ಪಿಎಸ್‍ಟಿ ಇಂಗ್ಲೀಷ್ ಹೆಚ್ಚುವರಿ ಶಿಕ್ಷಕರನ್ನು ಜಿಲ್ಲೆಯಲ್ಲೇ
ಉಳಿಸಲು ನೌಕರರ ಸಂಘದಿಂದ ಮನವಿ-ಸುರೇಶ್‍ಬಾಬು

ಕೋಲಾರ:- ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಹೆಚ್ಚುವರಿಯಾಗಿ ಗುರುತಿಸಿರುವ ಪಿಎಸ್‍ಟಿ ಇಂಗ್ಲೀಷ್ ಶಿಕ್ಷಕರನ್ನು ಆಯಾ ತಾಲ್ಲೂಕಿನಲ್ಲೇ ಉಳಿಸಲು ರಾಜ್ಯ ನೌಕರರ ಸಂಘದ ಮೂಲಕ ಸರ್ಕಾರದ ಮೇಲೆ ಒತ್ತಡ ಹಾಕಲು ಕ್ರಮವಹಿಸುವುದಾಗಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‍ಬಾಬು ಶಿಕ್ಷಕರಿಗೆ ಭರವಸೆ ನೀಡಿದರು.
ಹೆಚ್ಚುವರಿಯಾಗಿರುವ ನಮ್ಮನ್ನು ಆಯಾ ತಾಲ್ಲೂಕಿನಲ್ಲೇ ಉಳಿಸಲು ಆಗ್ರಹಿಸಿ ಪಿಎಸ್‍ಟಿ ಇಂಗ್ಲೀಷ್ ಶಿಕ್ಷಕರು ನೀಡಿದ ಮನವಿ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಕೋಲಾರ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ಪಿಎಸ್‍ಟಿ ಇಂಗ್ಲೀಷ್ ಶಿಕ್ಷಕರನ್ನು ಹೆಚ್ಚುವರಿ ಪಟ್ಟಿಯಲ್ಲಿ ಗುರುತಿಸಲಾಗಿದೆ, ಆದರೆ ಎಲ್ಲಾ ತಾಲ್ಲೂಕುಗಳಲ್ಲೂ ಪಿಎಸ್‍ಟಿ ಇಂಗ್ಲೀಷ್ ಶಿಕ್ಷಕರ ಹುದ್ದೆಗಳು ಅಗತ್ಯ ಪ್ರಮಾಣದಲ್ಲಿ ಖಾಲಿ ಇಲ್ಲ ಎಂದು ಮನವರಿಕೆ ಮಾಡಿಕೊಟ್ಟರು.
ಹುದ್ದೆಗಳು ಖಾಲಿ ಇಲ್ಲವಾದ್ದರಿಂದ ನಮ್ಮನ್ನು ಇತರೆ ಜಿಲ್ಲೆಗಳಿಗೆ ಹಾಕುವ ಆತಂಕವಿದ್ದು, ಇದಕ್ಕೆ ಕಡಿವಾಣ ಹಾಕಲು ರಾಜ್ಯ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್.ಷಡಕ್ಷರಿ ಅವರ ಮೂಲಕ ಸರ್ಕಾರಕ್ಕೆ ಒತ್ತಡ ಹಾಕಲು ಕೋರಿದರು.
ಹೆಚ್ಚುವರಿಯಾಗಿರುವ 1-5 ಬೋಧಿಸುತ್ತಿರುವ ಎಲ್ಲಾ ಪಿಎಸ್‍ಟಿ ಇಂಗ್ಲೀಷ್ ಶಿಕ್ಷಕರನ್ನು ಸಾಮಾನ್ಯ ಶಿಕ್ಷಕರೆಮದು ಪರಿಗಣಿಸಿ ಕೌನ್ಸಿಲಿಂಗ್‍ನಲ್ಲಿ ಅವಕಾಶ ಕಲ್ಪಿಸಲು ಮನವಿ ಮಾಡಿದರು.
ಮನವಿ ನೀಡಿಕೆ ಸಂದರ್ಭದಲ್ಲಿ ಶಿಕ್ಷಕರಾದ ಕೆ.ಎಸ್.ಸೌಮ್ಯ, ಎಲ್. ಆನಂದ್,ಸಂಗೀತಾ, ಸರಿತಾ ಮತ್ತಿತರ ಶಿಕ್ಷಕರು ಹಾಜರಿದ್ದರು.