

ಗಂಗೊಳ್ಳಿ; ಕೊಸೆಸಾಂವ್ ಮಾತಾ ದೇವಾಲಯ ಗಂಗೊಳ್ಳಿಯಲ್ಲಿ ಕಥೊಲಿಕ್ ಸಭಾ ಗಂಗೊಳ್ಳಿ ಘಟಕದ ಮುಂದಾಳತ್ವದಲ್ಲಿ, ಚರ್ಚ್ ಆರೋಗ್ಯ ಆಯೋಗ, ಗುರು ಜ್ಯೋತಿ ಸ್ಪೋರ್ಟ್ಸ್ ಕ್ಲಬ್, ಸೋಶಿಯಲ್ ವೆಲ್ಫೇರ್ ಫೆಡರೇಶನ್ ಸಹಯೋಗದೊಂದಿಗೆ ಮಾರ್ಚ್ 23 ಭಾನುವಾರ ಬೆಳಿಗ್ಗೆ ಅರ್ಧ ದಿನದ ” ಸಾರ್ವಜನಿಕ ಆರೋಗ್ಯ ತಪಾಸಣಾ ಶಿಬಿರ”ವು ಸಂತ ಜೋಸೆಫ್ ವಾಜ್ ಸಭಾಂಗಣದಲ್ಲಿ ಜರಗಿತು. ಶಿಬಿರದಲ್ಲಿ ಸಾರ್ವಜನಿಕರಿಗೆ ಉಚಿತ ಬಿಪಿ, ಡಯಾಬಿಟಿಸ್ ತಪಾಸಣೆ, ರಕ್ತವರ್ಗೀಕರಣ, ಪ್ಯಾಕೇಜ್ ಮೂಲಕ ಕಡಿಮೆ ದರದಲ್ಲಿ ವಿವಿಧ ರೀತಿಯ ರಕ್ತ ಪರೀಕ್ಷೆಗಳನ್ನು ಬಯೋಲೈನ್ ಲ್ಯಾಬೋರೇಟರಿ ಕುಂದಾಪುರ ಇವರ ಸಹಕಾರದೊಂದಿಗೆ ನಡೆಸಲಾಯಿತು.
ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ) ಗಂಗೊಳ್ಳಿಯ ಅಧ್ಯಕ್ಷರಾದ ಶ್ರೀ ಎಡ್ವರ್ಡ್ ಫೆರ್ನಾಂಡಿಸ್ ರವರು ಅಧ್ಯಕ್ಷತೆ ವಹಿಸಿದಂತಹ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಚರ್ಚ್ ನ ಧರ್ಮಗುರು ಹಾಗೂ ಕಥೊಲಿಕ್ ಸಭಾದ ಆಧ್ಯಾತ್ಮಿಕ ನಿರ್ದೇಶಕರಾದ ವಂದನಿಯ ಥಾಮಸ್ ರೋಶನ್ ಡಿಸೋಜ, ಆರೋಗ್ಯ ಆಯೋಗದ ಸಂಚಾಲಕಿ ಶ್ರೀಮತಿ ಗ್ಲೋರಿಯಾ ಫೆರ್ನಾಂಡಿಸ್, ಗುರು ಜ್ಯೋತಿ ಸ್ಪೋರ್ಟ್ಸ್ ಕ್ಲಬ್ (ರಿ.) ಗಂಗೊಳ್ಳಿ ಇದರ ಅಧ್ಯಕ್ಷರಾದ ಶ್ರೀ ವಿಜಯ್ ಖಾರ್ವಿ, ಸೋಶಿಯಲ್ ವೆಲ್ಫೇರ್ ಫೆಡರೇಶನ್ ಗಂಗೊಳ್ಳಿ ಇದರ ಅಧ್ಯಕ್ಷರಾದ ಶ್ರೀ ಅಬ್ದುಲ್ ರಶೀದ್, ಬಯೋಲಿನ್ ಲ್ಯಾಬೋರೇಟರಿ ಕುಂದಾಪುರ ಇದರ ಮ್ಯಾನೇಜಿಂಗ್ ಪಾರ್ಟ್ನರ್ ಸೋಮನಾಥ್, ಸ್ಟಾರ್ ಹೆಲ್ತ್ ಇನ್ಸೂರೆನ್ಸ್ ಇದರ ಸೀನಿಯರ್ ಮ್ಯಾನೇಜರ್ ಶ್ರೀ ಗುರುರಾಜ್ ಗೋತ್ವಾಲ್, ಕಥೊಲಿಕ್ ಸಭಾ ಗಂಗೊಳ್ಳಿಯ ಮಾರ್ಗದರ್ಶಕರಾದ ಶ್ರೀ ಆಲ್ವಿನ್ ಕ್ವಾಡ್ರಸ್ ಹಾಜರಿದ್ದರು. ಧರ್ಮಾರ್ಥವಾಗಿ ದೇವರು ನೀಡಿದ ಈ ದೇಹದ ಆರೋಗ್ಯವನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಇದಕ್ಕಾಗಿ ನಾವು ಮೊದಲೇ ಮುನ್ನೆಚ್ಚರಿಕೆಯನ್ನು ವಹಿಸುವುದು ಜಾಣತನವೆಂದು ಧರ್ಮ ಗುರುಗಳಾದ ವಂದನೀಯ ಥಾಮಸ್ ರೋಶನ್ ಡಿಸೋಜ ರವರು ಹಿತನುಡಿಗಳನ್ನು ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು . ಶ್ರೀ ಗುರುರಾಜ್ ಕೊತ್ವಾಲ್ ಹೃದಯಘಾತದ ಸಂದರ್ಭದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಮತ್ತು ಪ್ರಥಮ ಚಿಕಿತ್ಸೆಯ ಬಗ್ಗೆ ಮಾಡೆಲ್ ಮುಖಾಂತರ ಮಾಹಿತಿ ನೀಡಿದರು.
ಕಾರ್ಯಕ್ರಮಕ್ಕೆ ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ) ನ ಕೇಂದ್ರಿಯ ಸಮಿತಿಯ ಪ್ರಥಮ ಅಧ್ಯಕ್ಷರಾದ ಶ್ರೀ ಎಲ್ರೊಯ್ ಕಿರಣ್ ಕ್ರಾಸ್ತಾ, ಕಥೋಲಿಕ್ ಸಭಾ ಕುಂದಾಪುರ ವಲಯ ಮಾಜಿ ಅಧ್ಯಕ್ಷರಾದ ಶ್ರೀ ಹೆರಿಕ್ ಗೊನ್ಸಾಲ್ವಿಸ್ ಮತ್ತು ಶ್ರೀ ಮೈಕಲ್ ಪಿಂಟೊ ಉಪಸ್ಥಿತರಿದ್ದರು.
ಶ್ರೀ ಎಡ್ವರ್ಡ್ ಫೆರ್ನಾಂಡಿಸ್ ಎಲ್ಲರನ್ನು ಸ್ವಾಗತಿಸಿದರು, ಘಟಕದ ಉಪಾಧ್ಯಕ್ಷರಾದ ಶ್ರೀ ವಿಲ್ಸನ್ ಡಯಾಸ್ ಧನ್ಯವಾದಗೈದರು.ಘಟಕದ ನಿಯೋಜಿತ ಅಧ್ಯಕ್ಷರು ಹಾಗೂ ಕಾರ್ಯಕ್ರಮದ ಸಂಚಾಲಕರಾದ ಶ್ರೀ ಓವಿನ್ ರೆಬೆಲ್ಲೊ ಕಾರ್ಯಕ್ರಮವನ್ನು ನಿರೂಪಿಸಿದರು. ಸರಿಸುಮಾರು 150 ಜನರು ಮಾಹಿತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ. 100 ಕ್ಕೂ ಅಧಿಕ ಜನರು ಈ ತಪಾಸಣ ಕಾರ್ಯಕ್ರಮದ ಪ್ರಯೋಜನವನ್ನು ಪಡೆದರು.












