ಶ್ರೀ ವೀರಾಂಜನೇಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸಾಂತಾವರ ಹಾಗೂ ಜೀರ್ಣೋದ್ಧಾರ ಸಮಿತಿ ಇದರ ಜಂಟಿ ಆಶ್ರಯದಲ್ಲಿ ದಿನಾಂಕ 08-10-2023ರಂದು ನಡೆದ ಊರ ಗ್ರಾಮಸ್ಥರ ಹಾಗೂ ಸಾರ್ವಜನಿಕರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮದ ಬಗ್ಗೆ ಸಮಾಲೋಚನೆಯ ಪೂರ್ವಭಾವಿ ಸಭೆಯು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಎಸ್. ರತ್ನಾಕರ್ ಶೇರೆಗಾರ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪ್ರಾಸ್ತಾವಿಕವಾಗಿ ಕಂದಾವರ ಗ್ರಾಮ ಪಂಚಾಯತ್ ಸದಸ್ಯರು, ಬಸ್ರೂರು ವ್ಯವಸಾಯ ಸೇವಾ ಸಂಘದ ನಿರ್ದೇಶಕರು ಹಾಗೂ ಶ್ರೀ ವೀರಾಂಜನೇಯ ಮಿತ್ರ ವೃಂದ್ರ (ರಿ.) ಅಧ್ಯಕ್ಷರಾದ ಎಸ್. ಶೀನ ಪೂಜಾರಿ ಇವರು ದೇವಸ್ಥಾನದ ಈ ಹಿಂದೆ ನಡೆದು ಬಂದ ಬಗ್ಗೆ ಸವಿಸ್ತಾರವಾಗಿ ಹೇಳಿದರು.
ಜೀಣೋದ್ಧಾರ ಸಮಿತಿಯ ಅಧ್ಯಕ್ಷರಾದ ಸಂತೋಷ್ ಪೂಜಾರಿಯವರು ದೇವಸ್ಥಾನದ ಜೀರ್ಣೋದ್ಧಾರದ ಕೆಲಸ ಕಾರ್ಯದ ಬಗ್ಗೆ ಭಕ್ತಾದಿಗಳಿಂದ ಜೀರ್ಣೋದ್ಧಾರ ಕಾರ್ಯದಲ್ಲಿ ಸಹಕಾರ ನೀಡಬೇಕಾಗಿ ಕೇಳಿಕೊಂಡರು. ಧಾರ್ಮಿಕ ಮುಖಂಡ ಕೃಷ್ಣದೇವ ಕಾರಂತರು ಹೇಗೆ ಕೆಲಸವನ್ನು ಮುಂದುವರಿಸಿಕೊಂಡು ಹೋಗಬೇಕೆಂದು ಹೇಳಿದರು. ಪುರೋಹಿತರಾದ ಶ್ರೀಪತಿ ಕಂಬಿಕಲ್ಲಿ ಕಕ್ಕುಂಜಿ ಇವರು ದೇವಸ್ಥಾನ 800 ವರ್ಷಗಳ ಇತಿಹಾಸವುಳ್ಳ ಪ್ರಸಿದ್ಧ ವೀರಾಂಜನೇಯ ದೇವಸ್ಥಾನವಾಗಿರುತ್ತದೆ. ಧಾರ್ಮಿಕ ವಿಧಿ ವಿಧಾನ ದೇವಸ್ಥಾನದ ಮಹತ್ವದ ಬಗ್ಗೆ ಸವಿಸ್ತಾರವಾಗಿ ಹೇಳಿದರು. ವಕೀಲರಾದ ರತ್ನಾಕರ ಶೆಟ್ಟಿ ಸಟ್ವಾಡಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಸಭೆಯಲ್ಲಿ ಎಲ್ಲಾ ಸಂಘ ಸಂಸ್ಥೆಗಳು ಜೀರ್ಣೋದ್ಧಾರದ ಕಾರ್ಯದಲ್ಲಿ ಸಹಕಾರ ನೀಡವುದಾಗಿ ಭರವಸೆಯನ್ನು ನೀಡಿರುತ್ತಾರೆ. ವೇದಿಕೆಯಲ್ಲಿ ಕಂದಾವರ ಗ್ರಾಮ ಪಂಚಾಯತಿನ ಅಧ್ಯಕ್ಷಾರಾ ಅನುಪಮ ಶೆಟ್ಟಿ, ಮಾಜಿ ಉಪಾಧ್ಯಕ್ಷ ಶೋಭಾ, ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಸಂಜೀವ ಮೇಸ್ತ, ಉದ್ಯಮಿ ದಿನಕರ ಶೆಟ್ಟಿ, ಗ್ರಾಮ ಪಂಚಾಯತಿನ ಸದಸ್ಯರಾದ ಅಭಿಜಿತ್ ಕೊಠಾರಿ, ಊರಿನ ಹಿರಿಯರಾದ ಗೋಪಾಲ ಎನ್. ಉಗ್ರಾಣಿ, ದೇವಸ್ಥಾನದ ಅರ್ಚಕರಾದ ಕೃಷ್ಣಮೂರ್ತಿ ಭಟ್ ಉಪಸ್ಥಿತರಿದ್ದರು. ಸ್ವಾಗತವನ್ನು ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ವೀರಾಂಜನೇಯ ಮಿತ್ರ ವೃಂದ (ರಿ.) ಇದರ ಕಾರ್ಯದರ್ಶಿಯಾದ ಸುರೇಶ್ ಕೋಟೆಗಾರ್, ಜೀಣೋದ್ಧಾರ ಸಮಿತಿಯ ಕಾರ್ಯದರ್ಶಿ ದೇವೇಂದ್ರ ಎನ್. ಉಗ್ರಾಣಿ ನಿರೂಪಿಸಿದರು. ಸತ್ಯನಾರಾಯಣ ಜಿ. ಧನ್ಯವಾದ ಅರ್ಪಿಸಿದರು.