ನಗರದಲ್ಲಿ ನೀರಿಲ್ಲದೆ ನಿಂತುಹೊದ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಟ್ಯಾಂಕರ್ ನೀರು ಪೂರೈಸಿ: ಶ್ವೇತಾ ಆರ್.ಶಬರೀಶ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ನಗರದಲ್ಲಿ ನೀರು ಇಲ್ಲದೆ ನಿಂತುಹೊದ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಿ: ಶ್ವೇತಾ ಆರ್.ಶಬರೀಶ್
ಕೋಲಾರ: ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸುವ ಸಲುವಾಗಿ ಎಲ್ಲಾ ವಾರ್ಡ್‍ಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದ್ದು, ನೀರು ಇಲ್ಲದ ಕಾರಣ ಕೆಲವು ಕಡೆ ನಿಂತುಹೊದ ನೀರಿನ ಘಟಕಗಳನ್ನು ಮತ್ತೆ ಪುನರ್ ಆರಂಭಿಸಿ ನಗರದಲ್ಲಿ ನೀರಿನ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ನಗರಸಭೆ ಅಧ್ಯಕ್ಷೆ ಶ್ವೇತಾ ಆರ್.ಶಬರೀಶ್ ತಿಳಿಸಿದರು.
ನಗರದ 19ನೇ ವಾರ್ಡ್‍ನ ಎಸ್.ಎಸ್.ಮಕಾನ್ ಹಾಗೂ ದರ್ಗಾ ಮೊಹಲ್ಲಾ ದಲ್ಲಿ ಕೋಲಾರ ನಗರಸಭೆ ಮತ್ತು ಕರ್ನಾಟಕ ನಗರ ನೀರು ಹಾಗೂ ಒಳಚರಂಡಿ ಮಂಡಳಿ ಸಂಯುಕ್ತಾಶ್ರಯದ ಅಮೃತ್ ಯೋಜನೆಯಡಿಯಲ್ಲಿ ನಿರ್ಮಿಸಲಾದ ನೂತನ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಚಾಲನೆ ನೀಡಿ ಮಾತನಾಡಿದರು.
ನಗರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಕೊಳವೆಬಾವಿಗಳ ಮೂಲಕ ಸಂಪರ್ಕವನ್ನು ಕಲ್ಪಿಸಲಾಗಿತ್ತು, ಆದರೆ ನೀರಿನ ಕೊರತೆಯಿಂದ ಕೆಲವು ಕಡೆ ನಿಂತುಹೊದ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಿ ನಗರದಲ್ಲಿ ನೀರಿನ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಎನ್.ಎಸ್.ಪ್ರವೀಣ್‍ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಮಂಜುನಾಥ್, ನಗರಸಭೆ ಎಇಇ ರಾಮಮೂರ್ತಿ ಜೆಇ ಪೂರ್ಣಿಮಾ, ನಗರಸಭೆ ಸದಸ್ಯರಾದ ಜುಗ್ನು ಅಸ್ಲಾಂ, ಅಜ್ರನಸ್ರೀನ್ ಸಾಧಿಕ್ ಪಾಷ, ವಕ್ಛ್‍ಬೋರ್ಡ್ ಮಾಜಿ ಅಧ್ಯಕ್ಷ ಅಬ್ದುಲ್‍ಖಯುಂ, ಮುಖಂಡರಾದ ಶಬರೀಶ್ ಯಾದವ್, ಮಹೇಂದ್ರ ಗಾಣಿಗಾ ಮತ್ತಿತರರು ಉಪಸ್ಥಿತರಿದ್ದರು.