“ಭಾರತದ ಸಂವಿಧಾನವು ಜಗತ್ತಿನ ಅತ್ಯಂತ ಶ್ರೇಷ್ಠ ಸಂವಿಧಾನವಾಗಿದೆ. ಸಮಾಜದ ಎಲ್ಲರಿಗೂ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವವನ್ನು ಪ್ರತಿಪಾದಿಸುವುದರ ಮೂಲಕ ಸರ್ವರ ಒಳಿತನ್ನು ಬಯಸುವ ಸಂವಿಧಾನವಾಗಿದೆ” ಎಂದು ಎಸ್ಎಂಎಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಐವನ್ ದೋನಾತ್ ಸುವಾರಿಸ್ ರವರು ಹೇಳಿದರು. ಅವರು ಎಸ್ ಎಮ್ ಎಸ್ ಪದವಿ ಪೂರ್ವ ಕಾಲೇಜು ಹಾಗೂ ನೀತಿ ಮತ್ತು ಶಾಂತಿ ಆಯೋಗ ಉಡುಪಿ ಧರ್ಮಪ್ರಾಂತ್ಯ ಇವರ ಜಂಟಿಯಾಗಿ ಸಂವಿಧಾನ ದಿನಾಚರಣೆಯ ಅಂಗವಾಗಿ ಆಯೋಜಿಸಿದ ಅಂತರ್ ಪ್ರೌಢಶಾಲಾ ಭಾರತದ ಸಂವಿಧಾನ ಕುರಿತ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಬಹುಮಾನಗಳನ್ನು ವಿತರಿಸಿ ಮಾತನಾಡುತ್ತಿದ್ದರು. ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಹಿರಿಯ ಶಿಕ್ಷಕಿ ಜೂಲಿಯೆಟ್ ಜೆಸಿಂತ ಲುವಿಸ್, ಕಾರ್ಯಕ್ರಮ ಸಂಯೋಜಕರಾದ ಸಮಾಜಶಾಸ್ತ್ರ ಉಪನ್ಯಾಸಕರಾದ ವಿಜಯ್ ಆಳ್ವ, ರಾಜ್ಯಶಾಸ್ತ್ರ ಉಪನ್ಯಾಸಕರಾದ ಎಡ್ವರ್ಡ್ ಲಾರ್ಸನ್ ಡಿಸೋಜಾ ,ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿಕೊಟ್ಟ ಗಣಕ ವಿಜ್ಞಾನ ಉಪನ್ಯಾಸಕರಾದ ಸಂತೋಷ್ ನೀಲಾಾವರ್ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕರಾದ ಪ್ರಸನ್ನ ಅಡಿಗ ಅವರು ಸ್ವಾಗತಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು .
ಬಹುಮಾನಿತರ ವಿವರ
ಪ್ರಥಮ ಸ್ಥಾನ: ಪೃಥ್ವಿನ್ ಮತ್ತು ಆದಿತಿ ಎಸ್ಎಂಎಸ್ ಸಿಬಿಎಸ್ಸಿ ಸ್ಕೂಲ್, ಬ್ರಹ್ಮಾವರ ದ್ವಿತೀಯ ಸ್ಥಾನ: ವಿಘ್ನೇಶ್ ಮತ್ತು ಅಶ್ವಿಜ್ ಕೆಪಿಎಸ್ ಕೊಕ್ಕರ್ಣೆ ತೃತೀಯ ಸ್ಥಾನ ಮೊಹಮ್ಮದ್ ಅಯಾನ್ ಮತ್ತು ಕೌಶಿಕ್ ಎಸ್ ಎಮ್ ಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಾಜ್ಯ ಪಠ್ಯಕ್ರಮ ಬ್ರಹ್ಮಾವರ
ಸಮಾಧಾನಕರ ಬಹುಮಾನ
ರೇಷ್ಮಾ ಎಸ್ಎಂಎಸ್ ಕನ್ನಡ ಮಾಧ್ಯಮ ಪ್ರೌಢಶಾಲೆ ಹಾಗೂ ಸುಮಂತ್ ಮತ್ತು ಪ್ರಜ್ವಲ್ ಮಿಲಾಗ್ರಿಸ್ ಪ್ರೌಢಶಾಲೆ, ಕಲ್ಯಾಣ್ಪುರ.