ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿ ಮೆಡಿಕಲ್ ಕಾಲೇಜಿನಲ್ಲಿ ದಿನಾಂಕ 10.01.2025 ಹಾಗೂ 11.01.2025 ರಂದು “ಪ್ರೇರಣಾ-25” -ವೈದ್ಯಕೀಯ ಆರೋಗ್ಯ ಪ್ರದರ್ಶನ
ಹೋಮಿಯೋಪಥಿ ವೈದ್ಯಕೀಯ ಕ್ಷೇತ್ರದಲ್ಲಿ ಚಿಕಿತ್ಸೆ, ಶಿಕ್ಷಣ ಮತ್ತು ಸೇವೆಯಲ್ಲಿ 40 ವರ್ಷಗಳನ್ನು ಪೂರೈಸುತ್ತಿರುವ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು, ಜನವರಿ 10 ಮತ್ತು 11ರಂದು “ಪ್ರೇರಣಾ-25”- ವೈದ್ಯಕೀಯ ಆರೋಗ್ಯ ಪ್ರದರ್ಶನವನ್ನು ಆಯೋಜಿಸುವ ಮೂಲಕ, ತನ್ನ ‘ರೂಬಿ ಜುಬಿಲಿ’ಯನ್ನು ಆಚರಿಸುತ್ತಿದೆ.
ಎರಡು ದಿನಗಳ ಈ ಆರೋಗ್ಯ ಪ್ರದರ್ಶನವನ್ನು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ, ಕಂಕನಾಡಿ ಇದರ ವೈದ್ಯಕೀಯ ಅಧೀಕ್ಷಕರಾದ ಡಾ. ಉದಯ ಕುಮಾರ್ರವರು ಉದ್ಘಾಟಿಸಿದರು. ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆ, ಕಂಕನಾಡಿ, ಇದರ ನಿರ್ದೇಶಕರಾದ ವಂದನೀಯ ರಿಚರ್ಡ್ ಅಲೋಶಿಯಸ್ ಕುವೆಲ್ಯೊ ಇವರು ಸಮಾರಂಭದ ಅಧ್ಯಕ್ಷತೆ ವಹಿಸಿದರು.
ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿಯೋಜಿತ ನಿರ್ದೇಶಕರು ಹಾಗೂ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿಗಳಾದ ವಂದನೀಯ ಫಾವುಸ್ತಿನ್ ಎಲ್. ಲೋಬೊ ರವರು ಸ್ವಾಗತಿಸಿ ಗಣ್ಯರನ್ನು ಪರಿಚಯಿಸಿದರು. ಅವರು ತಮ್ಮ ಸಂದೇಶದಲ್ಲಿ ಆರೋಗ್ಯ ಮತ್ತು ಶಿಕ್ಷಣವನ್ನು ಮುಂದುವರಿಸಲು ಸಂಸ್ಥೆಯ ನಿರಂತರ ಬದ್ಧತೆಯನ್ನು ಒತ್ತಿ ಹೇಳಿದರು. ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಆರೋಗ್ಯ ಪ್ರದರ್ಶನದಿಂದ ಜ್ಞಾನವನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ತಮ್ಮ ಉದ್ಘಾಟನಾ ಭಾಷಣದಲ್ಲಿ, ಡಾ. ಉದಯ ಕುಮಾರ್ರವರು, ಆರೋಗ್ಯ ಮತ್ತು ಹೋಮಿಯೋಪಥಿಯನ್ನು ಉತ್ತೇಜಿಸುವಲ್ಲಿ ಸಂಸ್ಥೆಯು ಪ್ರಮುಖ ಪಾತ್ರವನ್ನು ವಹಿಸಿದೆ ಎಂದು ಶ್ಲಾಘಿಸಿದರು. ಯುವಜನರಲ್ಲಿ ಹೃದಯರಕ್ತನಾಳದ ಕಾಯಿಲೆಗಳು ಹೆಚ್ಚಾಗುತ್ತವೆ ಮತ್ತು ಜೀವನಶೈಲಿ ಹಾಗೂ ಆಹಾರ ಪದ್ದತಿಯನ್ನು ಸರಿಪಡಿಸುವ ಮೂಲಕ ಅವುಗಳನ್ನು ತಡೆಗಟ್ಟುವುದು ಹೇಗೆ ಎಂದು ಅವರು ಒತ್ತಿ ಹೇಳಿದರು.
ವಂದನೀಯ ರಿಚರ್ಡ್ ಅಲೋಶಿಯಸ್ ಕುವೆಲ್ಯೊ ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ‘ಪ್ರೇರಣಾ ಎಂದರೆ ಸ್ಪೂರ್ತಿ’ ಎಂದು ಉಲ್ಲೇಖಿಸಿದರು. ವೈದ್ಯರು, ಇಂಜಿನಿಯರ್ಗಳು ಅಥವಾ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಬಯಸುವ ವಿದ್ಯಾರ್ಥಿಗಳು ಮೊದಲು ಸ್ಪೂರ್ತಿ ಪಡೆಯಬೇಕು. ವಿದ್ಯಾರ್ಥಿಗಳು ಪ್ರತಿ ಸ್ಟಾಲ್ಗೆ ಹೋಗಿ ಅಲ್ಲಿಂದ ಕಲಿಯಲು, ನಮ್ಮ ದೇಹ ವ್ಯವಸ್ಥೆ ಏನು, ಏಕೆ ಮತ್ತು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ವಿನೂತನವಾಗಿ ಯೋಚಿಸಲು ಈ ಆರೋಗ್ಯ ಪ್ರದರ್ಶನವು ಸಹಕಾರಿಯಾಗುವುದು ಎಂದು ತಿಳಿಸಿದರು.
ಫಾದರ್ ಮುಲ್ಲರ್ ಹೋಮಿಯೋಪಥಿ ಫಾರ್ಮಸೂಟಿಕಲ್ ಡಿವಿಜನ್ನ ಆಡಳಿತಾಧಿಕಾರಿ ವಂದನೀಯ ನೆಲ್ಸನ್ ಡಿ. ಪಾಯಸ್, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಇ.ಎಸ್.ಜೆ. ಪ್ರಭು ಕಿರಣ್, ಉಪ ಪ್ರಾಂಶುಪಾಲರಾದ ಡಾ. ವಿಲ್ಮಾ ಮೀರಾ ಡಿ’ಸೋಜ ಫಾದರ್ ಮುಲ್ಲರ್ ಹೋಮಿಯೋಪಥಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಗಿರೀಶ್ ನಾವಡ, ಪ್ರೇರಣ – 2025 ಇದರ ಸಂಯೋಜಕರಾದ ಡಾ. ಮಿನಿ ಐ.ವಿ., ಸಹ-ಸಂಯೋಜಕರಾದ ಡಾ. ಸೆಬಾಸ್ಟಿಯನ್ ಪಿ.ಎ., ಮತ್ತು ಸಂಚಾಲಕರಾದ ಡಾ. ದೀಪಾ ಪಾಯಸ್ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಾ. ಆಡ್ಲಿನ್ ಗೊನ್ಸಾಲ್ವಿಸ್ರವರು ಧನ್ಯವಾದಗಳೊಂದಿಗೆ ಉದ್ಘಾಟನಾ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.
ಮಂಗಳೂರಿನಾದ್ಯಂತ 34 ಪ್ರೌಡ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿಂದ ಸುಮಾರು 4500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ‘ಪ್ರೇರಣಾ- 2025’ ಆರೋಗ್ಯ ರಕ್ಷಣೆಯಲ್ಲಿನ ಪ್ರಗತಿ ಮತ್ತು ಸಮಗ್ರ ಚಿಕಿತ್ಸೆಯಲ್ಲಿ ಹೋಮಿಯೋಪಥಿಯ ಪ್ರಮುಖ ಪಾತ್ರವನ್ನು ಪ್ರದರ್ಶಿಸಿತು.
PRERANA 2025: A Milestone Medical Health Exhibition by Father Muller Homoeopathic Medical College, Deralakatte, January 10th & 11th, 2025
Celebrating 40 years of excellence in healing, education, and service in the field of Homoeopathy, Father Muller Homoeopathic Medical College & Hospital, Deralakatte, marked its Ruby Jubilee by organizing PRERANA 2025 – A Medical Health Exhibition on January 10th and 11th, 2025.
The event was inaugurated by Dr Udaya Kumar, Medical Superintendent, Father Muller Medical College Hospital, Kankanady. The program was presided over by Rev. Fr. Richard Aloysius Coelho, Director, Father Muller Charitable Institutions (FMCI).
Rev. Fr. Faustine L. Lobo, Designate Director of FMCI and Administrator of Father Muller Homoeopathic Medical College, welcomed the gathering and introduced the dignitaries. He underscored the institution’s enduring commitment to advancing healthcare and education in his address. He urged the students to make use of the opportunity learn and gain the knowledge from the exhibition.
In the inaugural speech Dr Udaya Kumar commended the institution for its pivotal role in promoting health and Homoeopathy. He stressed on rise of cardiovascular diseases in youngsters and how to prevent them by correcting the lifestyle and food habits.
Rev. Fr. Richard A Coelho in his presidential address mentioned that Prerana is to inspire. Students who wish to become doctors, engineers or to excel in any field need to get inspired first. Thats what this exhibition is about. Students were asked to go to each stall and learn from there, think innovatively on what, why and how our body system works.
Distinguished guests on the dais included Rev Fr Nelson D Pais, Administrator, Father Muller Homoeopathic Pharmaceutical Division, Dr E. S. J. Prabhu Kiran, Principal, FMHMC, Dr Vilma M. Dsouza, Vice Principal, FMHMC, Dr Girish Navada, Medical Superintendent FMHMC&H, Dr Mini I. V., Coordinator, Dr Sebastian P. A., Co-coordinator and Dr Deepa Pais, Convener of PRERANA 2025.
Dr Adlin R. Gonsalves concluded the ceremony with vote of thanks and hosted the event.
The exhibition witnessed overwhelming participation, with over 4,500 students from 34 schools and pre-university colleges across Mangalore attending the event. PRERANA 2025 showcased advancements in healthcare and the vital role of Homoeopathy in holistic healing, leaving an indelible mark on attendees.