ಪಿ.ವಿ.ಸಿಂಧುಗೆ ಒಲಿಂಪಿಕ್ ಇತಿಹಾಸದಲ್ಲಿ ಒಂದಕ್ಕಿಂತ ಹೆಚ್ಚು ಪದಕ ಗೆದ್ದ ಮಹಿಳಾ ಕ್ರೀಡಾಪಟುವೆಂಬ ಹೆಗ್ಗಳಿಕೆ
JANANUDI.COM NETWORK
ಟೊಕಿಯೋ,ಅ.1: ಟೊಕಿಯೋ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ 2ನೇ ಪದಕ ದಕ್ಕಿದೆ. ನಿನ್ನೆ ಸೆಮಿ ಫೈನಲ್ನಲ್ಲಿ ಸೋಲುಂಡಿದ್ದ ಪಿ.ವಿ.ಸಿಂಧ ಇಂದು ಕಂಚಿನ ಪದಕ ಗೆಲ್ಲುವನ್ನು ಯಶಸ್ವಿಯಾಗಿದ್ದಾರೆ. ಒಲಿಂಪಿಕ್ ಇತಿಹಾಸದಲ್ಲಿ ಒಂದಕ್ಕಿಂತ ಹೆಚ್ಚು ಭಾರಿ ಪದಕ ಗೆದ್ದ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಸಿಂಧು ಪಾತ್ರರಾಗಿದ್ದಾರೆ.
ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ ವಿಭಾಗದಲ್ಲಿ ಚೀನಾದ ಹಿ ಬಿಂಗ್ಜಿಯೋ ಅವರನ್ನು ಸೋಲಿಸುವ ಮೂಲಕ ಕಂಚಿನ ಪದಕಕ್ಕೆ ಸಿಂಧು ಮುತ್ತಿಟ್ಟಿದ್ದಾರೆ. ಇಂದು ನಡೆದ ಮಹಿಲಾ ಸಿಂಗಲ್ಸ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಚೀನಾ ಆಟಗಾರ್ತಿಯನ್ನು 21-13, 21-15 ನೇರ ಸೆಟ್ಗಳಿಂದ ಮಣಿಸುವ ಮೂಲಕ ಕಂಚಿನ ಪದಕವನ್ನು ಸಿಂಧು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಟೋಕಿಯೊ ಒಲಿಂಪಿಕ್ಸನಲ್ಲಿ ಭಾರತಕ್ಕೆ ಎರಡು ಪದಕ ದೊರಕಿದಂತಾಗಿದೆ..