

ಕುಂದಾಪುರ, ಫೆ.17: ಭಾರತದ ಕರ್ನಾಟಕದಲ್ಲಿ ಜನಿಸಿ ಅನಿವಾಸಿ ಯಶಸ್ವಿ ಉದ್ಯಮಿಯಾಗಿ, ತಾನು ಗಳಿಸಿದ ಗಳಿಕೆಯಲ್ಲಿ ಜೀವನ ಪರ್ಯಾಂತ ಇಂತಿಸ್ಟು ಭಾಗ ಸಮಾಜಕ್ಕೆ, ದೀನ ದಲಿತರಿಗೆ, ಸಂಘ ಸಂಸ್ಥೆಗಳಿಗೆ ದಾನ ಧರ್ಮ ಮಾಡುವೆನು ಎಂದು ನಿರ್ಧರಿಸಿ, ಹಾಗೇ ದಾನ ಧರ್ಮ ಮಾದಿ ಸಮಾಜದಲ್ಲಿ ಆದರ್ಶ ಪುರುಷನಾಗಿ ಹೊರಹೊಮ್ಮಿದ ಡಾ|ರೊನಾಲ್ಡ್ ಕುಲಾಸೊ ಇವರನ್ನು ಇತ್ತೀಚೆಗೆ ಲಂಡನ್‍ನಿನ “ವರ್ಲ್ಡ್ ಬುಕ್ ರೆಕಾರ್ಡ್ಸ್” ಸಂಸ್ಥೆ ಇವರ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ ಗೌರವಿಸಿ ಕುಲಾಸೊ ಅವರ ವ್ಯಕ್ತಿತ್ವವನ್ನು ಕೊಂಡಾಡಿ, ಇವರನ್ನು ಪ್ರಪಂಚಕ್ಕೆ ಪರಿಚಯಿಸಿತು.
ಇಂತಹ ಅಪರೂಪದ ಕೀರ್ತಿಗೆ ಭಾಜನರಾದ ಡಾ|ಕುಲಾಸೊ ಅವರನ್ನು ಬೆಂಗಳೂರು ನಾಗರಿಕರ ಪರವಾಗಿ ವೈಭವದಿಂದ ಸಮ್ಮಾನಿಸಿತು. ಇದೀಗ ಇದೇ ಫೆ.24 ರಂದು ಮಂಗಳೂರು ನಾಗರಿಕರ ಪರವಾಗಿ ಅದ್ದೂರಿಯಾಗಿ ಸಮ್ಮಾನಿಸಲು ನಿರ್ಧರಿಸಿದೆ. ಈ ಕಾರ್ಯಕ್ರಮದ ಸಲುವಾಗಿ ಕುಂದಾಪುರ ರೋಜರಿ ಸೊಸೈಟಿ ಲಿ. ನ ಸಭಾಭವನದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಈ ಸಭೆಯ ಅಧ್ಯಕ್ಷತೆಯನ್ನು ರೊನಾಲ್ಡ್ ಕುಲಾಸೊ ಮಂಗಳೂರು ನಾಗರಿಕ ಸನ್ಮಾನ ಸಮಿತಿಯ ಅಧ್ಯಕ್ಷರಾದ ಮಾಜಿ ಶಾಸಕ ಜೆ.ಆರ್.ಲೋಬೊ ವಹಿಸಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ “ವರ್ಲ್ಡ್ ಬುಕ್ ರೆಕಾರ್ಡ್ಸ್” ಇವರಿಂದ ಗುರುತಿಸಲ್ಪಟ್ಟ ರೊನಾಲ್ಡ್ ಕುಲಾಸೊ, ಸಮಾಜಕ್ಕೆ ಆದರ್ಶ ವ್ಯಕ್ತಿ, ಅವರು ಜಾತಿ ಧರ್ಮ ಭೇದಬಾವವಿಲ್ಲದೆ ತಾನು ಗಳಿಸಿದ ಗಳಿಕೆಯನ್ನು ಸಮಾಜಕ್ಕೆ ವಿನಿಯೋಗಿಸಿದ, ಬಹು ವಿರಳ ವ್ಯಕ್ತಿ, ಅವರನ್ನು ಸಮಾನ್ನಿಸುವುದು ನಮ್ಮ ಕರ್ತವ್ಯವಾಗಿದೆ, ನಾವು ಅವರಿಗೆ ಸಮ್ಮಾನಿಸುವುದುರಿಂದ ಅಗು ಹೋಗುವುದು ಏನೂ ಇಲ್ಲ, ರೊನಾಲ್ಡ್ ಕುಲಾಸೊ, ರೊನಾಲ್ಡ್ ಕುಲಾಸೊ ಆಗಿಯೆ ಇರುತ್ತಾರೆ, ಆದರೆ ನಾವು ಅವರನ್ನು ಸನ್ಮಾನಿಸುವುದು ಕರ್ತವ್ಯವಾಗಿದೆ, ಇವರನ್ನು ಸನ್ಮಾನಿಸಲು ಬೆಂಗಳೂರಿನ ಆರ್ಚ್ ಬಿಷಪ್, ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಶ್ರೀ ವಿರೇಂದ್ರ ಹೆಗ್ಗಡೆ, ಬಿಷಗಳಾದ ಅ|ವಂ|ಡಾ|ಪೀಟರ್ ಪಾವ್ಲ್, ಅ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ, ಸಿ.ಎಸ್.ಐ. ಬಿಷಪ್ ಅ|ವಂ|ಹೇಮಾಚಂದ್ರ, ಅ|ವಂ|ಡಾ|ಲಾರೆನ್ಸ್ ಮುಕ್ಕೊಯಿ, ಅ|ವಂ|ಡಾ|ಫ್ರಾನ್ಸಿಸ್ ಸೆರಾವೊ, ಅ|ವಂ|ಡಾ|ಹೆನ್ರಿ ಡಿಸೋಜಾ, ಮಾಜಿ ಮಂತ್ರಿ ಯು.ಟಿ.ಖಾದರ್, ಡಾ| ಮೋಹನ್ ಆಳ್ವಾ ಮತ್ತು ಇನ್ನಿತರ ಎಲ್ಲಾ ಸಮಾಜದ ಗಣ್ಯಾತಿ ಗಣ್ಯರು ಆಗಮಿಸಲಿದ್ದಾರೆ, ಇಂತಹ ಕಾರ್ಯಕ್ರಮದಲ್ಲಿ ಕುಂದಾಪುರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಿಕೊಂಡರು.
ಈ ಸಂದರ್ಭದಲ್ಲಿ ಕುಂದಾಪುರ ವಲಯ ಕಥೊಲಿಕ್ ಸಭಾ ಅಧ್ಯಕ್ಷೆ ಶಾಂತಿ ಪಿರೇರಾ, ಕಿರಣ್ ಲೋಬೊ, ಮತ್ತು ಇತರ ಹಲವಾರು ಮುಖಂಡರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಚಾಲಕರಾದ ಡೇನಿಸ್ ಡಿಸಿಲ್ವಾ ಕಾರ್ಯಕ್ರಮ ರೂಪು ರೇಖೆಗಳನ್ನು ವಿವರಿಸಿದರು. ಕಾರ್ಯಕ್ರಮ ಸಮಿತಿಯ ಸದಸ್ಯರಾದ ಜಾನ್ಸನ್ ಡಿಆಲ್ಮೇಡಾ ಸ್ವಾಗತಿಸಿದರು. ಇನ್ನೊರ್ವ ಸದಸ್ಯರಾದ ಅಲ್ವಿನ್ ಕ್ವಾಡರ್ಸ್ ಧನ್ಯವಾದಗಳನ್ನು ಸಮರ್ಪಿಸಿದರು







