ಎಪ್ರಿಲ್ 11, ಮಂಗಳೂರು: ಮಂಗಳೂರು ಧರ್ಮಕ್ಷೇತ್ರದ, 2024 ಸಾಲಿನ ಯಾಜಕ ದೀಕ್ಷೆಯು, ಗುರುವಾರ, ಮಂಗಳೂರಿನ
ರೊಸಾರಿಯೊ ಪ್ರಧಾನ ದೇವಾಲಯದಲ್ಲಿ ಮಧ್ಯಾನ 3 ಗಂಟೆಗೆ ನೆರವೇರಿತು. ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ
ಪರಮಪೂಜ್ಯ ಡಾ. ಪೀಟರ್ ಪಾವ್ಸ್ ಸಲ್ಜಾನ್ಹಾ ಇವರು ಈ ಸಂಸ್ಕಾರ ವಿಧಿಯನ್ನು ನೆರವೇರಿಸಿದರು. ಸೇವದರ್ಶಿಗಳಾದ
ಕುಪ್ಪೆಪದವು ಧರ್ಮಕೇಂದ್ರದ ನೋರ್ಮನ್ ಜ್ಹೋನ್ ಮಥಾಯಸ್, ಫೆರಾರ್ ಧರ್ಮಕೇಂದ್ರದ ಪ್ರದೀಪ್ ರೊಡ್ರಿಗಸ್ ಹಾಗೂ
ಫಜೀರ್ ಧರ್ಮಕೇಂದ್ರದ ಲ್ಯಾನ್ಷನ್ ಪಿಂಟೊ ಇವರು ಯಾಜಕ ದೀಕ್ಷೆಯನ್ನು ಸ್ವೀಕರಿಸಿದರು. ಧರ್ಮಕ್ಷೇತ್ರದ ಪ್ರಧಾನ
ಗುರುಗಳಾದ ಮುನ್ನಿನ್ಕೊರ್ ಮ್ಯಾಕ್ಸಿಮ್ ನೊರೊನ್ಹಾ, ಚ್ಯಾನ್ಸಿಲರ್ ವಂ. ವಿಕ್ಟರ್ ಜೋರ್ಜ್ ಡಿಸೋಜ, ಜ್ಯಡಿಶಿಯಲ್ ವಿಕಾರ್
ವಂ. ನವೀನ್ ಪಿಂಟೊ. ಜೆಪ್ಪು ಸೆಮಿನರಿ ರೆಕ್ಟರ್ ವಂ. ರೊನಾಲ್ಡ್ ಸೆರಾವೊ, ಪ್ರಧಾನ್ ದೇವಾಲಯದ ರೆಕ್ಟರ್ ವಂ. ಆಲ್ಫ್ರೆಡ್
ಪಿಂಟೊ ಹಾಗು ಹಲವಾರು ಯಾಜಕರು ಮತ್ತು ಧರ್ಮಭಗಿನಿಯರು ಹಾಜರಿದ್ದರು. ಬಲಿಷೂಜೆಯು ನೆರವೇರಿದ ಬಳಿಕಾ ನವ
ಯಾಜಕರನ್ನ ಸನ್ಮಾನಿಸಲಾಯಿತು. ವಂ. ವಿಜಯ್ ಮಚಾದೊರವರು ಸಂಸ್ಕಾರ ವಿಧಿಯ ಕಾರ್ಯವನ್ನು ನಿರ್ವಹಿಸಿದರು. ವಂ.
ಸಂತೋಷ್ ರೊಡ್ರಿಗಸ್ ಇವರು ನೂತನ ಯಾಜಕರಿಗೆ ಶುಭಕೋರಿದರು. ನವ ಯಾಜಕರಾದ ವಂ. ನೋರ್ಮನ್
ಮಥಾಯಸ್ ಇವರು ನೆರೆದಿರುವಾ ಎಲ್ಲಾರಿಗೂ ಧನ್ಯವಾದ ಅರ್ಪಿಸಿದರು.
Priestly Ordination for the year 2024 in the Diocese of the Mangalore was held on
Thursday at Rosario Cathedral
Mangalore,April 11: Priestly Ordination for the year 2024 in the Diocese of the Mangalore was held on
Thursday at Rosario Cathedral, Mangalore at 3 p.m. Most Rev. Dr Peter Paul Saldanha, the Bishop of
Mangalore presided over the ceremony ordaining Deacon Norman John Mathias, s/o Mr Norbert and
Janet Mathias of Kuppepadavu parish, Deacon Pradeep Clarence Rodrigues, s/o Mr Pascal and Celine
Rodrigues of Ferar parish and Deacon Lanson Maxim Pinto, s/o Mrs Shalet and Late Mr Lancy Pinto of
Fajir parish. Monsignor Maxim Noronha, Vicar General; V. Rev. Victor George, Chancellor; V. Rev Naveen
Pinto, Judicial Vicar; V. Rev. Ronald Serrao, Rector of St Joseph’s Seminary; Fr Rev. Fr Alfred Pinto,
Rector of the Cathedral and several priests and religious were present to witness the celebration. The
newly ordained priests were felicitated after the mass. Rev. Fr Vijay Machado moderated the ceremony
and Rev. Fr Santhosh Rodrigues introduced and expressed his words of felicitation to the newly
ordained. Rev. Fr Norman Mathias, the newly ordained priest proposed the vote the thanks.