ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ : ಮಾನವನಿಗೆ ಕಣ್ಣು ಎಂಬುದು ಪ್ರಮುಖವಾದ ಅಂಗವಾಗಿದೆ . ಪಂಚೇಂದ್ರಿಯಗಳಲ್ಲಿ ಇದು ಒಂದಾಗಿದ್ದು , ಕಣ್ಣು ಇಲ್ಲದಿದ್ದರೆ ಈ ಪ್ರಪಂಚವನ್ನು ನೋಡುವುದಕ್ಕೆ ಸಾಧ್ಯವಿಲ್ಲ . ಕಣ್ಣಿನ ಆರೋಗ್ಯಕ್ಕೆ ಪ್ರತಿಯೊಬ್ಬರು ಹೆಚ್ಚು ಒತ್ತು ನೀಡಿ ಎಂದು ಜಿಲ್ಲಾಧಿಕಾರಿಗಳಾದ ವೆಂಕಟ್ ರಾಜ ಅವರು ತಿಳಿಸಿದರು . ಇಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ ಆವರಣ ಸಭಾಂಗಣದಲ್ಲಿ ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶಯದಲ್ಲಿ ಹಮ್ಮಿಕೊಂಡಿದ್ದ . ವಿಶ್ವ ಗ್ಲಾಕೋಮಾ ಸಪ್ತಾಹ ಮತ್ತು ಜನ ಔಷಧಿ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು . ಎಲ್ಲಾ ಆಶಾ ಕಾರ್ಯಕರ್ತೆ ಹಾಗೂ ಸಮುದಾಯದ ಆರೋಗ್ಯ ಅಧಿಕಾರಿಗಳು ಇವರುಗಳು ಪ್ರತಿ ಹಳ್ಳಿಯಲ್ಲಿ ಗ್ಲಾಕೋಮಾ ರೋಗದ ಬಗ್ಗೆ ಜನರಲ್ಲಿ ಅರಿವು ಮತ್ತು ಜಾಗೃತಿ ಮಾಡಿಸಬೇಕು . ಪ್ರತಿಯೊಬ್ಬರಿಗೂ ಕಡಿಮೆ ಬೆಲೆಯಲ್ಲಿ ಗುಣ ಮಟ್ಟದ ಔಷಧಿಗಳು ಸಿಗಬೇಕೆಂದು ಪ್ರಧಾನಮಂತ್ರಿ ಭಾರತೀಯ ಜನ ಔಷಧಿ ಪರಿಯೋಜನೆ ಜಾರಿಗೆ ತಂದಿದ್ದು , ಬ್ರಾಂಡೆಡ್ ಔಷಧಿಗಳು ಈ ಕೇಂದ್ರಗಳಲ್ಲಿ ಬಡವರಿಗೆ ಆಗ್ಗದ ಬೆಲೆಯಲ್ಲಿ ಸಿಗುತ್ತವೆ . ಪ್ರತಿಯೊಬ್ಬರು ಇದರ ಉಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು . ಜಿಲ್ಲಾ ಅಂಧತ್ವ ಅಧಿಕಾರಿಗಳಾದ ಡಾ || ನಾರಾಯಣಸ್ವಾಮಿ ಅವರು ಮಾತನಾಡಿ , ಪ್ರತಿ ವರ್ಷದಂತೆ ಈ ವರ್ಷವು ಮಾರ್ಚ್ 6 ರಿಂದ 12 ರವರೆಗೂ ಹಳ್ಳಿ ಹಂತದಿಂದ ಇದನ್ನೂ ಆಚರಿಸುತ್ತಿದ್ದೇವೆ . ಮಾನವನಿಗೆ ಕಣ್ಣಿಗಿಂತ ಶ್ರೇಷ್ಠವಾದ ಅಂಗ ಯಾವುದು ಇಲ್ಲ . ಭಾರತದಲ್ಲಿ 1 ಮಿಲಿಯನ್ ಜನರು ಗ್ಲಾಕೋಮಾ ರೋಗಕ್ಕೆ ಒಳಪಟ್ಟಿರುತ್ತಾರೆ . ಯಾವುದೇ ಒಂದು ರೋಗ ಲಕ್ಷಣವಿಲ್ಲದೆ ನಮ್ಮ ದೃಷ್ಟಿ ಕಳೆಯುವುದೇ ಈ ಗ್ಲಾಕೋಮಾ ಎಂದು ಕರೆಯಬಹುದು . 4 ) ವಯಸ್ಸಿನ ನಂತರ ಪ್ರತಿಯೊಬ್ಬರು ವರ್ಷಕ್ಕೊಮ್ಮೆ ಕಣ್ಣಿನ ಒತ್ತಡ ಪರೀಕ್ಷಿಸಿಕೊಳ್ಳಿ . ಸಾಮಾನ್ಯ ಕಣ್ಣಿನ ಒತ್ತಡವಾಗಿ 14-20 ಇರಬೇಕು ಆರೋಗ್ಯವಂತ ಮನುಷ್ಯನಲ್ಲಿ 20 ರ ಮೇಲೆ ಬಂದರೆ ಅದು ಗ್ಲಾಕೋಮಾ ಕಾಯಿಲೆ ಎಂದು ಪರಿಗಣಿಸಲಾಗುವುದು ಎಂದು ತಿಳಿಸಿದರು . ಮನೆಯಲ್ಲಿ ಯಾರಾದರೂ ಗ್ಲಾಕೋಮಾದಿಂದ ಬಳಲುತ್ತಿದ್ದರೆ ಆ ಮನೆಯ ಇತರ ಸದಸ್ಯರು ಕಡ್ಡಾಯವಾಗಿ ಕಣ್ಣಿನ ಒತ್ತಡ ಪರೀಕ್ಷೆ ಮಾಡಿಸಿಕೊಳ್ಳಬೇಕು . ಕೋಲಾರ ಜಿಲ್ಲೆಯಲ್ಲಿ 508 ಜನರಲ್ಲಿ ಈ ಗ್ಲಾಕೋಮಾ ಕಾಯಿಲೆಗೆ ಒಳಪಟ್ಟಿರುತ್ತಾರೆ . ಕಣ್ಣಿನ ಆರೋಗ್ಯಕ್ಕೆ ಆಹಾರದಲ್ಲಿ ಪೌಷ್ಠಿಕ ಆಹಾರ , ಹಸಿರು ತರಕಾರಿ , ಮೊಳಕೆ ಕಟ್ಟಿದ ಧಾನ್ಯಗಳನ್ನು ಹೆಚ್ಚಾಗಿ ಬಳಸಬೇಕು ಎಂದು ತಿಳಿಸಿದರು . ಜಿಲ್ಲಾ ಶಸ್ತ್ರಚಿಕಿತ್ಸಾಧಿಕಾರಿಗಳಾದ ಡಾ || ವಿಜಯ್ ಕುಮಾರ್ ಅವರು ಮಾತನಾಡಿ , 40 ವರ್ಷ ಮೇಲ್ಪಟ ಸಾರ್ವಜನಿಕರು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಿ ಗ್ಲಾಕೋಮಾವನ್ನು ನಿರ್ಮೂಲನೆ ಮಾಡಿ . ಈ ಗ್ಲಾಕೋಮಾ ಚಿಕಿತ್ಸೆಗೆ ನುರಿತ ವೈದ್ಯರು ಮತ್ತು ಆಧುನಿಕ ಯಂತ್ರಗಳು ಜಿಲ್ಲಾಸ್ಪತ್ರೆಯಲ್ಲಿ ಲಭ್ಯವಿದೆ ಎಂದು ತಿಳಿಸಿದರು . ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ || ಜಗದೀಶ್ , ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ || ಚಂದನ್ , ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ಕೋಟೇಶ್ , ತಾಲ್ಲೂಕು ವೈದ್ಯಾಧಿಕಾರಿಗಳಾದ ಡಾ || ರಮ್ಯ ದೀಪಿಕಾ , ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ . ಡಾ || ಚಾರಿಣಿ , ಶಿಕ್ಷಣಾಧಿಕಾರಿಗಳಾದ ಪ್ರೇಮ ಸೇರಿದಂತೆ ಇತರರು ಉಪಸ್ಥಿತರಿದ್ದರು.