ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಗ್ರಾಮಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗಿದೆ ಎಂದು ಮಾಸ್ತೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎಂ.ರವಿಕುಮಾರ್ ಹೇಳಿದರು.
ಗ್ರಾಮದ ಗ್ರಾಮ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಗ್ರಾಮ ಸಭೆಯಲ್ಲಿ ಮಾತನಾಡಿ, ಕುಡಿಯುವ ನೀರು ಪೂರೈಕೆ, ರಸ್ತೆ ನಿರ್ಮಣ, ಚರಣಡಿ ನಿರ್ಮಾಣ ಹಾಗೂ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಭಾರತಿ, ಪಿಡಿಒ ಎಸ್.ಬಿ.ಮಂಜುನಾಥ್, ಎಸ್ಡಿಎ ಎನ್.ಎನ್.ನಂದೀಶ್, ಕೆ.ಪಿ.ನಾಗೇಶ್, ಮಂಜುನಾಥ್, ಬಚ್ಚೇಗೌಡ, ರಮೇಶ್, ಕೃಷ್ಣೇಗೌಡ, ಸದಸ್ಯರಾದ ಪ್ರಕಾಶ್, ನಾರಾಯಣಮ್ಮ, ವೆಂಕಟಾಚಲಪತಿ, ಅಮಡಪ್ಪ, ಲಕ್ಷ್ಮಮ್ಮ, ಲಕ್ಷ್ಮಿನಾಗೇಶ್, ನಾರಾಯಣಮ್ಮ, ಗೊಪಾಲಗೌಡ, ರೇಷ್ಮೆ ಇಲಾಖೆ ಅಧಿಕಾರಿ ಶ್ರೀನಿವಾಸ್, ಬಂಗವಾದಿ ನಾಗರಾಜ್ ಇದ್ದರು.
ಪ್ರತಿಭಟನೆ: ಗ್ರಾಮ ಸಭೆ ನಡೆಯುತ್ತಿದ್ದಾಗ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಅಧಿಕಾರಿಗಳು ತಮ್ಮನ್ನು ವಾರ್ಡ್ ಸಭೆಗಳಿಗೆ ಕರೆಯುವುದಿಲ್ಲ. ಎಲ್ಲ ವಿಷಯಗಳಲ್ಲೂ ನಿರ್ಲಕ್ಷಲಿಸಲಾಗಿದೆ ಎಂದು ಆಪಾದಿಸಿ ಜೆಡಿಎಸ್ ಬೆಂಬಲಿತ ಸದಸ್ಯರು ಹಾಗೂ ಬೆಂಬಲಿಗರು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸದಸ್ಯರಾದ ಲಕ್ಷ್ಮೀನಾಗೇಶ್, ಮಂಜುನಾಥ್, ವೀರಭದ್ರೇಗೌಡ, ಗೋಪಾಲ್, ಮಮತ ಪ್ರತಿಭಟನೆ ನೇತೃತ್ವ ವಹಿಸಿದ್ದರು.