ಪುನೀತ್ ರಾಜ್‍ಕುಮಾರ್ ನಿಧನ ಕನ್ನಡಕ್ಕೆ ತುಂಬಲಾರದ ನಶ್ಟ: ಕೇವಲ ತಾರೆಯಾಗಿರಲಿಲ್ಲ ಗುಣ ಸಂಪನ್ನಾಗಿದ್ದರು

JANANUDI.COM NETWORK

ನಟ ಪುನೀತ್ ರಾಜ್ ಕುಮಾರ್ ಇಂದು ಸೀರಿಯಸ್ ಹೃದಯಾಘಾತಕ್ಕೆ ಒಳಗಾಗಿದ್ದರು. ಬೆಳಿಗ್ಗೆ 11.30ಕ್ಕೆ ಹೃದಯಾಘಾತಕ್ಕೆ ಒಳಗಾಗಿದ್ದರು, ಖಾಸಗಿ ಕ್ಲಿನಿಕ್ ಒಂದರಲ್ಲಿ ಇಸಿಜಿ.ಮಾಡಿಸಿಕೊಂಡು ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಸ್ಥಿತಿ ಗ0ಭೀರವಾಗಿದ್ದು ಅವರಿಗೆ ಎಲ್ಲಾ ಚಿಕಿತ್ಸೆಯನ್ನು ಆರಂಭಿಸಲಾಗಿತ್ತು. ಈ ಬಗ್ಗೆ ವಿಕ್ರ0 ಆಸ್ಪತ್ರೆಯ ವೈದ್ಯರೊಬ್ಬರು ಹೇಳಿದ್ದರು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಪುನೀತ್ ರಾಜ್ ಕುಮಾರ್ ವಿಧಿವಶವಾಗಿದ್ದಾರೆ. ಇದೊಂದು ಅತ್ಯಂತ ದುಖಕರ ಘಟನೆಯಾಗಿದೆ ಪುನೀತ್ ರಾಜ್‍ಕುಮಾರ್ ನಿಧನ ಕನ್ನಡಕ್ಕೆ ತುಂಬಲಾರದ ನಶ್ಟ: ಕೇವಲ ಇವರು ಚಿತ್ರ ತಾರೆಯಾಗಿರಲಿಲ್ಲ ಗುಣ ಸಂಪನ್ನಾಗಿದ್ದರು, ತಂದೆಯ ಹಾಗೆ ಜೀವನದಲ್ಲಿ ಒಳ್ಳೆಯ ಮೌಲ್ಯಗಳನ್ನು ಬೆಳೆಸಿಕೊಂಡಿದ್ದರು. ಇವರ ನಿಧನದಿಂದ ಚಿತ್ರಲೋಕವಲ್ಲ ಇಡೀ ಕರ್ನಾಟಕ ನಾಡು ದುಖದ ಮಡುವಿನಲ್ಲಿ ಬಿದ್ದತಾಂಗಿದೆ.
ವರನಟ ಡಾ. ರಾಜ್ ಕುಮಾರ್ – ಪಾರ್ವತಿಯಮ್ಮ ದಂಪತಿಯ ಕೊನೆಯ ಪುತ್ರ. ಪುನೀತ್ ರಾಜ್‍ಕುಮಾರ್ ಚಿಕ್ಕ ವಯಸ್ಸಿನಲ್ಲಿ ಬಣ್ಣ ಹಚ್ಚಿಕೊಂಡು ಬೆಳ್ಳಿ ಪರದೆಯಲ್ಲಿ ತಂದೆಯ ಜೊತೆ ನಟಿಸಿದ ಪ್ರತಿಭಾವಂತ ಪೆÇೀರ. ಡಾ. ರಾಜ್ ಕುಮಾರ್ ಹಾಗೂ ಅಂಬಿಕಾ ಅಭಿನಯದ’ಚಲಿಸುವ ಮೋಡಗಳು’ ಸಿನಿಮಾ ನೋಡಿದವರಿಗೆ. ಬಾಯಿಯಲ್ಲಿ ಮೌತ್ ಆರ್ಗಾನ್ ನುಡಿಸುತ್ತಾ ‘ಕಾಣದಂತೆ ಮಾಯಾದನು ನಮ್ಮ ಶಿವ ಕೈಲಾಸ ಸೇರಿಕೊಂಡನು’ ಎಂದು ಹಾಡಿ ಕುಣಿದು ಕುಪ್ಪಳಿಸಿದ ಅಪ್ಪು ಈಗ ನಿಜವಾಗಿಯು ಕಾಣದ ಲೋಕಕ್ಕೆ ಪಯಣಿಸಿದ್ದಾನೆ.
ಪುನೀತ್ ರಾಜ್ಕುಮಾರ್ ಇವತ್ತಿನ ದಿನದಲ್ಲಿ ಚೇತನ್ ಕುಮಾರ್ ನಿರ್ದೇಶನದ ‘ಜೇಮ್ಸ್’ ಸಿನಿಮಾದ ಕೆಲಸಲ್ಲಿ ಬ್ಯುಸಿಯಾಗಿದ್ದರು.

ಪ್ರವೀತ್ ರಾಜಕುಮಾರ್ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ, ಪವರ್ ಸ್ಟಾರ್ ಎಂಬ ಬಿರುದನ್ನು ಪಡೆದುಕೊಂಡಿದ್ದರು. ಅವರು ನಟರಾಗಿಯμÉ್ಟೀ ಅಲ್ಲದೆ ಹಿನ್ನೆಲೆ ಗಾಯಕ, ನಿರ್ಮಾಪಕ, ದೂರದರ್ಶನ ನಿರೂಪಕರೂ ಆಗಿದ್ದ ಪುನೀತ್ ರಾಜ್ಕುಮಾರ್ ಅವರನ್ನು ಕಳೆದುಕೊಂಡಿರುವ ಚಿತ್ರರಂಗ ಬಡವಾಗಿದೆ.
1976 ರಲ್ಲಿ ತೆರೆಕ0ಡ ಡಾ.ರಾಜ್‍ಕುಮಾರ್ ಅಭಿನಯದ `ಪ್ರೇಮದ ಕಾಣಿಕೆ” ಚಿತ್ರದ ಮೂಲಕ ತೆರೆಯ ಮೇಲೆ ಕಾಣಿಸಿಕೊಂಡಿದ್ದಾಗ ಪುನೀತ್ ಆರು ತಿ0ಗಳು ಮಗುವಾಗಿದ್ದರು. ನ0ತರ ವಸ0ತ ಗೀತ (1980) ಮೂಲಕ ಬಾಲ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪುನೀತ್ ಸುಮಾರು ನಾಲ್ಕು ದಶಕಗಳ ತಮ್ಮ ಸಿನಿಜೀವನದಲ್ಲಿ ಬಾಲ ಕಲಾವಿದನಾಗಿ 14 ಚಿತ್ರಗಳು ಮತ್ತು ನಾಯಕ ನಟನಾಗಿ 28 ಚಿತ್ರಗಳಲ್ಲಿ ನಟಿಸಿದ್ದಾರೆ.

ಕನ್ನಡ ಚಿತ್ರರ0ಗಕ್ಕೆ ಅಪಾರ ಕೊಡುಗೆ ನೀಡಿರುವ ರಾಜ್ ಕುಮಾರ್ – ಪಾರ್ವತಮ್ಮ ಜೋಡಿಗೆ ಪುತ್ರನಾಗಿ ಪುನೀತ್ ರಾಜ್‍ಕುಮಾರ್. 1975 ರ ಮಾರ್ಚ್ 17 ರಂದು ಜನಿಸಿದರು. ಸಹೋದರರಾದ ಶಿವರಾಜಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಕೂಡ ಕನ್ನಡ ಚಿತ್ರರಂಗದ ಯಶಸ್ವಿ ನಾಯಕ ನಟರು. ಬಾಲ್ಯದಲ್ಲಿ ತನ್ನ ತಂದೆ ರಾಜಕುಮಾರ್ ಅಭಿನಯದ ಚಿತ್ರಗಳಲ್ಲಿ ಬಾಲ ನಟನಾಗಿ, ಭಾಗ್ಯವ0ತ, ಚಲಿಸುವ ಮೋಡಗಳು, ಎರಡು ಭೂಮಿಗೆ ಬ0ದ ಭಗವಂತ, ಸನಾದಿ ಅಪಣ್ಣ, ತಾಯಿಗೆ ತಕ್ಕ ಮಗ ಸೇರಿದಂತೆ. ಹಲವು ಚಿತ್ರಗಳ ಮೂಲಕ ಜನರ ಮನಗೆದ್ದಿದï್ದ ಪುನೀತ್ ಅವರ ಮೂಲ ಹೆಸರು ಲೋಹಿತ್. 1985ರಲ್ಲಿ ತೆರೆಕ0ಡ ಅವರ ನಟನೆಯ ಬೆಟ್ಟದ ಹೂವು ಚಿತ್ರದ ರಾಮು ಪಾತ್ರಕ್ಕೆ ರಾಷ್ಟ ಪ್ರಶಸ್ತಿಯನ್ನು ಪಡೆದಿದ್ದರು. ಚಲಿಸುವ ಮೋಡಗಳು” ಹಾಗೂ “ಎರಡು ಕನಸು’ ಚಿತ್ರಗಳಿಗಾಗಿ ಅತ್ಯುತ್ತಮ ಬಾಲ ನಟಿ ವಿಭಾಗದಲ್ಲಿ ರಾಜ್ಯ ಪ್ರಶಸ್ತಿ ಕೂಡ ಪಡೆದಿದ್ದರು
ಪುನೀತ್ 2002ರ ಅಪ್ಪು ಚಿತ್ರದ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆಗೆ ಕಾಲಿಟ್ಟರು. ಅವರ ಅಭಿ, ಆಕಾಶ್, ಅರಸು, ಮಿಲನ, ಜಾಕಿ, ಹುಡುಗರು , ಅಣ್ಣಾ ಬಾ0ಡ್, ಪವರ್, ಮೌರ್ಯ, ನಮ್ಮ ಬಸವ, ಪೃಥ್ವಿ, ವಂಶಿ, ರಾಜ್, ಪರಮಾತ್ಮ, ಯಾರೇ ಕೂಗಾಡಲಿ, ನಟಸಾರ್ವಭೌಮ, ರಾಜಕುಮಾರ, ಅ0ಜನಿಪುತ್ರ, ರಣವಿಕ್ರಮ, ದೊಡ್ಮನೆ ಹುಡುಗ, ರಾಮ್, ನಿನ್ನಿ0ದಲೇ, ಮೈತ್ರಿ, ಚಕ್ರವ್ಯೂಹ, ಯುವರತ್ತು ಸೇರಿದಂತೆ ಹಲವು ಯಶಸ್ಸಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಪುನೀತ್ ರಾಜ್‍ಕುಮಾರ್ ಚಿತ್ರ ನಿರ್ಮಾಪಕರಾಗಿ` ಕವಲು ದಾರಿ’, ಮಾಯಾಬಜಾರ್’, ಫ್ರೆ0ಚ್ ಬಿರಿಯಾನಿ, ಲಾ, ಫ್ಯಾಮಿಲಿ ಪ್ಯಾಕ್ ಎ0ಬ.ರ್ ಚಿತ್ರಗಳನ್ನು ಪಿಆರ್‍ಕೆ ಪೆÇ್ರಡಕ್ಷನ್ ಎ0ಬ ತಮ್ಮ ಹೋಮ್ ಬ್ಯಾನರ್‍ನಲ್ಲಿ ನಿರ್ಮಿಸಿದ್ದರು. ಜೊತೆಗೆ ಪೆÇ್ರಡಕ್ಷನ್ ಹೌಸ್ ಮೂಲಕ ಕಿರುತೆರೆ. ಧಾರಾವಾಹಿಗಳನ್ನು ಕೂಡ ನಿರ್ಮಿಸಿದ್ದಾರೆ. ತಾಯಿಯ ನೆನಪಿನಲ್ಲಿ ಪಿ.ಆರ್.ಕೆ “ಆಡಿಯೋ ಕ0ಪನಿಯೊ0ದನ್ನು ಸ್ಥಾಪಿಸಿದ್ದಾರೆ.


ಜೊತೆಗೆ ಪ್ರಸಿದ್ದ ಟಿವಿ ಕಾರ್ಯಕ್ರಮ ಕನ್ನಡದ ಕೋಟ್ಯಾಧಿಪತಿ, ಫ್ಯಾಮಿಲಿ ಪವರ್ ಶೋ ಗಳನ್ನು ನಿರೂಪಣೆ ಮಾಡಿ ಸೈ ಎನ್ನಿಸಿಕೊಂಡಿದ್ದರು. ಡಿಸೆ0ಬರ್ 1 – 1999 ರ0ದು ಚಿಕ್ಕಮಗಳೂರಿನ ಅಶ್ವಿನಿ ರೇವ0ತ್ ಇವರು ವಿವಾಹವಾಗಿದ್ದರು ಈ ದಂಪತಿಗೆ ಈಗ ಧೃತಿ ಮತ್ತು ವಂದಿತಾ ಎ0ಬ ಪುತ್ರಿಯರಿದ್ದಾರೆ.
ಇವರ ನಿಧದಿಂದ ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲ ಭಾರತದ ಇಡೀ ಚಿತ್ರರಂಗಕ್ಕೆ ಅಘಾತವಾಗಿದೆ.