ಕೊರೋನಾ ಸೋಂಕು ತಡೆಗೆ ಮುಂಜಾಗ್ರತೆ ವಹಿಸಿ : ಡಿಸಿ ಸೆಲ್ವಮಣಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ ಜೂನ್ 14 : ಸರ್ಕಾರದ ನಿಯಮಗಳನ್ನು ಪಾಲಿಸೋಣ, ಕೊರೋನಾ ನಿಯಂತ್ರಣಕ್ಕೆ ಸಹಕರಿಸೋಣ. ಸೋಂಕಿನ ಪ್ರಕರಣಕ್ಕೆ ನಾವು ಹೊಣೆಗಾರರಾಗುವುದು ಬೇಡ, ಮುಂಜಾಗ್ರತೆ ಕ್ರಮಗಳನ್ನು ಪಾಲಿಸೋಣ. ಕೊರೋನಾ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಎಲ್ಲರೂ ಸಹಕರಿಸುವಂತೆ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ತಿಳಿಸಿದರು.
ಸೋಮವಾರ ತಮ್ಮ ಕಾರ್ಯಾಲಯದ ಸಭಾಂಗಣದಲ್ಲಿ ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ನೀಡಿದ ಆಮ್ಲಜನಕ ಸಾಂದ್ರಕ, ಪಲ್ಸ್ ಆಕ್ಸಿಮೀಟರ್ ಸೇರಿದಂತೆ ಕೊವಿಡ್ ಪೂರಕ ಪರಿಕರಗಳನ್ನು ಪರಿಶೀಲಿಸಿ ಅವರು ಮಾತನಾಡುತ್ತಿದ್ದರು.
ಕೊರೋನಾ ಎರಡನೇ ಅಲೆ ತಡೆ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲರ ಸಹಕಾರ ಪೂರಕವಾಗಿದ್ದು, ಇದೇ ರೀತಿ ಮುಂದಿನ ದಿನಗಳಲ್ಲಿ ಮಕ್ಕಳ ಬಗ್ಗೆ ಗಮನ ಹರಿಸಬೇಕಾಗಿದೆ. ಮಕ್ಕಳ ಆರೋಗ್ಯ ಹಾಗೂ ಅವರ ಮನಸ್ಥಿತಿಗಳ ಸಮತೋಲನ ಕಾಪಾಡುವಲ್ಲಿ ಪೆÇೀಷಕರು ಹೆಚ್ಚಾಗಿ ಗಮನಿಸುವಂತಾಗಬೇಕು ಎಂದರು .
ಸರ್ಕಾರ ಕೊರೋನಾ ಹರಡದಂತೆ ಕೈಗೊಂಡಿರುವ ಅನೇಕ ಕ್ರಮಗಳನ್ನು ಯಶಸ್ವಿಗೊಳಿಸಲು ವಿವಿಧ ಇಲಾಖೆಗಳ ಸಹಕಾರವೇ ಅಲ್ಲದೆ ಸಂಘ ಸಂಸ್ಥೆಗಳ ಪಾತ್ರ ಶ್ಲಾಘನೀಯವಾಗಿದೆ ಎಂದರು .
3 ಆಕ್ಸಿಜನ್ ಕಾನ್ಸಂನ್ ಟ್ರೇಟರ್‍ಗಳನ್ನು ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ನಗರ ಮತ್ತು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು ಗಳಿಂದ ದೃಢೀಕರಿಸಲ್ಪಟ್ಟ ಸಂಬಂಧಪಟ್ಟ ರೋಗಿಗಳಿಗೆ ಅಗತ್ಯವಿದ್ದರೆ ಕನಿಷ್ಠ ಐದು ದಿನಗಳ ಕಾಲ ಉಚಿತವಾಗಿ ನೀಡುವುದಾಗಿ ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಚೇರ್ಮನ್ ಮನ್ ಎನ್. ಗೋಪಾಲಕೃಷ್ಣ ಗೌಡ ತಿಳಿಸಿದರು .
ಸಂಸ್ಥೆ ವತಿಯಿಂದ ನಡೆಯುತ್ತಿರುವ ಪಲ್ಸ್ ಆಕ್ಸಿಮೀಟರ್, ಆಕ್ಸಿಜನ್ ಕಾನ್ಸನ್ ಟ್ರೇಟರ್, ಮಾಸ್ಕ್, ಪೌಷ್ಠಿಕಾಂಶಯುಕ್ತ ಜೂಸ್, ಮಿನರಲ್ ವಾಟರ್ ಪರಿಶೀಲಿಸಿ ವಿತರಿಸಲು ಸೂಚಿಸಿದ ಈ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಎಸ್. ಸಿ. ವೆಂಕಟಕೃಷ್ಣಪ್ಪ ,ವೈಸ್ ಚೇರ್ಮನ್ ಆರ್ ಶ್ರೀನಿವಾಸನ್ , ಕಾರ್ಯದರ್ಶಿ ಆರ್ ನಂದೀಶ್ ಕುಮಾರ್, ಖಜಾಂಚಿ ಜಿ ಶ್ರೀನಿವಾಸ್, ವಿದ್ಯುತ್‍ಗಳಾದ ವಿ.ಪಿ.ಸೋಮಶೇಖರ್, ಮುರುಳೀಧರ್, ವೆಂಕಟೇಶ್‍ಗೌಡ, ಶ್ರೀರಾಮರೆಡ್ಡಿ , ಸೀನಪ್ಪ ಮತ್ತಿತರರು ಉಪಸ್ಥಿತರಿದ್ದರು
.