ಶ್ರೀನಿವಾಸಪುರ, ಜೂ.22ಸರ್ಕಾರಿ ಆಸ್ಪತ್ರೆ ಮತ್ತು ಸರ್ಕಾರಿ ವೈದ್ಯರ ಬಗ್ಗೆ ಸಾರ್ವಜನಿಕರಲ್ಲಿರುವ ಅಸಡ್ಡೆ ಮನೋಭಾವ ದೂರವಾಗಬೇಕು, ವೈದ್ಯಕೀಯ ವೆಚ್ಚ ದುಬಾರಿಯಾಗಿರುವುದರಿಂದ ಹಲವಾರು ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದಾವೆ ಆದ್ದರಿಂದ ಯಾವುದೇ ರೀತಿಯ ಖಾಯಿಲೆಗಳಿದ್ದರೂ ಸರ್ಕಾರಿ ಆಸ್ಪತ್ರೆಗಳಲ್ಲಿ ನುರಿತ ವೈದ್ಯರು ಇದ್ದಾರೆ. ಅಂತಹ ಕಡೆ ವೈದ್ಯಕೀಯ ಸೇವೆ ಪಡೆದರೆ ಉತ್ತಮ ಎಂದು ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಸೋಮಯಾಜಲಹಳ್ಳಿ ರಮೇಶ್ಬಾಬು ಅಭಿಪ್ರಾಯಪಟ್ಟರು.
ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಾದ ಸಂಜಯಗಾಂಧಿ ಟ್ರಾಮ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಯ ನಿರ್ದೇಶಕರಾದ ನಿರಂಜನಗೌಡ ಮತ್ತು ಸಂಸ್ಥೆಯ ಪ್ರಾದ್ಯಾಪಕ ಹಾಗೂ ಮುಖ್ಯಸ್ಥರಾದ ಎಂ.ಎಸ್. ಮೋಹನ್ ರವರನ್ನು ಸನ್ಮಾನಿಸಿ ಮಾತನಾಡಿದ ಅವರು ಸರ್ಕಾರಿ ಅಧೀನದಲ್ಲಿ ನಡೆಯುವ ಸಂಜಯಗಾಂಧಿ ಆಸ್ಪತ್ರೆಯಲ್ಲಿ ಕಳೆದ 10 ದಿನಗಳಿಂದ ನಾನು ಚಿಕಿತ್ಸೆ ಪಡೆಯುತ್ತಿದ್ದೆ ಆಗ ಕಂಡಂತಹ ಅವರ ಸೇವಾ ಮನೋಭಾವ ಸಾರ್ವಜನಿಕ ಮೆಚ್ಚುಗೆಗೆ ಸಾಕ್ಷಿಯಾಗಿದೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಹಲವಾರು ಖಾಯಿಲೆಗಳಿಂದ ನರಳುವ ಜನರೊಂದಿಗೆ ಬೆರೆತು ಉತ್ತಮ ಚಿಕಿತ್ಸೆ ನೀಡುವುದರ ಜೊತೆಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಸಂಸ್ಥೆಯ ನಿರ್ದೇಶಕರು ಸೇರಿದಂತೆ ಅವರ ಸಿಬ್ಬಂಧಿ ಮಾಡುತ್ತಾರೆ. ಆದ್ದರಿಂದ ನನ್ನ ಕೃತಜ್ಞತೆಯನ್ನು ಸಂಸ್ಥೆಯ ತಂಡಕ್ಕೆ ಸಲ್ಲಿಸಲಾಗಿದೆ ಎಂದರು.
ಸಂಸ್ಥೆಯ ನಿರ್ದೇಶಕ ಎಂ.ಆರ್. ನಿರಂಜನ್ಗೌಡ ಮಾತನಾಡಿ ಹಲವಾರು ವರ್ಷಗಳಿಂದ ಈ ಸಂಸ್ಥೆ ಬಡವರು ಮತ್ತು ಉಳ್ಳವರು ಎಂಬ ಬೇಧಬಾವ ತೋರದೆ ಇಲ್ಲಿ ಬರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ನಮ್ಮ ಜವಬ್ದಾರಿ ಅವಧಿಯಲ್ಲಿ ಇನ್ನಷ್ಟು ಸಾರ್ವಜನಿಕ ಸೇವೆ ಮುಂದುವರೆಸಲು ಇಂತಹ ಅಭಿನಂದನೆಗಳು ನಮ್ಮನ್ನು ಪ್ರೇರೆಪಿಸುತ್ತವೆ ಎಂದು ಪ್ರಶಂಸಿಸಿದರು.
ಈ ಸಂಧರ್ಭದಲ್ಲಿ ಕಾಂಗ್ರೇಸ್ ಹಿರಿಯ ಮುಖಂಡ ಸೋಮಯಾಜಲಹಳ್ಳಿ ಸಿ.ಎಸ್. ಪ್ರಸಾದ್, ಸಂಸ್ಥೆಯ ಸಿಬ್ಬಂಧಿಯಾದ ಡಾ|| ಸಿದ್ದೇಶ್ ಪಾಟೀಲ್, ಡಾ|| ಧರಣಿ ಚಿತ್ರ, ಡಾ|| ಎಂ.ಕೆ. ಆನ್ವೀಶ್, ಡಾ|| ಅರ್ಜುನ್, ಡಾ|| ಪ್ರಜ್ವಲ್, ಡಾ|| ಎನ್. ದರ್ಶನ್, ಡಾ|| ಅನಿಲ್ ಇತರರು ಇದ್ದರು.