


















ಕುಂದಾಪುರ, ಡಿ.24: ಸ್ಥಳೀಯ ಸಂತ ಮೇರಿ ಪದವಿ ಪೂರ್ವ ಕಾಲೇಜಿನಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮವು ಡಿ.23 ರಂದು ಕಾಲೇಜಿನ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಜಂಟಿ ಕಾರ್ಯದರ್ಶಿಯಾಗಿರುವ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ ವಹಿಸಿ “ಆಟ ಪಾಠ ಎರಡು ಸಮಾನವಾಗಿವೆ, ಮನುಷ್ಯನಿಗೆ ಎರಡರವು ಅಗತ್ಯವಿದೆ. ಎರಡರಲ್ಲಿಯೂ ಸಾಧನೆ ಮಾಡಿ ಇವತ್ತು ನೀವು ಬಹುಮಾನಗಳನ್ನು ಪಡೆದುಕೊಂಡಿದ್ದಕ್ಕೆ ನಿಮ್ಮಲ್ಲಿ ಬಹಳ ಸಂತೋಷ ಉಂಟಾಗಿದೆ, ನಾನು ಎಲ್ಲರನ್ನು ಅಬ್ಬಿನಂದಿಸುತ್ತೇನೆ. ಕಲಿಯಲು ಮನಸಿದ್ದರೆ ಹೇಗೂ ಕಲಿಯಬಹುದು. ಕೇರಳದಲ್ಲಿ ಕೂಲಿ ಮಾಡುತ್ತಿದ್ದ ಒರ್ವ ಬಡ ಹುಡುಗ ಒಂದು ಮೊಬಾಯ್ಲ್ ಖರೀದಿಸಿ, ಅದರ ಆತ ಮೂಲಕ ಕೆ.ಪಿ.ಎಸ್. ಪರೀಕ್ಷೆಯ ಪಾಠ ಕಲಿಯತೊಡಗಿದ,ಮೊಬಾಯ್ಲನಲ್ಲೆ ಆತ ಕಲಿತು, ಕೆಲವೇ ವರ್ಷಗಳಲ್ಲಿ ಕೆ.ಪಿ.ಎಸ್. ಪಾಸ್ ಮಾಡಿ ಈಗ ಕೇರಳದಲ್ಲಿ ಕೆ.ಪಿ.ಎಸ್. ಅಧಿಕಾರಿಯಾಗಿದ್ದಾನೆ. ಆತ ಮೊಬಾಯ್ಲನ್ನು ಉತ್ತಮವಾಗಿ ಬಳಸಿಕೊಂಡು ತನ್ನ ಭವಿಸ್ಯವನ್ನು ಉಜ್ವಲ ಗೊಳಿಸಿಕೊಂಡ. ಹಾಗೇಯೆ ಇವತ್ತಿನ ಮುಖ್ಯ ಅತಿಥಿ ರೈನಿಶ್ ಡಿಆಲ್ಮೇಡಾ ನಮ್ಮ ಕಾಲೇಜಿನ ಹಳೆ ವಿದ್ಯಾರ್ಥಿ, ಉತ್ತಮ ಶಿಕ್ಷಣ ಪಡೆದು ಇವತ್ತು ಹಡಗಿನ ಸೆಕೆಂಡ್ ಎಂಜಿನಿಯರ್ ಆಗಿದ್ದಾನೆ, ಇವರಲ್ಲದೆ ಇನ್ನೂ ಹಲವು ಈ ಕಾಲೇಜಿನ ಹಳೆ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಉತ್ತಮ ಹುದ್ದೆಯಲ್ಲಿದ್ದಾರೆ, ಅವರನ್ನು ನೀವು ಅನುಸರಿಸಿ ಜೀವನದಲ್ಲಿ ಸಫಲತೆಯನ್ನು ಪಡೇಯಬೇಕು” ಸಂದೇಶ ನೀಡಿದರು.
ಮುಖ್ಯಅತಿಥಿ ರೈನಿಶ್ ಡಿಆಲ್ಮೇಡಾ ಮಾತನಾಡಿ ಉತ್ತಮ ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಕಾಲೇಜಿನ ಪರವಾಗಿ ರೈನಿಶ್ ಮತ್ತು ರೀಮಾ ಡಿಆಲ್ಮೇಡಾ ದಂಪತಿಯನ್ನು ಸನ್ಮಾನಿಸಲಾಯಿತು. ಹೋಲಿ ರೋಜರಿ ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಿ, ಶುಭಾಶಯ ಕೋರಿದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಅತಿಥಿಗಳು ಬಹುಮಾನಗಳನ್ನು ವಿತರಿಸಿದರು.ವಿದ್ಯಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆದವು. ಶಾಲಾ ನಾಯಕ ಪ್ರಿತೇಶ್ ಕರ್ವಾಲ್ಲೊ, ಕಾಲೇಜು ಕಾರ್ಯದರ್ಶಿ ಪ್ರೀತಿಕಾ ಉಪಸ್ಥಿರಿದ್ದು, ಪ್ರಾಧ್ಯಪಕರಾದ ನಾಗರಾಜ ಶೆಟ್ಟಿ, ಪ್ರಪ್ಪುಲ್ಲಾ, ಸುಶ್ಮಾ, ಪಲ್ಲವಿ, ಶಿಲ್ಪಾಶ್ರೀ ಬಹುಮಾನ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರಾಂಶುಪಾಲೆ ರೆಶ್ಮಾ ಫೆರ್ನಾಂಡಿಸ್ ವರದಿ ವಾಚಿಸಿದರು. ಉಪಪ್ರಾಂಸುಪಾಲೆ ಮಂಜುಳಾ ನಾಯರ್ ವಂದಿಸಿದರು. ವಿದ್ಯಾರ್ಥಿನಿ ವೆನೀಶಾ ಡಿಸೋಜಾ ನಿರೂಪಿಸಿದರು.