

ಶ್ರೀನಿವಾಸಪುರ ಪಟ್ಟಣದ ಪುರಸಭೆಯಲ್ಲಿ ಇಂದು ಪುರಸಭಾ ಅದ್ಯಕ್ಷರಿಂದ ಪತ್ರಿಕಾ ಗೊಷ್ಟಿಯನ್ನು ಹಮ್ಮಿಕೊಂಡಿದ್ದರು ಈ ಸಮಯದಲ್ಲಿ ಮಾತನಾಡಿದ ಪುರಸಭಾ ಅದ್ಯಕ್ಷರಾದ ಭಾಸ್ಕರ್ ರವರು ಇಷ್ಟು ದಿನ ಖಾತೆ ಬದಲಾವಣೆಗೆ ಲಂಚ ಕೊಡಬೇಕಾದ ಅನಿವಾರ್ಯತೆ ಇತ್ತು ಆದರೆ ನಾನು ಅದ್ಯಕ್ಷನಾಗಿ ಮೂರು ತಿಂಗಳು ಕಳೆದಿದ್ದು ಖಾತೆ ಬದಲಾವಣೆಗೆ ಮಾಡಲು ಒಂದೆ ಒಂದು ರೂಪಾಯಿ ಲಂಚ ಇಲ್ಲದೆ ಖಾತೆ ಮಾಡುಕೊಡುತ್ತಿದ್ದೇವೆ ಎಂದರು ನಾನು ಅದ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಬಹಳಷ್ಟು ವ್ಯತ್ಯಾಸಗಳು ಅಗಿದ್ದು ಭ್ರಷ್ಟಾಚಾರ ಗೆ ಕಡಿವಾಣ ಹಾಕುತ್ತಿದ್ದೇನೆ ಯಾರಾದರು ನಿಮ್ಮನ್ನು ಖಾತೆ ಮಾಡಿಕೊಡಲು ಲಂಚ ಕೇಳಿದರೆ ನನಗೆ ಅಥವಾ ನಮ್ಮ ಸಿಬ್ಬಂದಿಗೆ ದೂರು ಕೊಡಬಹುದು ನಾನು ಅಂತವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುತ್ತೇನೆ ಎಂದರು.ಈ ದಿನ ನಮ್ಮ ನಾಯಕರಾದ ರಮೇಶ್ ಕುಮಾರ್ ರವರ ಹುಟ್ಟುಹಬ್ಬ ಪ್ರಯುಕ್ತ ಅವರ ಹೆಸರಿನಲ್ಲಿ ಈ ಮಹತ್ವದ ಯೋಜನೆಯನ್ನು ಅರಂಭ ಮಾಡಿದ್ದು ಈ ಶುಭ ದಿನದಂದೆ ನಾನು ಈ ಕೆಲಸವನ್ನು ಮಾಡುತ್ತಿದ್ದು ಖಾತೆ ಮಾಡಲು ಎಲ್ಲಾ ಕಾನೂನಿನ ನಿಯಾಮವಲಿಗಳ ಪ್ರಕಾರ ಮಾಡುತ್ತಿದ್ದು ಸರ್ಕಾರದ ಪ್ರಕಾರ ಖಾತೆಯನ್ನು ಮಾಡಲು 45 ದಿನ ಇದ್ದು ನಾವು 50 ದಿನಗಳ ಒಳಗೆ ನಾವೆ ಕರೆ ಮಾಡಿ ಖಾತೆ ಮಾಡಿದ ಪ್ರತಿಯನ್ನು ಕೊಡುತ್ತೇವೆ ಎಂದರು.ಈ ಸಮಯದಲ್ಲಿ ಖಾತೆ ಮಾಡಲು ಕೊಟ್ಟಿದ್ದ ಸುಮಾರು ಜನಕ್ಕೆ ಖಾತಾ ಪ್ರತಿಯನ್ನು ವಿತರಣೆ ಮಾಡಲಾಯಿತು ಈ ವೇಳೆ ಪುರಸಭಾ ಮುಖ್ಯಾಧಿಕಾರಿ ವಿ. ನಾಗರಾಜ್ , ಕಂದಾಯ ಅಧಿಕಾರಿ ಎನ್.ಶಂಕರ್, ಪುರಸಭೆ ಸದಸ್ಯರಾದ ಕೆ. ಅನ್ನೀಸ್ ಅಹ್ಮದ್ , ತಜಮುಲ್, ಸರ್ದಾರ್, ನಿರ್ದೇಶನ ಸದಸ್ಯರಾದ ನರಸಿಂಹಮೂರ್ತಿ,ಶಿವರಾಜ್, ಪುರಸಭೆ ಸಿಬ್ಬಂದಿ ಗೌತಮ್, ಸುರೇಶ್ ,ಸಂತೋಷ್, ನಾಗೇಶ್ ,ಹಾಜರಿದ್ದರು.

