ಶ್ರೀನಿವಾಸಪುರ : ಸರ್ಕಾರವು ಈ ಘಟನೆಯ ಆರೋಪಿಗಳಿಗೆ ಶೀಘ್ರವಾಗಿ ಶಿಕ್ಷೆ ನೀಡಿ, ಮುಂದಿನ ದಿನಗಳಲ್ಲಿ ಮಹಿಳಾ ಎಲ್ಲಾ ಸಿಬ್ಬಂದಿಗಳಿಗೆ ಸೂಕ್ತ ರಕ್ಷಣೆ ಕೊಡುವ ವ್ಯವಸ್ಥೆ ಮಾಡಿಕೊಡಬೇಕು ಎಂದು ಭಾರತೀಯ ವೈದ್ಯಕೀಯ ಸಂಘದ ತಾಲೂಕು ಅಧ್ಯಕ್ಷ ಡಾ|| ವೈ.ವಿ.ವೆಂಕಟಾಚಲ ಒತ್ತಾಯಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಭಾಗ ಶನಿವಾರ ಭಾರತೀಯ ವೈದ್ಯ ಸಂಘ. ಶ್ರೀನಿವಾಸಪುರ ಶಾಖೆಯು ಕೋಲ್ಕತ್ತಾ ವೈದ್ಯೆ ಮೇಲೆ ಅತ್ಯಾಚಾರ ಮತ್ತು ಕೊಲೆ ವಿರೋಧಿಸಿ ವೈದ್ಯರಿಗೆ ಹಾಗು ಸಿಬ್ಬಂದಿಗೆ ರಕ್ಷಣೆ ಕೋರಿ ಸರ್ಕಾರಕ್ಕೆ ರವಾನಿಸುವಂತೆ ತಹಶೀಲ್ದಾರ್ ಜಿ.ಎನ್.ಸುದಿಂದ್ರ ಮೂಲಕ ಮನವಿ ಪತ್ರಸಲ್ಲಿಸಿದರು.
ಇದೊಂದು ಅಮಾನಷ ಕೃತ್ಯ ಆ.9 ನೇ ತಾರೀಖುರಂದು ಕೋಲ್ಕತ್ತಾದಲ್ಲಿನ ಆರ್ಜಿಕರ್ ವೈದ್ಯೆ ಕೆಲಸ ಮುಗಿಸಿಕೊಂಡು ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಅಮಾನಷವಾಗಿ ಘಟನೆ ನಡೆದಿದ್ದು ಇದು ಖಂಡನೀಯ . ಕರ್ತವ್ಯದಲ್ಲಿರುವ ಸಿಬ್ಬಂದಿಗೆ ರಕ್ಷಣೆ ಇಲ್ಲದೆ ಇದ್ದರೆ ಯಾವ ರೀತಿಯಾಗಿ ಕಾರ್ಯ ನಿರ್ವಹಿಸುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಒಂದು ಘಟನೆಯನ್ನು ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘದ ಮಾರ್ಗದರ್ಶನದಂತೆ ಎಲ್ಲಾ ವೈದ್ಯರು ಹಾಗು ಸಿಬ್ಬಂದಿಯವರು 24 ಗಂಟೆಗಳ ಕಾಲ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಭಾರತೀಯ ವೈದ್ಯಕೀಯ ಸಂಘದ ಉಪಾಧ್ಯಕ್ಷ ಡಾ| ಕೆ.ಎನ್.ವೇಣುಗೋಪಾಲ್ ಮಾತನಾಡಿ ಕೋಲ್ಕತ್ತಾ ಆರ್.ಜಿ.ಕರ್ ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಹತ್ಯೆ ಮಾಡಿರುವ ಆರೋಪಿಗಳನ್ನು ತಕ್ಷಣ ಬಂದಿಸಿ ವೈದ್ಯರಿಗೆ ಹಾಗು ಆರೋಗ್ಯ ಸಿಬ್ಬಂದಿಗಳಿಗೆ ಈ ರೀತಿಯಾದ ಘಟನೆ ನಡೆಯದಂತೆ ಸರ್ಕಾರಗಳು ಎಚ್ಚರವಹಿಸಬೇಕು . ಶನಿವಾರ ಬೆಳಗ್ಗೆ 6 ಗಂಟೆಯಿಂದ ಭಾನುವಾರ ಬೆಳಗ್ಗೆ 6 ಗಂಟೆಯವರೆಗೂ ಹೊರರೋಗಿಗಳ ವಿಭಾಗ ತಪಾಸಣೆಯನ್ನು ಸ್ಥತಗಿತಗೊಳಿಸಲಾಗಿದೆ ಎಂದು ಮಾಹಿತಿ ನೀಡಿ , ಸರ್ಕಾರವು ಕಾನೂನು ಪ್ರಕಾರ ಆರೋಪಿಗಳನ್ನು ಬಂಧಿಸಿನ್ಯಾಯಲಯದ ಮುಂದೆ ಹಾಜರು ಪಡೆಸಬೇಕೆಂದು ಆಗ್ರಹ ಪಡೆಸಿ, ಸರ್ಕಾರ ಸೂಕ್ತ ಕ್ರಮಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ರೀತಿಯಲ್ಲಿ ಉಗ್ರಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಟಿಎಚ್ಒ ಮಹಮ್ಮದ್ ಶರೀಫ್ , ಪೊಲೀಸ್ ನಿರೀಕ್ಷಕ ಎಂ.ಬಿ.ಗೊರವನಕೊಳ್ಳ, ಪಿಎಸ್ಐ ಜಯರಾಮ್, ವೈದ್ಯರಾದ ಚಂದ್ರಕಳಾ, ಮೇಘಶ್ಯಾಮ, ನಂದೀಶ್, ದೇವ್ಕುಮಾರ್, ಕಿರಣ್, ವಿನಯ್, ಎಸ್ವಿ ಪ್ಯಾರಮೆಡಿಕಲ್ ಮತ್ತು ನಸಿಂಗ್, ಬೈರವೇಶ್ವರ ಪ್ಯಾರಮಡಿಕಲ್ ಸಿಬ್ಬಂದಿ ಹಾಗು ವಿದ್ಯಾರ್ಥಿಗಳು ಹಾಗು ಆಸ್ಪತ್ರೆಗಳ ಸಿಬ್ಬಂದಿ ಇದ್ದರು.