ಕಾರ್ಕಳ: 19 ರಂದು ಕಾರ್ಕಳದಲ್ಲಿ ನಡೆದ ಕಾರ್ಕಳ ಮಾನವ ಬಂಧುತ್ವ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂವಿಧಾನದ ರಾಜ್ಯ ನಿರ್ದೇಶಕ ತತ್ವಗಳ ಅಡಿಯಲ್ಲಿ, ಕಲ್ಯಾಣ ರಾಜ್ಯದ ಪರಿ ಕಲ್ಪನೆ ಇದೆ. ಆದರೆ ಅದನ್ನು ಹಕ್ಕು ಎಂದು ಪರಿಗಣಿಸಿಲ್ಲ. ಈ ಕಾರಣಕ್ಕೆ ಗ್ಯಾರಂಟಿ ಯೋಜನೆಗಳನ್ನು ಬೇರೇ ಸರ್ಕಾರ ಅಸ್ತಿತ್ವಕ್ಜೆ ಬಂದರೆ ಮನ ಬಂದಂತೆ ತೆಗೆದು ಹಾಕ ಬಹುದು ಎಂದು ರಾಜ್ಯ ಕಾರ್ಮಿಕ ಚಳುವಳಿಯ ಮುಖಂಡ ಡಾ.ಕೆ ಪ್ರಕಾಶ್ ಅಭಿಪ್ರಾಯ ಪಟ್ಟರು.
ಅವರು ಇಂದು ಕಾರ್ಕಳ ಮಾನವ ಬಂಧುತ್ವ ವೇದಿಕೆ ಆಯೋಜಿಸಿದ್ದ, ಕಲ್ಯಾಣ ರಾಜ್ಯದ ಪರಿಕಲ್ಪನೆ ಮತ್ತು ಕಾರ್ಪೋರೆಟ್ ಶಕ್ತಿಗಳ ಹುನ್ನಾರಗಳು ಎಂಬ ವಿಚಾರವನ್ನು ಮಂಡಿಸಿ ಮಾತನಾಡುತ್ತಿದ್ದರು.
ದಶಕಗಳ ಹಿಂದೆ, ಕಾಂಗ್ರೆಸ್ ಪಕ್ಷವನ್ನೂ ಸೇರಿದಂತೆ ಜನತಾ ಪರಿವಾರ ಪಕ್ಷಗಳು, ಶಿಕ್ಷಣ, ಆರೊಗ್ಯ,ಆಹಾರ ಭದ್ರತೆ ಮುಂತಾದ ಜನ ಕಲ್ಯಾಣದ ಕಾರ್ಯಕ್ರಮ ಗಳನ್ನು ಜನರ ಹಕ್ಕು ಎಂದು ಪರಿಗಣಿಸಿ, ಯೋಜನೆಗಳನ್ನು ರೂಪಿಸಿದ ಪರಿಣಾಮ ಸ್ವಾಸ್ಥ್ಯ ಸಮಾಜವೊಂದು ಅಸ್ತಿತ್ವದಲ್ಲಿತ್ತು. ಈಗ ಫಲಾನುಭವಿಗಳ ಖಾತೆಗೆ ಹಣ ಹಾಕುವ ಯೋಜನೆ ಅಸ್ತಿತ್ವಕ್ಕೆ ಬಂದು ಇದನ್ನು ಯಾವಾಗ ಬೇಕಾದರೂ ಸ್ಥಗಿತಗೊಳಿಸ ಬಹುದಾಗಿದೆ.
ಕೇಂದ್ರ ಸರ್ಕಾರ ನೀಡುವ ಅಕ್ಕಿಯನ್ನು ಆಹಾರ ಭದ್ರತೆ ಕಾಯ್ದೆಯಿಂದ ಹೊರಗಿಟ್ಟು, ಪ್ರಧಾನಿಯವರ ಮನೆಯ ಔದಾರ್ಯದ ಅಕ್ಕಿ ಎಂದು ವಿತರಿಸಲಾಗುತ್ತಿದೆ. ಈ ಹಿಂದೆ ಸರ್ಕಾರ ಗ್ಯಾಸ್ ಏಜನ್ಸಿಗಳಿಗೆ ಸಬ್ಸಿಡಿ ನೀಡಿ, ಜನರಿಗೆ ಕಡಿಮೆ ದರದಲ್ಲಿ ವಿತರಿಸುತ್ತಿತ್ತು. ಮೋದಿ ಸರ್ಕಾರ ಬಂದ ನಂತರ ಸಬ್ಸಿಡಿ ಯನ್ನು ಜನರ ಖಾತೆಗೆ ಹಾಕುತ್ತೇವೆ ಎಂದು ಹೇಳಿ, ಕೊನೆಗೆ ಹಣ ಹಾಕದೆ ದ್ರೋಹ ಬಗೆದರು. ಇನ್ನು ಕೆಲವೇ ದಿನಗಳಲ್ಲಿ ಜನರ ಜೀವನ ಅವಶ್ಯಕ ಆಹಾರ ನೀರು, ಮುಂತಾದವುಗಳನ್ನು ಅಂಬನಿ ಅದಾನಿಗಳಿಗೆ ಮಾರಿ ಜನರ ಸುಲಿಗೆಗೆ ಮುಂದಾಗುವ ಅಪಾಯಗಳು ಇವೆ ಎಂದು ಎಚ್ಚರಿಸಿದರು.
ಜನ ನೀಡುತ್ತಿರುವ ತೆರಿಗೆ ಸ್ವರೂಪಗಳನ್ನು ವಿವರಿಸಿದ, ಲೇಖಕ, ಶ್ರೀಪಾದ ಭಟ್, ಜನ ನೀಡುತ್ತಿರುವ ತೆತಿಗೆ ಹಣ ಪೂರ್ಣ ಪ್ರಮಾಣದಲ್ಲಿ ಕೇಂದ್ರ ಸರ್ಕಾರಕ್ಕೆ ಸೇರುತ್ತಿದ್ದು, ನಮ್ಮ ರಾಜ್ಯಕ್ಜೆ ವಾಪಾಸು ನೀಡಬೇಕಾದ ಹಣ ನೀಡದೆ ಮಲತಾಯಿ ಧೋರಣೆ ಅನುಸರಿಸುತ್ತದೆ. ಇದರ ಪರಿಣಾಮ ಮುಂದೊಂದು ದಿನ ದಕ್ಷಿಣ ಭಾರತವೇ ಸ್ವತಂತ್ರ ಬೇಕೆಂಬ ಬೇಡಿಕೆಯನ್ನು ಇಟ್ಟರೂ ಅಚ್ಚರಿ ಇಲ್ಲ ಎಂದರು.ಕಾರ್ಕಳ.
ಸಂವಿಧಾನದ ರಾಜ್ಯ ನಿರ್ದೇಶಕ ತತ್ವಗಳ ಅಡಿಯಲ್ಲಿ, ಕಲ್ಯಾಣ ರಾಜ್ಯದ ಪರಿ ಕಲ್ಪನೆ ಇದೆ. ಆದರೆ ಅದನ್ನು ಹಕ್ಕು ಎಂದು ಪರಿಗಣಿಸಿಲ್ಲ. ಈ ಕಾರಣಕ್ಕೆ ಗ್ಯಾರಂಟಿ ಯೋಜನೆಗಳನ್ನು ಬೇರೇ ಸರ್ಕಾರ ಅಸ್ತಿತ್ವಕ್ಜೆ ಬಂದರೆ ಮಬ ಬಂದಂತೆ ತೆಗೆದು ಹಾಕ ಬಹುದು ಎಂದು ರಾಜ್ಯ ಕಾರ್ಮಿಕ ಚಳುವಳಿಯ ಮುಖಂಡ ಡಾ.ಕೆ ಪ್ರಕಾಶ್ ಅಭಿಪ್ರಾಯ ಪಟ್ಟರು.
ಅವರು ಇಂದು ಕಾರ್ಕಳ ಮಾನವ ಬಂಧುತ್ವ ವೇದಿಕೆ ಆಯೋಜಿಸಿದ್ದ, ಕಲ್ಯಾಣ ರಾಜ್ಯದ ಪರಿಕಲ್ಪನೆ ಮತ್ತು ಕಾರ್ಪೋರೆಟ್ ಶಕ್ತಿಗಳ ಹುನ್ನಾರಗಳು ಎಂಬ ವಿಚಾರವನ್ನು ಮಂಡಿಸಿ ಮಾತನಾಡುತ್ತಿದ್ದರು.
ದಶಕಗಳ ಹಿಂದೆ, ಕಾಂಗ್ರೆಸ್ ಪಕ್ಷವನ್ನೂ ಸೇರಿದಂತೆ ಜನತಾ ಪರಿವಾರ ಪಕ್ಷಗಳು, ಶಿಕ್ಷಣ, ಆರೊಗ್ಯ,ಆಹಾರ ಭದ್ರತೆ ಮುಂತಾದ ಜನ ಕಲ್ಯಾಣದ ಕಾರ್ಯಕ್ರಮ ಗಳನ್ನು ಜನರ ಹಕ್ಕು ಎಂದು ಪರಿಗಣಿಸಿ, ಯೋಜನೆಗಳನ್ನು ರೂಪಿಸಿದ ಪರಿಣಾಮ ಸ್ವಾಸ್ಥ್ಯ ಸಮಾಜವೊಂದು ಅಸ್ತಿತ್ವದಲ್ಲಿತ್ತು. ಈಗ ಫಲಾನುಭವಿಗಳ ಖಾತೆಗೆ ಹಣ ಹಾಕುವ ಯೋಜನೆ ಅಸ್ತಿತ್ವಕ್ಕೆ ಬಂದು ಇದನ್ನು ಯಾವಾಗ ಬೇಕಾದರೂ ಸ್ಥಗಿತಗೊಳಿಸ ಬಹುದಾಗಿದೆ.
ಕೇಂದ್ರ ಸರ್ಕಾರ ನೀಡುವ ಅಕ್ಕಿಯನ್ನು ಆಹಾರ ಭದ್ರತೆ ಕಾಯ್ದೆಯಿಂದ ಹೊರಗಿಟ್ಟು, ಪ್ರಧಾನಿಯವರ ಮನೆಯ ಔದಾರ್ಯದ ಅಕ್ಕಿ ಎಂದು ವಿತರಿಸಲಾಗುತ್ತಿದೆ. ಈ ಹಿಂದೆ ಸರ್ಕಾರ ಗ್ಯಾಸ್ ಏಜನ್ಸಿಗಳಿಗೆ ಸಬ್ಸಿಡಿ ನೀಡಿ, ಜನರಿಗೆ ಕಡಿಮೆ ದರದಲ್ಲಿ ವಿತರಿಸುತ್ತಿತ್ತು. ಮೋದಿ ಸರ್ಕಾರ ಬಂದ ನಂತರ ಸಬ್ಸಿಡಿ ಯನ್ನು ಜನರ ಖಾತೆಗೆ ಹಾಕುತ್ತೇವೆ ಎಂದು ಹೇಳಿ, ಕೊನೆಗೆ ಹಣ ಹಾಕದೆ ದ್ರೋಹ ಬಗೆದರು. ಇನ್ನು ಕೆಲವೇ ದಿನಗಳಲ್ಲಿ ಜನರ ಜೀವನ ಅವಶ್ಯಕ ಆಹಾರ ನೀರು, ಮುಂತಾದವುಗಳನ್ನು ಅಂಬನಿ ಅದಾನಿಗಳಿಗೆ ಮಾರಿ ಜನರ ಸುಲಿಗೆಗೆ ಮುಂದಾಗುವ ಅಪಾಯಗಳು ಇವೆ ಎಂದು ಎಚ್ಚರಿಸಿದರು.
ಜನ ನೀಡುತ್ತಿರುವ ತೆರಿಗೆ ಸ್ವರೂಪಗಳನ್ನು ವಿವರಿಸಿದ, ಲೇಖಕ, ಶ್ರೀಪಾದ ಭಟ್, ಜನ ನೀಡುತ್ತಿರುವ ತೆತಿಗೆ ಹಣ ಪೂರ್ಣ ಪ್ರಮಾಣದಲ್ಲಿ ಕೇಂದ್ರ ಸರ್ಕಾರಕ್ಕೆ ಸೇರುತ್ತಿದ್ದು, ನಮ್ಮ ರಾಜ್ಯಕ್ಜೆ ವಾಪಾಸು ನೀಡಬೇಕಾದ ಹಣ ನೀಡದೆ ಮಲತಾಯಿ ಧೋರಣೆ ಅನುಸರಿಸುತ್ತದೆ. ಇದರ ಪರಿಣಾಮ ಮುಂದೊಂದು ದಿನ ದಕ್ಷಿಣ ಭಾರತವೇ ಸ್ವತಂತ್ರ ಬೇಕೆಂಬ ಬೇಡಿಕೆಯನ್ನು ಇಟ್ಟರೂ ಅಚ್ಚರಿ ಇಲ್ಲ ಎಂದರು.
ಈ ಸಭೆಯ ಅಧಗಯಕ್ಷತೆಯನ್ನ ವೇದಿಕೆ ರಾಜ್ಯ ಸಂಚಾಲಕ ಪ್ರೊ. ಎಬಿ ರಾಮಚಂದ್ರ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯ, ರೋನಾಲ್ಡ್ ಮನೋಹರ್ ಕರ್ಕಡ,ವಿಭಾಗಿಯ ಸಂಚಾಲಕ ಕೆ.ಎಸ್. ಸತೀಶ್ ಕುಮಾರ್ ,ತಾಲ್ಲೂಕು ಪ್ರಧಾನ ಸಂಚಾಲಕ ಎನ್.ಸುಭೀತ್ ಕುಮಾರ್,ಪೋಷಕರಾದ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಸುನಿಲ್ ಕುಮಾರ್ ಭಂಡಾರಿ, ಸದಾಶಿವ ದೇವಾಡಿಗ ಮುಂತಾದ ಮುಖಂಡರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಸತೀಶ್ ಪೂಜಾರಿ ಎಲ್ಲರನ್ನು ಸ್ವಾಗತಿಸಿದರೆ, ನಳಿನಿ. ವಿ ಆಚಾರ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.