

ಕೋಲಾರ,ಜೂ.21: ಇಂಡಿಯನ್ ಯೂನಿಯನ್ ಮುಸ್ಲೀಮ್ ಲೀಗ್ ವತಿಯಿಂದ ಕೋಲಾರದ ನೂತನ ಜಿಲ್ಲಾಧಿಕಾರಿಗಳಾದ ಅಕ್ರಂಪಾಶ ಅವರನ್ನು ಭೇಟಿ ಮಾಡಿ ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ನಗರದಲ್ಲಿರುವ ರಸ್ತೆಗಳ ಸಮಸ್ಯೆ, ಯು.ಜಿ.ಡಿ, ಕಸ ವಿಲೇವಾರಿ ಸೇರಿದಂತೆ ಇನ್ನಿತರೆ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮ ವಹಿಸಿ ಸಾರ್ವಜನಿಕರಿಗೆ ಅನಕೂಲ ಮಾಡಿಕೊಡಬೇಕೆಂದು ಮನವಿ ಸಲ್ಲಿಸಿದರು.
ನಿಯೋಗದಲ್ಲಿ ಇಂಡಿಯನ್ ಯೂನಿಯನ್ ಮುಸ್ಲೀಮ್ ಲೀಗ್ ಜಿಲ್ಲಾಧ್ಯಕ್ಷ ಶೇಖ್ ಆಶ್ರಫ್ಆಲಿ, ಜಿಲ್ಲಾ ಕಾರ್ಯದರ್ಶಿ ಸೈಯದ್ ಸಿಬ್ಗತ್ವುಲ್ಲಾ, ವಜೀರ್ಪಾಷ, ಇಮ್ರಾನ್ಪಾಷ, ಸೈಯದ್ ನೂರ್ ಇನ್ನಿತರರು ಉಪಸ್ಥಿತರಿದ್ದರು.
