ಎತ್ತಿನಹೊಳೆ ಶೀಘ್ರ ಕಾಮಗಾರಿ ಮುಗಿಸಿ-ಇಂಚರ ಗೋವಿಂದರಾಜು
ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ:- ವಿಧಾನ ಪರಿಷತ್ತಿನಲ್ಲಿ ಇಂದು ನಡೆದ ಪ್ರಶ್ನೋತ್ತರ ಅವಧಿಯಲ್ಲಿ ಕೆ.ಜಿ.ಎಫ್ ನಲ್ಲಿರುವ ಭಾರತ್ ಆರ್ತ್ ಮೂವರ್ಸ್ ಲಿಮಿಟೆಡ್, ಕಾರ್ಖಾನೆಯನ್ನು ಖಾಸಗೀಕರಣಗೊಳಿಸುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ಎಂಎಲ್ಸಿ ಇಂಚರ ಗೋವಿಂದರಾಜು ರಾಜ್ಯಕೈಗಾರಿಕಾ ಸಚಿವ ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ವರನ್ನು ಪ್ರಶ್ನಿಸಿ, ಈ ವಿಷಯ ರಾಜ್ಯ ಸರ್ಕಾರದ ಗಮನಕ್ಕೆ ಬಂದಿದೆಯೇ, ಅಲ್ಲಿನ ಕಾರ್ಮಿಕರ ಭವಿಷ್ಯವೇನು ಎಂದು ಕೇಳಿದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರನ್ನು ಕೇಳಿದ್ದು, ಇದರಲ್ಲಿ, ಬೆಮಲ್ ಕಾರ್ಖಾನೆ, ಕೇಂದ್ರ ಸರ್ಕಾರದ ಅಧೀನದಲ್ಲಿದ್ದು, ಇದನ್ನು ಇದನ್ನು ಖಾಸಗೀಕರಣಗೊಳಿಸುತ್ತಿರುವುದು ರಾಜ್ಯ ಸರ್ಕಾರದ ಗಮನಕ್ಕೆ ಬಂದಿದೆಯೇ, ಬಂದಿದ್ದಲ್ಲಿ ಇದರ ಬಗ್ಗೆ ಸರ್ಕಾರ ತೆಗೆದುಕೊಂಡಂತ ಕ್ರಮಗಳೇನು, ಲಾಭದಲ್ಲಿರುವ ಕಾರ್ಖಾನೆಯನ್ನು ಖಾಸಗೀಕರಣಗೊಳಿಸುವ ಉದ್ದೇಶವೇನು, ಒಂದು ವೇಳೆ ಖಾಸಗೀಕರಣಗೊಂಡಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ಭವಿಷ್ಯವೇನು, ಈಗಾಗಲೇ ಬಿಜಿಎಂಎಲ್ ( ಚಿನ್ನದ ಗಣಿ) ಮುಚ್ಚಿದ್ದು ಅಲ್ಲಿನ ಕಾರ್ಮಿಕ ಹಾಗೂ ಅವರ ಕುಟುಂಬಗಳು ಬಹಳ ತೊಂದರೆಯಲ್ಲಿದ್ದು, ಈ ಕಾರ್ಖಾನೆಯನ್ನು ಸಹ ಮುಚ್ಚಿದಲ್ಲಿ ಈ ಕಾರ್ಮಿಕರ ಪರಿಸ್ಥಿತಿಯು ಬಹಳ ಹೀನಾಯವಾಗಿರುವುದುದರಿಂದ ಈ ಬಗ್ಗೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದೊಂದಿಗೆ ಸಮಾಲೋಚಿಸಿದಯೇ ಎಂಬುದಾಗಿ ಸಚಿವರನ್ನು ಕೇಳಲಾದ ಪ್ರಶ್ನೆಗೆ ಉತ್ತರಿಸಿರುತ್ತಾರೆ.
ಹೌದು ಖಾಸಗೀಕರಣಗೊಳಿಸುತ್ತಿರುವ ವಿಷಯವು ಸರ್ಕಾರದ ಗಮನಕ್ಕೆ ಬಂದಿದೆ, ಬಿಜಿಎಂಎಲ್ ಸಂಸ್ಥೆಯು ಭಾರತ ಸರ್ಕಾರದ ಸಾರ್ವಜನಿಕ ವಲಯದ ಉದ್ಯಮವಾಗಿದ್ದು, ಭಾರತ ಸರ್ಕಾರದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಖಾಸಗೀಕರಣಕ್ಕೆ ತಾತ್ವಿಕ ಅನುಮೋದನೆ ನೀಡಿರುತ್ತದೆ,
ಅದರನ್ವಯ, ಭಾರತ ಸರ್ಕಾರದ ಹಣಕಾಸು ಸಚಿವಾಲಯ ಹಾಗೂ ಈ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಯವರು ಭಾರತ ಸರ್ಕಾರದ ರಕ್ಷಣಾ ಸಚಿವರು ಹಾಗೂ ಹಣಕಾಸು ಸಚಿವರುಗಳಿಗೆ ದಿನಾಂಕ 09.04.2021 ರಂದು ಪತ್ರ ಬರೆದು ಮನವಿ ಕಾರ್ಮಿಕರ ಹಿತ ರಕ್ಷಣೆಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರದ ಮನವಿ ಮೇಲೆ ಭಾರತ ಸರ್ಕಾರವು ನೀತಿ ಆಯೋಗದ ಶಿಫಾರಸುಗಳನ್ನು ಪರಿಗಣಿಸಿದ ನಂತರ ಸಿಸಿಇಎ ಬಿಇಎಂಎಲ್ ಲಿಮಿಟೆಡ್ನ ಕಾರ್ಯತಂತ್ರದ ಹಿಂತೆಗೆದುಕೊಳ್ಳುವಿಕೆ ತಾತ್ವಿಕ ಅನುಮೋದನೆಯನ್ನು ನೀಡಿದೆ, ಎನ್ ಐ ಟಿ ಐ ಆಯೋಗ, ತನ್ನ ಶಿಫಾರಸ್ಸುಗಳನ್ನು ನೀಡುವಾಗ ಸಿಪಿಎಸ್ಯ ಯ ಹಿಂತೆಗೆದುಕೊಳ್ಳುವಿಕೆಯು ಗಣನೀಯ ಮೌಲ್ಯವನ್ನು ಸೇರಿಸುವ ಸಾಧ್ಯತೆಯಿದೆ ಮತ್ತು ಇತ್ತೀಚಿನ ತಂತ್ರಜ್ಞಾನ ಮತ್ತು ಉನ್ನತ ನಿರ್ವಹಣಾ ಅಭ್ಯಾಸಗಳ ಮೂಲಕ ಅದರ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ ಎಂದು ಅಭಿಪ್ರಾಯಪಟ್ಟಿದೆ ಎಂದು ಉತ್ತರಿಸಿದರು.
ಇದಕ್ಕೆÀ ತೀವ್ರ ಆಕ್ಷೇಪ ಎತ್ತಿದ ಸದಸ್ಯರು ಬೆಮೆಲ್ ಕಾರ್ಖಾನೆ 1964 ರಲ್ಲಿ ಪ್ರಾರಂಭಗೊಂಡಿದ್ದು, ಪ್ರಸ್ತುತ 7185 ಕ್ಕೂ ಅಧಿಕವಾಗಿ ಕಾರ್ಮಿಕರು ದುಡಿಯುತ್ತಿದ್ದಾರೆ. ಕಂಪನಿಯು 2019-20 ನೇ ಸಾಲಿನಲ್ಲಿ ರೂ. 68.38 ಕೋಟಿ ರೂಪಾಯಿಗಳ ಲಾಭಗಳಿಸಿರುತ್ತದೆ. ಸುಮಾರು ಆರು ದಶಕಗಳ ಕಾಲ ಕಾರ್ಮಿಕರು ಬೆವರು ಸುರಿಸಿ ಕಟ್ಟಿದ ಕಾರ್ಖಾನೆ ಲಾಭದಾಯಕವಾಗಿ ನಡೆಯುತ್ತಿದ್ದು, ವಾರ್ಷಿಕ ರೂ. 4500 ಕೋಟಿ ವ್ಯವಹಾರ ನಡೆಸುತ್ತಿದೆ. ಇಂತಹ ಕಂಪನಿಯನ್ನು ನಂಬಿಕೊಂಡ ಕಾರ್ಮಿಕ ಕುಟುಂಬಗಳ ಸಂಖ್ಯೆ ಸುಮಾರು ಹತ್ತು ಸಾವಿರಕ್ಕೂ ಅಧಿಕವಿದ್ದು, ಅವರ ಪಾಡೇನು ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಸಚಿವರು , ಕೇಂದ್ರ ಸರ್ಕಾರದ ನಿರ್ದಶನದಂತೆ ಹೆಚ್ಚುವರಿ ಜಮೀನನ್ನು ರಾಜ್ಯ ಸರ್ಕಾರದ ವಶಕ್ಕೆ ಪಡೆದು ಅಲ್ಲಿ ಕೆ.ಐ.ಡಿ.ಬಿ. ವತಿಯಿಂದ ಕೈಗಾರಿಕಾ ವಲಯವನ್ನು ಸ್ಥಾಪನೆ ಮಾಡಲಾಗುವುದಾಗಿ ತಿಳಿಸಿದರು. ಇದಕ್ಕೆ ಸದಸ್ಯರು ಈಗಾಗಲೇ ನರಸಾಪುರ ಮತ್ತು ವೇಮಗಲ್ನಲ್ಲಿ ಬೆಲೆ ಬಾಳುವಂತ ಜಮೀನುಗಳನ್ನು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡಿ, ಅವರ ಕುಟುಂಬಗಳು ನಿರುದ್ಯೋಗಿಯಾಗಿದ್ದಾರೆ ಎಂದು ದೂರಿದರು.
ಸಚಿವರು, ಡಾ: ಸರೋಜಿನಿಮಹರ್ಷಿ ವರದಿ ಆಧಾರದ ಮೇಲೆ ಶೇಕಡ 80% ಉದ್ಯೋಗವನ್ನು ಸ್ಥಳೀಯರಿಗೆ ನೀಡಬೇಕಾಗಿರುತ್ತದೆ. ಆಗೊಂದು ವೇಳೆ ಉದ್ಯೋಗ ನೀಡಿಲ್ಲ ಎಂಬುದು ಸಾಬೀತಾದರೇ ಆ ಕೂಡಲೇ ಸರ್ಕಾರದಿಂದ ಕ್ರಮತಗೆದುಕೊಳ್ಳುತ್ತದೆ ಎಂಬುದಾಗಿ ಸಚಿವರು ತಿಳಿಸಿದಾಗ, ಸಭಾಪತಿಗಳು ಸಚಿವರಿಗೆ ತಾವು ಖುದ್ದಾಗಿ ಬೆಮಲ್ ಕಂಪನಿಯ ಸ್ಥಳ ಪರಿಶೀಲನೆ ಮಾಡಿ ಮುಂದಿನ ಕ್ರಮತಗೆದುಕೊಳ್ಳಿ ಎಂಬುದಾಗಿ ತಿಳಿಸಿದರು, ಕಂಪನಿಯ ಪರವಾಗಿ ಇನ್ನು ಹಲವಾರು ಸದಸ್ಯರು ಚರ್ಚೆಯಾಗಿ ಭಾಗಿಯಾಗಿ ಮಾತನಾಡಲು ಅವಕಾಶ ಕೋರಿದ ಹಿನ್ನೆಲೆಯಲ್ಲಿ ಸಭಾಪತಿಗಳು ಅರ್ಧ ಗಂಟೆಯ ಚರ್ಚೆಗೆ ಅವಕಾಶ ನೀಡಿದರು.
ಎತ್ತಿನಹೊಳೆ ಕುರಿತು
ಶಾಸಕರ ಪ್ರಸ್ತಾಪ
ಎಂಎಲ್ಸಿ ಇಂಚರ ಗೋವಿಂದರಾಜು ರವರು, ಬಯಲು ಸೀಮೆಯ ಏಳು ಜಿಲ್ಲೆಗಳಿಗೆ ಕುಡಿಯುವ ನೀರನ್ನು ಪೂರೈಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಎತ್ತಿನಹೊಳೆ ಯೋಜನೆಯನ್ನು ಜಾರಿಗೆ ತಂದಿದ್ದು, ಈ ನಿಟ್ಟಿನಲ್ಲಿ ಸದರಿ ಯೋಜನೆಯ ಕಾಮಗಾರಿಗಳಿಗೆ ಅನುದಾನವು ಲಭ್ಯವಿಲ್ಲದ ಕಾರಣ ಈ ಯೋಜನೆಯ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿರುವ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿದರು.
ಎತ್ತಿನಹೊಳೆ ಯೋಜನೆಯಿಂದ ಹಾಸನ, ಚಿಕ್ಕಮಗಳೂರು, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಿಗೆ 2014 ನೇ ಸಾಲಿನಲ್ಲಿ ಈ ಭಾಗದ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವುದಕ್ಕಾಗಿ ಮಾಡಿರುವಂಥ ಒಳ್ಳೆಯ ಯೋಜನೆಯಾಗಿದೆ. ಸುಮಾರು ಏಳು-ಎಂಟು ವರ್ಷಗಳು ಕಳೆದಿವೆ ಆದರೆ ಯಾವುದೇ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಆರೋಪಿಸಿದರು.
ಮೊದಲು ಮೂಲಭೂತವಾಗಿ 10 ಟಿ.ಎಂ.ಸಿ ನೀರನ್ನು ಸಂಗ್ರಹಣೆಗೆ ಜಲಾಶಯ ನಿರ್ಮಿಸಲು ಡಿ.ಪಿ.ಆರ್ ಮಾಡಲಾಗಿತ್ತು. ಅದರ ಪ್ರಕಾರ ಮಾಡಬೇಕು. 10 ಟಿ.ಎಂ.ಸಿ ನೀರಿನ ಸಂಗ್ರಹಣೆಗಾಗಿ ಅಲ್ಲಿರುವಂಥ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಬಹಳ ಸಮಸ್ಯೆ ಇದೆ. ಆದರೂ ಅದನ್ನು ಪರಿಹರಿಸಿ, ಎಷ್ಟೇ ಕೋಟಿ ರೂಪಾಯಿಗಳು ವ್ಯಯವಾದರೂ ಚಿಂತೆಯಿಲ್ಲ, ಮೊದಲು ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸಿ, ಕೋಲಾರ ಜಿಲ್ಲೆಯ ಜನರನ್ನು ಕಾಪಾಡಬೇಕೆಂದು ಗೋವಿಂದರಾಜು ಸರ್ಕಾರಕ್ಕೆ ಮನವಿ ಮಾಡಿದರು.