

ಶ್ರೀನಿವಾಸಪುರ 1 : ತಾಲೂಕಿನ ರೋಣೂರು ಕ್ರಾಸ್ನ ವಿಐಪಿ ಕಾಲೇಜಿನಲ್ಲಿ ಬುಧವಾರ ಪಿಯುಸಿ ಫಲಿತಾಂಶದ ಅಂಗವಾಗಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
ನಮ್ಮ ಶಾಲೆಯಲ್ಲಿ ಎಲ್ಕೆಜಿಯಿಂದ ದ್ವಿತೀಯ ಪಿಯುಸಿ ವರೆಗೂ ಇದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಗುಣಮಟ್ಟದ ಪಠ್ಯ ಹಾಗು ಪಠ್ಯೇತರ ಚಟುವಟಿಕೆಗಳು ಹಮ್ಮಿಕೊಳ್ಳಲಾಗಿದೆ ಎಂದು ಆಡಳಿತ ಮಂಡಲಿ ಅಧ್ಯಕ್ಷ ಡಾ|| ಕೆ.ಎನ್.ವೇಣುಗೋಪಾಲ್ರೆಡ್ಡಿ ತಿಳಿಸಿದರು.
ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪಟ್ಟಣದಲ್ಲಿ ನಮ್ಮ ಬ್ರಾಂಚ್ಗೆ ಸಂಬಂದಿಸಿದಂತೆ ಪಿಯುಸಿ ಕಾಲೇಜು ಪಟ್ಟಣದಲ್ಲಿನ ಹಾಗು ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಿಯುಸಿ ಕಾಲೇಜನ್ನು ಆರಂಭಿಸಲಾಗುವುದು ಎಂದರು.
ಒಟ್ಟು 114 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 34 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 63 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ , ಇನ್ನುಳಿದ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ ಒಟ್ಟು ಶೇ. 95 % ಕಾಲೇಜಿಗೆ ಫಲಿತಾಂಶ ಬಂದಿದೆ.
ವಿಜ್ಞಾನ ವಿಭಾಗದಲ್ಲಿ ಶಾಫಿಯಾ ಕೌಸರ್ 578 ಅಂಕಗಳು( 96.33 %), ಯಶ್ವಿತ.ಎಂ 567 ಅಂಕಗಳು( 94.05 %) , ವಾಣಿಜ್ಯ ವಿಭಾಗದಲ್ಲಿ ಶೃತಿ ಸಿ.ಆರ್. 575 ಅಂಕಗಳು( 95.83 %) , ಪುಷ್ಪ ಕೆ.ಎಮ್ 563 ಅಂಕಗಳು ( 93.83%)ಪಡೆದು ಕಾಲೇಜಿನ ಕೀರ್ತಿಗೆ ಕಾರಣರಾಗಿದ್ದಾರೆ.
ಪ್ರತಿವರ್ಷದಂತೆ ಈ ವರ್ಷವೂ ನಮ್ಮ ವಿಷನ್ ಇಂಡಿಯಾ ಪದವಿ ಪೂರ್ವ ಕಾಲೇಜು ಅತ್ಯುತ್ತಮ ಫಲಿತಾಂಶವನ್ನು ಪಡೆದಿರುವುದರಿಂದ ಸಂತಸವನ್ನು ವ್ಯಕ್ತಪಡಿಸಿ ವಿದ್ಯಾರ್ಥಿಗಳಿಗೆ, ಪೆÇೀಷಕರಿಗೆ ಹಾಗೂ ಉಪನ್ಯಾಸಕ ವರ್ಗದವರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಪ್ರಾಂಶುಪಾಲ ಬಿ.ರಾಜಕುಮಾರ್, ಹಾಗು ಉಪನ್ಯಾಸಕರಾದ ಗಗನ್ಕುಮಾರ್ ಬಿ.ಎಸ್, ಪ್ರೇಮ್ಕುಮಾರ್, ನವೀನ್ಕುಮಾರ್.ಬಿ.ಎಸ್, ಜಯಂತ್ಕುಮಾರ್.ಬಿ, ಶ್ರೀನಿವಾಸ್ ಎಲ್, ರವಿ.ಕೆ.ಪಿ, ಕೆ.ಎಮ್.ವೇಣುಗೋಪಾಲ್, ಆದಿತ್ಯಾ, ಜಿ, ವಿನಯ್ಕುಮಾರ್ ಬಿ.ಆರ್, ಸತ್ಯ.ಪಿ , ಸಿಬ್ಬಂದಿಗಳಾದ ಯಾಮಿನಿ.ಕೆ, ನಾಗಮಣಿ ಹಾಗು ವಿದ್ಯಾರ್ಥಿಗಳ ಪೋಷಕರು ಇದ್ದರು.
9, ಎಸ್ವಿಪುರ್ 1 : ರೋಣೂರು ಕ್ರಾಸ್ನ ವಿಐಪಿ ಕಾಲೇಜಿನಲ್ಲಿ ಪಿಯುಸಿ ಫಲಿತಾಂಶದ ಅಂಗವಾಗಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಡಾ|| ಕೆ.ಎನ್.ವೇಣುಗೋಪಾಲ್ ಮಾತನಾಡಿ, ಅತ್ಯಧಿಕ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಕಾಲೇಜು ವತಿಯಿಂದ ಸನ್ಮಾನಿಸಿದರು.