ಮಾವು ಮಾರುಕಟ್ಟೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಮಾವು ಪಸಲಿಗೆ ಬಾಧಿಸುತ್ತಿರುವ ನುಸಿ, ಕಪ್ಪುಚುಕ್ಕೆ, ಹಾಗೂ ಜಿಗಣಿ ಹುಳಗಳ ನಿಯಂತ್ರಣಕ್ಕೆ ಉಚಿತ ಔಷಧಿ ನೀಡಿ

ಶ್ರೀನಿವಾಸಪುರ, ಏ.19: ಮಾವು ಮಾರುಕಟ್ಟೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಮಾವು ಪಸಲಿಗೆ ಬಾಧಿಸುತ್ತಿರುವ ನುಸಿ, ಕಪ್ಪುಚುಕ್ಕೆ, ಹಾಗೂ ಜಿಗಣಿ ಹುಳಗಳ ನಿಯಂತ್ರಣಕ್ಕೆ ಉಚಿತ ಔಷಧಿ ನೀಡಬೇಕೆಂದು ಏ.22 ರ ಶನಿವಾರ ರೋಗ ಮಾವು ಸಮೇತ ತಾಲ್ಲೂಕಾಡಳಿತ ಮುತ್ತಿಗೆ ಹಾಕಲು ರೈತ ಸಂಘದ ಸಭೆಯಲ್ಲಿ ತಿರ್ಮಾನಿಸಲಾಯಿತು.
ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಕರೆದಿದದ್ದ ರೈತ ಸಂಘದ ಸಭೆಯಲ್ಲಿ ಮಾತನಾಡಿದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಇಡೀ ಪ್ರಪಂಚಕ್ಕೆ ಮಾವನ್ನು ಕೊಡುವ ಮಾವಿನ ಮಡಿಲು ಶ್ರೀನಿವಾಸಪುರ ಮಾವು ಬೆಳೆಗಾರರಿಗೆ ಮೂಲಭೂತ ಸೌಕರ್ಯಗಳುಳ್ಳ ಮಾರುಕಟ್ಟೆಯನ್ನು ಕಲ್ಪಿಸುವಲ್ಲಿ ತಾಲ್ಲೂಕಾಡಳಿತ ವಿಪಲವಾಗಿದೆ. ಪ್ರತಿವರ್ಷ ಬದುಕು ಕಟ್ಟಿಕೊಳ್ಳಲು ಬರುವ ಸಾವಿರಾರು ಹೊರ ರಾಜ್ಯದ ಕಾರ್ಮಿಕರು ಆನಾರೊಗ್ಯದಿಂದ ನರಳಬೇಕಾದ ಪರಿಸ್ಥಿತಿ ಇದೆ ಎಂಧು ಮಾರುಕಟ್ಟೆಯ ಅವ್ಯವಸ್ಥೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು
ಕೋಟ್ಯಾಂತರ ರೂಪಾಯಿ ವಹಿವಾಟು ನಡೆಯುವ ಮಾರುಕಟ್ಟೆಯಲ್ಲಿ ಸಿ.ಸಿ ಕ್ಯಾಮಾರಗಳಿಲ್ಲ, ಕುಡಿಯುವ ನೀರಿನ ವ್ಯವಸ್ಥೆ, ಗುಣಮಟ್ಟದ ಊಟ ಇಲ್ಲದ ಜೊತೆಗೆ ಕೊಳೆತ ಮಾವು ಸರಿಯಾಗಿ ಸಂಸ್ಕರಣೆ ಮಾಡಲು ಜಾಗವಿಲ್ಲದೆ ಮಾರುಕಟ್ಟೆಯ ಸುತ್ತಮುತ್ತಲೂ ಸುರಿದು ತ್ಯಾಜ್ಯ ವಾಸನೆಗೆ ಜನಸಾಮಾನ್ಯರು ,ವ್ಯಾಪರಸ್ಥರು , ಕೂಲಿಕಾರ್ಮಿಕರು ಆನಾರೋಗ್ಯ ಪೀಡಿತರಾಗುತ್ತಿದ್ದರೂ ಮುಂಜಾಗೃತವಾಗಿ ಮಾರುಕಟ್ಟೆಯನ್ನು ಅಭಿವೃದ್ದಿಪಡಿಸುವಲ್ಲಿ ಅಧಿಕಾರಿಗಳು ವಿಪಲವಾಗಿದ್ದಾರೆಂದು ಅಸಮಾದಾನ ವ್ಯಕ್ತಪಡಿಸಿದರು.
ವರ್ಷ ಪೂರ್ತಿ ಮಾವಿಗೆ ಬಾಧಿಸುವ ರೋಗ ನಿಯಂತ್ರಣಕ್ಕೆ ಹರಸಾಹಸ ಪಡುವ ರೈತರಿಗೆ ಅಕಾಲಿಕ ಮುಂಗಾರು ಆಲಿಕಲ್ಲು ಮಳೆ ರೈತರು ಬದುಕನ್ನೇ ಕಸಿಯುತ್ತಿದ್ದರೆ ಇರುವ ಪಸಲನ್ನು ಮಾರುಕಟ್ಟೆಗೆ ತಂದರೆ ಮಂಡಿ ಮಾಲೀಕರು ಮೀಟರ್ ಬಡ್ಡಿ ದಂದೆಯಂತೆ 100 ಕ್ಕೆ 10 ರೂ ಕಮೀಷನ್, ಪಡೆಯುತ್ತಿದ್ದರೂ ತಡೆಯಬೇಕಾದ ಅಧಿಕಾರಿಗಳು ನಾಪತ್ತೆ ಆಗಿದ್ದಾರೆಂದು ವ್ಯಂಗ್ಯವಾಡಿದರು.
ತಾಲ್ಲೂಕಾದ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ ಮಾತನಾಡಿ ಅಕಾಲಿಕ ಮುಂಗಾರು ಆಲಿಕಲ್ಲು ಬಿರುಗಾಳಿ ಮಳೆ ಅರ್ದ ಮಾವು ಪಸಲನ್ನು ಕಸಿದರೆ ಇನ್ನೂಳಿದ ಪಸಲನ್ನು ಜಿಗಣಿ ಹುಳ ಹಾಗೂ ಕಪ್ಪು ಚುಕ್ಕೆ ಕಾಯಿಗೆ ಬಾದಿಸುತ್ತಿರುವುದರಿಂದ ಸಂಪೂರ್ಣವಾಗಿ ಪಸಲು ಕಳೆದುಕೊಳ್ಳುವ ಬೀತಿಯಲ್ಲಿ ರೈತರಿದ್ದಾರೆ. ಸಮಸ್ಯೆಗೆ ಸ್ಪಂದಿಸಬೇಕಾದ ಅಧಿಕಾರಿಗಳು ಚುನಾವಣೆ ಬ್ಯೂಸಿಯಲ್ಲಿ ತಲ್ಲೀನರಾಗಿ ಕೇಳಿದರೆ ಹಾರಿಕೆ ಉತ್ತರ ನೀಡುವ ಜೊತೆಗೆ ಯಾವ ಹುಳ ಬಂದಿದೆ ಯಾವ ಬಣ್ಣ ಎಂದು ರೈತರ ಜೊತೆ ಚೆಲ್ಲಾಟ ಅಧಿಕಾರಿಗಳು ಆಡಿದರೆ ಇನ್ನೂ ರೋಗ ನಿಯಂತ್ರಣಕ್ಕೆ ಲಕ್ಷಾಂತರ ರೂ ಹಣ ನೀಡಿ ಖರೀದಿ ಮಾಡಿ ಸಿಂಪರಣೆ ಮಾಡಿದರೆ ಕನಿಷ್ಟ ಪಕ್ಷ ಎಲೆಯ ಮೇಲಿನ ಸೊಳ್ಳೆ ಸಹ ಹೋಗುತ್ತಿಲ್ಲ ಅಷ್ಟರ ಮಟ್ಟಿಗೆ ಔಷಧಿಗಳ ಗುಣಮಟ್ಟ ಕಳಪೆ ಆಗಿದ್ದರೂ ಕ್ರಮ ಕೈಗೊಳ್ಳಬೇಕಾದ ಕೃಷಿ ಗುಣಮಟ್ಟದ ನಿಯಂತ್ರಣ ಅಧಿಕಾರಿಗಳು ನಾಪತ್ತೆ ಆಗಿದ್ದಾರೆಂದು ಕಿಡಿಕಾರಿದರು.
24 ಗಂಟೆಯಲ್ಲಿ ಮಾವು ಮಾರುಕಟ್ಟೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಮಾವು ಪಸಲಿಗೆ ಬಾಧಿಸುತ್ತಿರುವ ನುಸಿ, ಕಪ್ಪುಚುಕ್ಕೆ, ಹಾಗೂ ಜಿಗಣಿ ಹುಳಗಳ ನಿಯಂತ್ರಣಕ್ಕೆ ಉಚಿತ ಔಷಧಿ ನೀಡಬೇಕೆಂದು ಏ.22 ರ ಶನಿವಾರ ರೋಗ ಮಾವು ಸಮೇತ ತಾಲ್ಲೂಕಾಡಳಿತ ಮುತ್ತಿಗೆ ಹಾಕುವ ಕಾರ್ಯಕ್ರಮಕ್ಕೆ ಹೆಚ್ಚಿನ ರೈತರು ಭಾಗವಹಿಸಬೇಕೆಂಧು ಮನವಿ ಮಾಡಿದರು.
ಸಭೆಯಲ್ಲಿ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ, ಲೋಕೇಶ್, ಆಲವಟ್ಟಿ ಶಿವ, ಸಹದೇವಣ್ಣ, ಸಂತೋಷ್, ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ಕೋಟೆ ಶ್ರೀನಿವಾಸ್, ಕಲ್ಲೂರು ವೆಂಕಟ್, ಯಲ್ಲಪ್ಪ, ಗೀರಿಶ್, ಮಂಜುಳಾಮ್ಮ, ರಾಧ, ಶೈಲ, ಮುಂತಾದವರಿದ್ದರು.