್ಯಾಸಕರ ಸತತ ಪ್ರೋತ್ಸಾಹದಿಂದ ನನ್ನ ಹಾಗೆ ಹಲವಾರು ವಿದ್ಯಾರ್ಥಿಗಳು ಇಂದು ಉತ್ತಮ ಸಾಧನೆ ಮಾಡಿದ್ದಾರೆ ” ಎಂದು ಕಾಲೇಜು ವಾರ್ಷಿಕೋತ್ಸವ ‘ ಆರ್.ಎನ್ ಎಸ್ -ವೈಭವ’ ದಂದು ಮುಖ್ಯ ಅತಿಥಿಯಾಗಿ ಆಗಮಿಸಿದ ಆರ್. ಎನ್ ಶೆಟ್ಟಿ ಪಿ.ಯು ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ, ಮಂಗಳೂರಿನ ಫಾದರ್ ಮುಲ್ಲರ್ಸ್ ಮೆಡಿಕಲ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಪಕರಾಗಿರುವ ಡಾ. ಶ್ರೀಶಂಕರ್ ಬಾಯಿರಿ ಅವರು ಅಭಿಪ್ರಾಯ ಪಟ್ಟರು.
ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ ಶ್ರೀ ಸೀತಾರಾಮ ನಕ್ಕತ್ತಾಯ ರವರು ಅತಿಥಿಗಳನ್ನು ಸ್ವಾಗತಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನವೀನ ಕುಮಾರ ಶೆಟ್ಟಿಯವರು ಕಾಲೇಜಿನ ವಾರ್ಷಿಕ ವರದಿಯನ್ನು ವಾಚಿಸಿದರು. ಹಿಂದಿ ಉಪನ್ಯಾಸಕಿ ಜಯಶೀಲಾ ಪೈ ಯವರು ಶೈಕ್ಷಣಿಕ ಮತ್ತು ಕ್ರೀಡಾ ಸಾಧಕ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮವನ್ನು ನಿರ್ವಹಿಸಿದರು. . ಸಮಾರಂಭದಲ್ಲಿ ಉಪಸ್ಥಿತರಿದ್ದ ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಮೂರೂ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರ ಶಿಕ್ಷಕರಾಗಿದ್ದ ಶ್ರೀ ಶ್ರೀನಿವಾಸ ಸೋಮಯಾಜಿಯವರು ತಮ್ಮ ವಿದ್ಯಾರ್ಥಿತ್ರಯರ ಸಾಧನೆಯನ್ನು ಶ್ಲಾಘಿಸಿ ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಸಂಚಾಲಕರಾದ ಶ್ರೀ ಬಿ.ಎಮ್ ಸುಕುಮಾರ ಶೆಟ್ಟಿಯವರು ಯಶಸ್ಸಿನ ಹೊಸದಿಶೆಯತ್ತ ಸಾಗುತ್ತಿರುವ ಆರ್. ಎನ್. ಎಸ್ ಪಿ.ಯು ಕಾಲೇಜಿನ ಬಗ್ಗೆ ಆಶೋತ್ತರಗಳನ್ನು ತಿಳಿಸಿದರು. ಕುಂದಾಪುರ ಆಡಳಿತ ಮಂಡಳಿಯ ಜೊತೆ ಕಾರ್ಯದರ್ಶಿ ಶ್ರೀ ಸುಧಾಕರ ಶೆಟ್ಟಿ ಭಾಂಡ್ಯ, ಡಾ. ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ, ಎಚ್.ಎಮ್.ಎಮ್ -ವಿ.ಕೆ.ಆರ್ ಸಂಸ್ಥೆಗಳ ಪ್ರಾಂಶುಪಾಲೆಯಾದ ಡಾ. ಚಿಂತನಾ ರಾಜೇಶ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜೀವಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಅಕ್ಷತಾ ಕೆ.ಎನ್, ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಜಾನೀಸ್ ನತಾಶಾ ಡಿಸೋಝಾ, ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಆಶ್ವಿನಿ ನಾಯಕ್ ಹಾಗೂ ಗಣಿತ ವಿಜ್ಞಾನದ ಉಪನ್ಯಾಸಕಿ ಶುಭಾ ಎಂ. ಜಿ ಯವರು ವಿವಿಧ ವಿಭಾಗಗಳ ಬಹುಮಾನ ವಿತರಣಾ ಕಾರ್ಯಕ್ರಮಗಳನ್ನು ನಿರ್ವಹಿಸಿದರು. ದ್ವಿತೀಯ ಪಿ.ಯು. ಸಿ ವಾಣಿಜ್ಯ ವಿಭಾಗದ ರಿಯಾ ಅತಿಥಿ ಪರಿಚಯ ಮಾಡಿದರು. ಪ್ರಥಮ ಪಿ.ಯು.ಸಿ ವಿಜ್ಞಾನ ವಿಭಾಗದ ಸುಚೇತಾರವರು ಭರತನಾಟ್ಯ ಪ್ರದರ್ಶನ ನೀಡಿದರು. ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀ ಪ್ರೀತೇಶ್ ಶೆಟ್ಟಿಯವರು ಧನ್ಯವಾದ ಸಲ್ಲಿಸಿದರು. ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗದ ಕ್ಷಮಾ ಗೌತಮ್, ಭುವನ್ ಎಸ್ ಹಾಗೂ ಸುನೀತಾ ಇವರು ಕಾರ್ಯಕ್ರಮ ನಿರೂಪಿಸಿದರು.



