ಜನಪದ ಕಲೆ ಹಾಗೂ ಸಂಸ್ಕøತಿಗೆ ಕನ್ನಡ ಕಾರ್ಯಕ್ರಮ ಮೂಲಕ ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸಲಾಗುವುದು

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಜನಪದ ಕಲೆ ಹಾಗೂ ಸಂಸ್ಕøತಿಗೆ ಸಂಬಂಧಿಸಿದ ಕನ್ನಡ ಕಾರ್ಯಕ್ರಮಗಳನ್ನು ಏರ್ಪಡಿಸುವುದರ ಮೂಲಕ, ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸಲಾಗುವುದು ಎಂದು ಜಿಲ್ಲಾ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್ ಹೇಳಿದರು.
ಸೋಮಯಾಜಲಹಳ್ಳಿ ಗ್ರಾಮದಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಗುಮ್ಮರೆಡ್ಡಿಪುರ ಗ್ರಾಮದ ಗಾಯಿತ್ರಿ ಮಹಿಳಾ ಸೇವಾ ಸಂಸ್ಥೆಯ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಜನಪದ ಝೇಂಕಾರ ಹಾಗೂ ಸುಗಮ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜನಪದ ಕಲೆ ಹಾಗೂ ಸಾಹಿತ್ಯದ ತಾಯಿ ಬೇರು. ಅದು ಗಟ್ಟಿಯಾಗಿ ಇದ್ದರೆ ಮಾತ್ರ ಆಧುನಿಕ ಸಾಹಿತ್ಯ ಉಳಿಯಲು ಸಾಧ್ಯ. ಆದ್ದರಿಂದ ಪ್ರತಿಯೊಬ್ಬರೂ, ಜನಪದ ಕಲೆ ಹಾಗೂ ಸಾಹಿತ್ಯವನ್ನು ಗೌರವ ಭಾವನೆಯಿಂದ ಕಾಣಬೇಕು. ಕಲಾವಿದರನ್ನು ಗೌರವಿಸಬೇಕು ಎಂದು ಹೇಳಿದರು.
ಜನಪದ ಕಲಾವಿದರಾದ ಸಿ.ಆರ್.ವೆಂಕಟಲಕ್ಷ್ಮಮ್ಮ, ಸರಸ್ವತಮ್ಮ, ಚಂದ್ರಕಳಮ್ಮ, ಇ.ಪಿ.ನರಸಿಂಹಯ್ಯ, ಬಚ್ಚಿರೆಡ್ಡಿ, ಡಿ.ಎಂ.ಆಂಜಪ್ಪ, ವೆಂಕಟರವಣಪ್ಪ ಇದ್ದರು
.