

ಉಡುಪಿ: ಕಥೊಲಿಕ್ ಸಭಾ ಪೆರಂಪಳ್ಳಿ ಘಟಕದಿಂದ ಪ್ರತಿಭಾ ಪುರಸ್ಕಾರ ಮತ್ತು ಭಾಷಣ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು.
ಪೆರಂಪಳ್ಳಿ ಚರ್ಚಿನ ಧರ್ಮಗುರು ಹಾಗೂ ಪೆರಂಪಳ್ಳಿ ಕಥೊಲಿಕ್ ಸಭಾ ಘಟಕದ ಅಧ್ಯಾತ್ಮಿಕ ನಿರ್ದೇಶಕರಾದ ವಂ|ಅನಿಲ್ ಡಿಸೋಜಾ ಬಹುಮಾನ ವಿತರಣೆ ಮಾಡಿ ಸಂದೇಶ ನೀಡಿದರು. ಕಥೊಲಿಕ್ ಸಭಾ ಘಟಕದ ಅಧ್ಯಕ್ಷ ಒಲಿವರ್ ಡಿಸೋಜಾ, ಕಾರ್ಯದರ್ಶಿ ಆಲ್ಬಿನ್ ಡಿಸೋಜಾ ಕೂಡ ಬಹುಮಾನಗಳನ್ನು ವಿತರಿಸಿದರು. ಭಾಷಣ ಸ್ಪರ್ಧೆಯ ನಾಲ್ಕು ವಿಭಾಗಗಳಿದ್ದು, ಇದರಲ್ಲಿ 36 ಮಂದಿ ಭಾಗವಹಿಸಿದ್ದು, 13 ಮಂದಿ ಮಕ್ಕಳು ಬಹುಮಾನವನ್ನು ಪಡೆದುಕೊಂಡರು. 5 ಮಂದಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷ ರಫಾಯೆಲ್ ಡಿಸೋಜಾ, ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು, ಖಚಾಂಚಿ ಮೆಲಿಟಾ ಡಿಸೋಜಾ ಇವರು ಧನ್ಯವಾದಗಳನ್ನು ಸಮರ್ಪಿಸಿದರು.
