

ಬ್ರಹ್ಮಾವರ ; ಉಡುಪಿ ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಬಹು ಕೋಟಿ ವಂಚನೆಯ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ 27ನೇ ದಿನದಂದು ಜಿಲ್ಲಾ ಕ್ರೈಸ್ತ ನಾಯಕರುಗಳು ಭಾಗವಹಿಸಿದ್ದರು.
ರಾಜ್ಯ ಸಾಬೂನು ಮತ್ತು ಡಿಟರ್ಜೆಂಟ್ ಲಿಮಿಟೆಡ್ ನಿಗಮ ಮಾಜಿ ಅಧ್ಯಕ್ಷೆ ವೇರೊನಿಕಾ ಕರ್ನೆಲಿಯೋ ಮಾತನಾಡಿ, 15 ಕೋಟಿ ಅಕ್ರಮದ ಆರೋಪವಿದ್ದರೂ ಜಿಲ್ಲಾ ಜನಪ್ರತಿನಿಧಿಗಳ ಜಾಣ ಮೌನ ಜನಸಾಮಾನ್ಯರ ಸಂಶಯಕ್ಕೆ ಕಾರಣವಾಗಿದೆ ಎಂದರು.
ರೈತ ಸಂಘದ ಅಧ್ಯಕ್ಷರಾದ ಪ್ರತಾಪ್ ಚಂದ್ರ ಶೆಟ್ಟಿ ಅವರು ಸರ್ವರನ್ನು ಸ್ವಾಗತಿಸಿ, ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಅರ್ಹ ಸದಸ್ಯರನ್ನು ಚುನಾವಣೆ ಪ್ರಕ್ರಿಯೆಯಿಂದ ದೂರವಿಟ್ಟು ಭ್ರಷ್ಟಾಚಾರಕ್ಕೆ ಮುನ್ನುಡಿ ಹಾಕಿತ್ತು. ಸಕ್ಕರೆ ಕಾರ್ಖಾನೆಗೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ ಹಣ ವಸೂಲಿ ತನಕ ವಿರಮಿಸುವುದಿಲ್ಲವೆಂದರು.
ಕ್ರೈಸ್ತ ಜಿಲ್ಲಾ ನಾಯಕರುಗಳಾದ ರೋಷಿನಿ ಒಲಿವೇರಾ ಆರ್ ಜಿಪಿಎಸ್ ರಾಜ್ಯ ಸಹ ಸಂಚಾಲಕರು ,ವಿನೋದ್ ಕ್ರಾಸ್ಟೊ ಅಧ್ಯಕ್ಷರು ನಗರ ಯೋಜನಾ ಪ್ರಾಧಿಕಾರ, ಪ್ರಶಾಂತ್ ಜತ್ತನ್ನ ಉಪಾಧ್ಯಕ್ಷರು ಜಿಲ್ಲಾ ಗ್ಯಾರಂಟಿ ಸಮಿತಿ, ಜುಡಿತ್ ಮೆಂಡೊನ್ಸಾ ಸಿಂಡಿಕೇಟ್ ಸದಸ್ಯರು ಮಂಗಳೂರು ವಿಶ್ವವಿದ್ಯಾನಿಲಯ, ಐಡಾ ಗಿಬ್ಬಾ ಡಿಸೋಜಾ ಜಿಲ್ಲಾ ಕೆ ಡಿ ಪಿ ಸದಸ್ಯರು, ಆಶಾ ಕರ್ವಾಲ್ಲೊ ತಾಲೂಕು ಗ್ಯಾರಂಟಿ ಸಮಿತಿ ಸದಸ್ಯರು, ವಿಲ್ಸನ್ ಅಲ್ಮೇಡಾ ಕಥೋಲಿಕ್ ಸಭಾ ವಲಯ ಅಧ್ಯಕ್ಷರು,
ಪಂಚಾಯತ್ ಉಪಾಧ್ಯಕ್ಷರುಗಳಾದ ಜಾನ್ ಸಿಕ್ವೇರಾ, ಅರುಣ್ ಫೆರ್ನಾಂಡಿಸ್ , ಪಂಚಾಯತ್ ಸದಸ್ಯರುಗಳಾದ ಡೆನ್ಸಿಲ್ ಡಿಸೋಜಾ , ರೋಷನ್ ಬರೆಟ್ಟೊ, ಬೆನೆಡಿಕ್ಟ್ ಮೆನೇಜಸ್, ಸಿರಿಲ್ ಡಿಸೋಜಾ , ರೊಯ್ಸ್ ಫೆರ್ನಾಂಡಿಸ್ ಸದಸ್ಯರು ಭೂ ನ್ಯಾಯ ಮಂಡಳಿ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಪ್ರಭು ಕೆನಡಿ ಪಿರೇರಾ , ಹೋಲಿ ರೋಜರಿ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಶಾಲೆಟ್ ರೆಬೆಲ್ಲೊ, ಮಾಜಿ ಪಂಚಾಯತ್ ಸದಸ್ಯರಾದ ಗಿಬ್ಬಾ ಡಿಸೋಜಾ , ಮೇರಿ ಡಿಸೋಜಾ, ಐರಿನ್ ಅಂದ್ರಾದೆ, ಹೆಲನ್ ಫೆರ್ನಾಂಡಿಸ್, ಎಲ್ಟಿ ಲೂಯಿಸ್, ಆಗ್ನೆಸ್ ಡೇಸಾ ಮುಂತಾದವರು ಕಾರ್ಕಳ, ಕಾಪು, ಶಿರ್ವ ಭಾಗದಿಂದ ಬಂದಿದ್ದರು.
ಕಥೋಲಿಕ್ ಸಭಾ ವಲಯ ಮಾಜಿ ಅಧ್ಯಕ್ಷರಾದ ಮೇಬಲ್ ಡಿಸೋಜಾ, ಎರಿಕ್ ಗೊನ್ಸಾಲಿಸ್, ಪ್ರೆಸಿಲ್ಲಾ ಮಿನೇಜಸ್ ಹಾಗೂ ಕ್ರೈಸ್ತ ಸಂಘಟನೆಯ ಹಲವು ಸದಸ್ಯರು ಇದ್ದರು. ರೈತ ನಾಯಕರುಗಳಾದ ಕೆದೂರು ಸದಾನಂದ ಶೆಟ್ಟಿ ಬೊಜು ಕುಲಾಲ್, ನವೀನಚಂದ್ರ ಶೆಟ್ಟಿ ಹೆಂಗವಳ್ಳಿ ಮತ್ತು ಹೆಂಗವಳ್ಳಿ ,ಕಂಬದ ಕೋಣೆ, ಶಿರಿಯಾರ ,ಬೆಳಂಜೆ, ಹೆಬ್ರಿ ಭಾಗದ ರೈತ ಸಂಘದ ಸದಸ್ಯರು ಉಪಸ್ಥಿತರಿದ್ದರು.








