ಉಳ್ಳಾಲ ಸಮುದ್ರದಲ್ಲಿ ಮುಳುಗಡೆಯಾದ ಚೀನಾದ ಸರಕು ನೌಕೆ ಪ್ರಿನ್ಸೆಸ್ ಮಿರಾಲ್

JANANUDI.COM NETWORK

ಮಂಗಳೂರು:ಮಂಗಳೂರು ಹತ್ತಿರದ ಉಳ್ಳಾಲ ತೀರದ ಅರಬ್ಬಿ ಸಮುದ್ರದಲ್ಲಿ ಥಳಭಾಗದಲ್ಲಿ ವಿರುಕುಟಾಂಗಿ ಮುಳುಗಡೆಯಾಗುತ್ತಿರುವ ಚೀನಾ ಮೂಲದ ಪ್ರಿನ್ಸೆಸ್ ಮಿರಾಲ್ ಹಡಗು, ಕಡಲಿನಾಳಕ್ಕೆ ಮುಳುಗಿದೆ. ಈ ಮೊದಲು ಹಡಗಿನ ಸಿಬ್ಬಂದಿ ಮಂಗಳೂರು ಬಂದರಿಗೆ ದಡ ಸೇರಲು ಪರವಾನಿಗೆ ಕೇಳಲಾಗಿತ್ತು. ಆದರೆ ಹಡಗಿಗೆ ಬಿರುಕುಟಾಂಗಿದ್ದು ತೈಲ ಸೊರಿಕೆಯಾಗಿ ಸಮುದ್ರ ಕುಲಷಿತವಾಗು ಭಯದಿಂದ ಪರವಾನಿಗೆ ನೀಡಿರಲಿಲ್ಲ.
ಸರಕು ಹೇರಿಕೊಂಡಿರುವ ಈ ಹಡಗು ಟಿಯಾಂಜಿನ್‌ ನಿಂದ ಲೆಬೆನಾನ್‌ ಗೆ ತೆರಳುತ್ತಿದ್ದು, ಅಸಲಿಗೆ ಸಮುದ್ರ ಮಧ್ಯೆ ಸಂಚರಿಸಬೇಕಿದ್ದ ಈ ಹಡಗು ಮಂಗಳೂರಿಗೆ ಆಗಮಿಸಿರುವುದು ಯಾಕೆ ಎಂಬ ಅನುಮಾನ ಕಾಡುತ್ತಿದ್ದು, ಈ ಬಗ್ಗೆ ಕೇಂದ್ರ ತನಿಖಾ ತಂಡ ತನಿಖೆ ನಡೆಸುವ ಸಾಧ್ಯತೆ ದಟ್ಟವಾಗುತ್ತಿದೆ.
ಹಡಗು ಸಮುದ್ರ ಮಧ್ಯ ಸಂಚರಿಸುವ ಬದಲು ಉಳ್ಳಾಲ ಸಮುದ್ರ ತೀರಕ್ಕೆ ಆಗಮಿಸಿ ಅಪಾಯಕ್ಕೀಡಾಗಿತ್ತು. ಸದ್ಯಕ್ಕೆ ಈ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಸರಕು ನೌಕೆ ಪ್ರಿನ್ಸೆಸ್ ಮಿರಾಲ್ ಸಮುದ್ರ ತೀರದಲ್ಲಿ ಮುಳುಗಿರುವುದರಿಂದ ಅದರಲ್ಲಿರುವ 220 ಮೆಟ್ರಿಕ್ ಟನ್ ತೈಲ ಸೋರಿಕೆ ಭೀತಿ ಆವರಿಸಿದೆ. ಹಡಗಿನಿಂದ ರಕ್ಷಿಸಲ್ಪಟ್ಟಿರುವ 15 ಮಂದಿ ಸಿರಿಯನ್ ಪ್ರಜೆಗಳನ್ನು ನವಮಂಗಳೂರು ಬಂದರು ಗೆಸ್ಟ್‌ ಹೌಸ್‌ ನಲ್ಲಿ ಇರಿಸಲಾಗಿದೆ
.