ಕೋಲಾರ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ ವಾರ್ಷಿಕ ಪ್ರಶಸ್ತಿಗಳ ಪ್ರಧಾನ-ಪ್ರತಿಭಾ ಪುರಸ್ಕಾರ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ,ಜು.15:ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು 21ನೇ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ.
ಜುಲೈ 16 ರಂದು ಶುಕ್ರವಾರ ನಗರದ ಪತ್ರಕರ್ತರ ಭವನದಲ್ಲಿ ಬೆಳಗ್ಗೆ 9-30 ಗಂಟೆಗೆ ನಡೆಯುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಧ್ಯಕ್ಷ ವಿ.ಮುನಿರಾಜು ಮತ್ತು ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್, ಖಜಾಂಚಿ ಎ.ಜಿ ಸುರೇಶ್‍ಕುಮಾರ್ ತಿಳಿಸಿದ್ದಾರೆ.
ಸಂಘದ ವತಿಯಿಂದ ನೀಡಲಾಗುವ ಪ್ರಶಸ್ತಿಗಳು:
ಕೆ.ಆರ್.ಕೃಷ್ಣಸ್ವಾಮಿ ಅವರ ನೆನಪಿನಲ್ಲಿ: ಟೇಕಲ್‍ನ ಕೋಲಾರ ಪತ್ರಿಕೆ ಹೋಬಳಿ ವರದಿಗಾರ ಲಕ್ಷ್ಮೀಶ, ಜಿ.ನಾರಾಯಣಸ್ವಾಮಿ ಅವರ ನೆನಪಿನಲ್ಲಿ: ಶ್ರೀನಿವಾಸಪುರದ ಕನ್ನಡ ಪ್ರಭ ವರದಿಗಾರ ಚ.ಶ್ರೀನಿವಾಸಮೂರ್ತಿ, ಬಿ.ವಿ.ನರಸಿಂಹಮೂರ್ತಿ ಅವರ ನೆನಪಿನಲ್ಲಿ: ಬಂಗಾರಪೇಟೆಯ ಅಂತರಗಂಗೆ ಉಪ ಸಂಪಾದಕ ಹೆಚ್.ಎಲ್ ನಾಗರಾಜ್, ಎಂ.ಮಲ್ಲೇಶ್ ನೆನಪಿನಲ್ಲಿ: ಕೋಲಾರದ ಸಂಯುಕ್ತ ಕರ್ನಾಟಕ ಉಪ ಸಂಪಾದಕ ಬಿ.ಎಸ್ ಸ್ಕಂದಕುಮಾರ್, ಬಿ.ಎನ್.ಗುರುಪ್ರಸಾದ್ ನೆನಪಿನಲ್ಲಿ: ಕೆ.ಜಿ.ಎಫ್‍ನ ಇಂದು ಕೋಲಾರ ವರದಿಗಾರ ಮಲ್ಲಾರ್ ಶೇಖರ್, ಹೆಚ್.ಎನ್.ಸೋಮಶೇಖರಗೌಡ ನೆನಪಿನಲ್ಲಿ: ಕೋಲಾರದ ಸಹಾರ ವರದಿಗಾರ ಅಯ್ಯೂಬ್‍ಖಾನ್, ಬಿ.ಆರ್ಮುಗಂ ನೆನಪಿನಲ್ಲಿ: ಮುಳಬಾಗಿಲಿನ ತಾಲೂಕು ಇಂದು ಸಂಜೆ ವರದಿಗಾರ ಶ್ರೀನಿವಾಸಪ್ಪ, ಸಿ.ಎಂ.ರಂಗಾರೆಡ್ಡಿ ನೆನಪಿನಲ್ಲಿ: ಕೋಲಾರದ ಬಿ.ಟಿ.ವಿ ಜಿಲ್ಲಾ ವರದಿಗಾರ ವೆಂಕಟೇಶಪ್ಪ, ವಿ.ಎಂ.ನಾಗಪ್ಪ ಅವರ ನೆನಪಿನಲ್ಲಿ: ಮಾಲೂರು ತಾಲೂಕು ಸಂಚಿಕೆ ವರದಿಗಾರ ಎಂ.ನಾರಾಯಣಪ್ಪ ಅವರನ್ನು ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ.
ಸಂಸದ ಎಸ್.ಮುನಿಸ್ವಾಮಿ ಅವರಿಂದ ಕಾರ್ಯಕ್ರಮ ಉದ್ಘಾಟನೆ, ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು ರವರು ಅಧ್ಯಕ್ಷತೆ ವಹಿಸುವರು. ಮಾಜಿ ವಿಧಾನ ಸಭಾಧ್ಯಕ್ಷರೂ ಹಾಗೂ ಶಾಸಕರಾದ ಕೆ.ಆರ್ ರಮೇಶ್‍ಕುಮಾರ್ ಅವರಿಂದ ಪ್ರತಿಭಾನ್ವಿತ ಮಕ್ಕಳಿಗೆ ಸನ್ಮಾನ, ಸ್ಥಳೀಯ ಶಾಸಕ ಕೆ.ಶ್ರೀನಿವಾಸಗೌಡ ಅವರಿಂದ ಪ್ರಶಸ್ತಿ ವಿಜೇತರಿಗೆ ಪುರಸ್ಕಾರ, ಶಾಸಕರು ಹಾಗೂ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಹೆಚ್.ನಾಗೇಶ್ ಅವರಿಂದ ಗುರುತಿನ ಚೀಟಿ ವಿತರಣೆ, ಕೆ.ಯು.ಡ್ಲ್ಯೂ.ಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರಿಂದ ಮೃತ ಪತ್ರಕರ್ತರ ಕುಟುಂಬಗಳಿಗೆ ಚೆಕ್ ವಿತರಣಿ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಶಾಸಕರುಗಳಾದ ಎಸ್.ಎನ್.ನಾರಾಯಣಸ್ವಾಮಿ, ಕೆ.ವೈ ನಂಜೇಗೌಡ, ರೂಪಕಲಾ ಶಶಿಧರ್, ವಿಧಾನ ಪರಿಷತ್ ಸದಸ್ಯರಾದ ಇಂಚರ ಗೋವಿಂದರಾಜು, ಸಿ.ಆರ್ ಮನೋಹರ್, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಎಂ. ನಾಗರಾಜ್, ಜಿಲ್ಲಾ ರಕ್ಷಣಾಧಿಕಾರಿ ಡೆಕ್ಕಾಕಿಶೋರ್‍ಬಾಬು ಭಾಗವಹಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಜಿಲ್ಲೆಯ ಸಮಸ್ತ ಪತ್ರಕರ್ತರು ಆಗಮಿಸಲು ಸಂಘದ ಪ್ರಕಟಣೆ ಕೋರಿದೆ.