ಶ್ರೀನಿವಾಸಪುರ : ತಾಲೂಕಿನಲ್ಲಿ ಅರಣ್ಯ ಇಲಾಖೆವತಿಯಿಂದ ಒತ್ತುವರಿ ತೆರವು ಕಾರ್ಯಚರಣೆ ಸಮಯದಲ್ಲಿ ಹಾಗು ಬೆಳೆಗಳು ನಷ್ಟವಾದಾಗ ಆ ತೋಟಗಳಿಗೆ ಬೇಟಿ ನೀಡಿದ್ದೆವು ಆಲ್ಲದೆ ರೈತರಿಗೆ ಭೂಮಿಯನ್ನು ಉಳಿಸುವ ಉದ್ದೇಶದಿಂದಲೂ ಸಹ ನಾವು ಅರಣ್ಯ ಇಲಾಖೆ ಹಾಗು ಸರ್ಕಾರದ ವಿರುದ್ಧ ಹೋರಾಟಗಳನ್ನು ಮಾಡಿದ್ದೀವಿ. ಅಲ್ಲದೆ ಅರಣ್ಯ ಇಲಾಖೆ ಡಿಎಫ್ಓ ಏಡಿಕೊಂಡಲು ನಮ್ಮ ದೂರು ದಾಖಲಿಸಿದ್ದರು. ಅದರೂ ಸಹ ನಾವು ಅದೆನ್ನೆಲ್ಲಾ ಲೆಕ್ಕಿಸಿದೆ ರೈತ ಭೂಮಿಯನ್ನು ಉಳಿಸಲು ಹೋರಾಟ ಮಾಡಿದ್ದೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ತಾಲೂಕು ರೈತ ಸಂಘದ ಅಧ್ಯಕ್ಷ ನಂಬಿಹಳ್ಳಿ ಶ್ರೀರಾಮರೆಡ್ಡಿ ಹೇಳಿದರು.
ಪಟ್ಟಣದ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ಕಚೇರಿಯಲ್ಲಿ ತಾಲೂಕು ಶಾಖೆವತಿಯಿಂದ ಶನಿವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
ಬೇರೆ ರೈತ ಸಂಘನೆಯು ಒತ್ತವರಿ ತೆರೆವು ಗೊಳಿಸುವ ವಿಚಾರದಲ್ಲಿ ಬೇರೆ ರೀತಿಯಲ್ಲಿ ನಡೆದುಕೊಳ್ಳುತ್ತಿರುವುದು ಸರಿಯಲ್ಲ . ದಯವಿಟ್ಟು ನಮ್ಮ ಸಹೋದರರು ಅರಿತುಕೊಳ್ಳಬೇಕು. ಮುಂದಿನ ದಿನಗಳಲ್ಲಿ ನಮ್ಮ ಸಂಘನೆ ವತಿಯಿಂದ ಉಗ್ರವಾದ ಹೋರಾಟ ಮಾಡುವುದಾಗಿ ಮಾಹಿತಿ ನೀಡಿದರು. ಮುಂದಿನ ದಿನಗಳಲ್ಲಿ ಚಳಿಗಾಳಿ
ಅದಿವೇಶನದ ನಂತರ ತಾಲೂಕು ಕಚೇರಿ ಮುಂದೆ ಬೃಹಾದಕಾರ ರೈತರಪರ ಹೋರಾಟಗಳನ್ನು ಮಾಡಲು ಸಿದ್ದತೆ ಮಾಡಿಕೊಂಡಿದ್ದೇವೆ ಎಂದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ಜಿಲ್ಲಾ ಉಪಾಧ್ಯಕ್ಷ ಬೈರಾರೆಡ್ಡಿಮಾತನಾಡಿ ಕೇವಲ ಯಾರನ್ನೊ ಮೆಚ್ಚಿಸುವುದಕೋಸ್ಕರ ಹೆಗಲ ಮೇಲೆ ಟವಲ್ ಹಾಕಿ ಕೊಂಡು ಅರೆಬೆತ್ತಲೆ ಪ್ರತಿಭಟನೆ ನಡೆಸುವುದು ಯಾರ ಪುರುಷ್ತಕ್ಕಾಗಿ ನಿಯತ್ತಾಗಿ ರೈತರ ಹಿತವನ್ನು ಕಾಪಾಡಿ ಎಂದರು. ಗೌನಿಪಲ್ಲಿ ವ್ಯವಸಾಯೋತ್ಪನ್ನ ಸಂಘದಲ್ಲಿ ಕೋಟ್ಯಾಂತರ ರೂಗಳು ಅವ್ಯವಹಾರ ಮಾಡಿದ್ದೀರಿ ಎಂದಿದ್ದರಾ, ಸೂಕ್ತ ದಾಖಲೆ ಮೂಲಕ ಹೋರಾಟ ಮಾಡಿ, ಇಲ್ಲ ಸಲ್ಲದಂತೆ ಹೋರಾಟ ಮಾಡುವುದು ಸರಿಯಲ್ಲ ಎಂದು ಟೀಕಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ರಾಜ್ಯ ಪ್ರದಾನ ಕಾರ್ಯದರ್ಶಿವೀರಭದ್ರಸ್ವಾಮಿ ಮಾತನಾಡಿ ಅರಣ್ಯ ಇಲಾಖೆಯು ಪೊಲೀಸರನ್ನ ಅಡ್ಡ ಇಟ್ಟುಕೊಂಡು ರೈತರ ಮೇಲೆ ದೌರ್ಜನ್ಯ ನಡೆಸುವುದು ಸರಿಯಲ್ಲ. ಅರಣ್ಯ ಇಲಾಖೆ ಕಾನೂನು ಉಲ್ಲಂಘಿಸಿ ರೈತರ ಮೇಲೆ ದೌರ್ಜನ್ಯ ಮಾಡುತ್ತಿರುವುದು ಸರಿಯಲ್ಲ.
ನಮ್ಮ ಇನ್ನೊಬ್ಬ ಸಂಘಟನೆ ಮುಖಂಡರು ಯಾವುತ್ತು ರೈತರ ಪರ ಹೋರಾಟ ಮಾಡಿಲ್ಲ. ನಮ್ಮ ಸಂಘದವತಿಯಿಂದ ಒತ್ತುವರಿ ತೆರೆವುಗೊಳಿಸಲು ಬಿಡುವುದಿಲ್ಲ. ಚಳಿಗಾಲ ಅದಿವೇಶನದಲ್ಲಿ 13 ನೇ ತಾರೀಖು ಈ ವಿಚಾರವಾಗಿ ಸುರ್ವಣಸೌದಕ್ಕೆ ಜಿಲ್ಲೆಯಿಂದ ನೂರಾರು ರೈತರ ಸಮ್ಮುಖದಲ್ಲಿ ಮುತ್ತಿಗೆ ಹಾಕುತ್ತೇವೆ ಎಂದು ಮಾಹಿತಿ ನೀಡಿ, ಅರಣ್ಯ ಇಲಾಖೆ ಅಧಿಕಾರಿ ಕಾರ್ಯವನ್ನು ಖಂಡಿಸುತ್ತೇವೆ ಎಂದರು. ದಳಸನೂರು, ಪಾಳ್ಯದಲ್ಲಿ ತೆರವುಗೊಳಿದಂತೆ ಅರಣ್ಯ ಇಲಾಖೆ ವಿರುದ್ಧ ಹೋರಾಟ ಮಾಡಿದ್ದೇವೆ ಎಂದರು.
ಹಾಲಿ, ಮಾಜಿ ಶಾಸಕರು ರೈತರ ಬಳಿ ಮತಕೇಳುವುದಕ್ಕೆ ಅರ್ನಹರು ಎಂದರು. ಒಂದು ದಿನವೂ ರೈತರ ಪರವಾಗಿ ಬೀದಿಗೆ ಬಂದಿಲ್ಲ ಹಾಗು ರೈತರ ಪರ ಹೋರಾಟಗಳನ್ನು ಮಾಡಿಲ್ಲ ಎಂದು ಟೀಕಿಸಿದರು. ಜಿಲ್ಲಾ ಪ್ರದಾನ ಕಾರ್ಯದರ್ಶಿ ಮಾಸ್ತೇನಹಳ್ಳಿ ವಿ.ನಾರಾಯಣಸ್ವಾಮಿ, ತಾಲೂಕು ಪ್ರದಾನ ಕಾರ್ಯದರ್ಶಿ ಅಸ್ಲಾಂಪಾಷ,ಖಜಾಂಚಿ ಶ್ರೀಧರ್, ಕಾರ್ಯದರ್ಶಿ ಹೆಬ್ಬಟ ರಮೇಶ್ ಇದ್ದರು.