ಶ್ರೀನಿವಾಸಪುರ : ಪ್ರತಿ ಪಂಚಾಯಿತಿಗೊಂದು ರಾಗಿ ಹಾಗೂ ಭತ್ತ ಕಟಾವು ಯಂತ್ರೋಪಕರಣಗಳನ್ನು ಕೃಷಿ ಇಲಾಖೆಯಿಂದ ಉಚಿತವಾಗಿ ನೀಡುವ ಜೊತೆಗೆ ಖಾಸಗಿ ಉಯಂತ್ರಗಳ ದುಬಾರಿ ಬೆಲೆ ನಿಯಂತ್ರಣಕ್ಕೆ ಕಡಿವಾಣ ಹಾಕಿ ರೈತರ ರಕ್ಷಣೆ ಮಾಡಬೇಕು ಪತ್ರಿಕಾ ಹೇಳಿಕೆ ಮುಖಾಂತರ ಕೃಷಿ ಅಧಿಕಾರಿಗಳನ್ನು ರೈತ ಸಂಘದಿಂದ ಕೃಷಿ. ಅಧಿಕಾರಿಗಳಿಗೆ ರೈತ ಸಂಘದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ ಒತ್ತಾಯಿಸಿದರು.
ಪಟ್ಟಣದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಭಾನುವಾರ ರೈತ ಸಂಘದ ವತಿಯಿಂದ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ರಾಗಿ ಹಾಗೂ ಭತ್ತ ಬೆಳೆದಿರುವ ರೈತರಿಗೆ ಬೆಳೆಗಳನ್ನು ಸಕಾಲಕ್ಕೆ ಕಟಾವು ಮಾಡು ಯಂತ್ರೋಪಕರಣಗಳು ಸಿಗದೆ ತೀವ್ರ ಸಂಕಷ್ಠಕ್ಕೆ ಸಿಲುಕಿದ್ದಾರೆ ಸರ್ಕಾರ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಯಂತ್ರದಾರೆ ಯೋಜನೆಯನ್ನು ಸಮಪರ್ಕವಾಗಿ ನಿರ್ವಹಣೆ ಮಾಡದೇ ಸಂಪೂರ್ಣವಾಗಿ ನಿರ್ಲಕ್ಷ್ಯಿಸಿದ್ದಾರೆ . ಬೆಳೆ ಕಟಾವು ಮಾಡಲು ಸಕಾಲಕ್ಕೆ ಕೂಲಿ ಕಾರ್ಮಿಕರು ಸಿಗದೆ ವಿಧಿಯಿಲ್ಲದೆ ದುಪ್ಪಟ್ಟು ಹಣ ಪಾವತಿಸಿ ಖಾಸಗಿ ಯಂತ್ರೋಪಕರಣ ಕಡೆ ಮುಖ ಮಾಡುವ ಪರಿಸ್ಥಿತಿ ಎದುರಾಗಿದೆ ಎಂದು ಆರೋಪಿಸಿದರು.
ಖಾಸಗೀ ಕಟಾವು ಯಂತ್ರೋಪರಣಗಳ ಮಾಲೀಕರು ದುಪ್ಪಟ್ಟ ಬೆಲೆಯನ್ನು ಪ್ರತಿ ಎಕರೆಗೆ ಆರರಿಂದ ಹತ್ತು ಸಾವಿರ ವರೆಗೆ ನಿಗದಿ ಮಾಡಿ ರೈನ್ನು ಆರ್ಥಿಕ ಸಂಕಷ್ಟಕ್ಕೆ ಈಡಾಗುಂತೆ ಮಾಡಿದ್ದಾರೆ ಜಿಲ್ಲೆಗೆ ಈಗಾಗಲೇ ತಮಿಳುನಾಡು ಆಂದ್ರದಿಂದ ಕಟಾವು ಯಂತ್ರಗಳು ಕಾಲಿಟ್ಟಿದ್ದು ಪ್ರತಿ ಎಕರೆ ತಮಗೆ ಇಷ್ಟ ಬಂದ ರೀತಿ ಧರ ನಿಗದಿಮಾಡಿದ್ದು, ರೈತರನ್ನು ಶೋಷಣೆ ಮಾಡುತ್ತಿದ್ದರೂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಯಾಕೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ತಾಲ್ಲೂಕಕ ಅಧ್ಯಕ್ಷ ತೆರ್ನಹಳ್ಳಿ.ಅಂಜಿನಪ್ಪ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೇಸ್ ಸರ್ಕಾರ ರಾಜ್ಯದಲ್ಲಿ ಉಚಿತ ಗ್ಯಾರಂಟಿ ಯೋಜನೆಗಳಿಗೆ ಹಣವನ್ನು ಕ್ರೋಡೀಕರಿಸಲು ಮುಂದಾಗಿರುವುದು ಬಿಟ್ಟರೆ ಕೃಷಿಯೇತರ ಚಟುವಟಿಕೆಗೆ ಅಂತಂತ್ರ ಪರಿಸ್ಥಿತಿ ಎದುರಿಸುತ್ತಿದೆ ರೈತರು ಬೆಳೆದಿರುವ ರಾಗಿ ಹಾಗೂ ಭತ್ತದ ಬೆಳೆಗಳನ್ನು ಸಕಾಲಕ್ಕೆ ಕಟಾವು ಮಾಡಿ ರಕ್ಷಣೆ ಮಾಡಿಕೊಳ್ಳಲು ಪರದಾಡುವ ಜೊತೆಗೆ ಕೃಷಿ ಇಲಾಖೆಯಿಂದ ಕಟಾವು ಯಂತ್ರಗಳು ಪರಾಡುವಂತಾಗಿದೆ ರೈತರಿಗೆ ಕೃಷಿ ಇಲಾಖೆಯಿಂದ ಕಟಾವು ಯಂತ್ರೋಪಕರಣಗಳನ್ನು ಉಚಿತವಾಗಿ ಇಲ್ಲದೆ ಸಬ್ಸಿಡಿ ರೂಪದಲ್ಲಿ ನೀಡುತ್ತಾರೆ ಎಂಬ ಆಶಾಭಾವನೆಯಿಂದ ಕಾದುಕುಳಿತಿದ್ದಾರೆ ಆದರೆ ಕೃಷಿ ಇಲಾಖೆ ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಮಂತ್ರಿಗಳು ಇತ್ತ ಗಮನ ಹರಿಸದೇ ಇರುವುದು ಜಿಲ್ಲೆಯ ರೈತರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದರು.
ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ ಅಲವಟಿ ಶಿವು ರಾಜೇಂದ್ರಗೌಡ ಇದ್ದರು.