ಕೋಲಾರ ಉಪ ವಿಭಾಗಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿರುವ ಆನಂದ ಪ್ರಕಾಶ್ ಮೀನಾ ರವರಿಗೆ ರೈತ ಸಂಘದಿಂದ ಗಿಡ ನಡುವ ಮೂಲಕ ಸ್ವಾಗತ ಕೆರೆಗಳ ಒತ್ತುವರಿ ತೆರವುಗೊಳಿಸುವಂತೆ ಮನವಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ-ಜು-31, ಕೋಲಾರ ಜಿಲ್ಲೆಯ ನೂತನ ಉಪ ವಿಭಾಗಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿರುವ ಆನಂದ ಪ್ರಕಾಶ್ ಮೀನಾ ರವರಿಗೆ ರೈತ ಸಂಘದಿಂದ ಗಿಡ ನಡುವ ಮೂಲಕ ಸ್ವಾಗತಿಸಿ ಕೆರೆಗಳ ಒತ್ತುವರಿ ತೆರವುಗೊಳಿಸುವಂತೆ ಮನವಿ ನೀಡಿ ಒತ್ತಾಯಿಸಲಾಯಿತು.
ಮನವಿ ನೀಡಿ ಮಾತನಾಡಿದ ರೈತ ಸಂಘ ಜಿಲ್ಲಾ ಉಪಾಧ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ ಬಯಲು ಸೀಮೆಯ ಕೋಲಾರ ಜಿಲ್ಲೆಯಲ್ಲಿ 2300 ಕೆರೆಗಳಿದ್ದು, ಕೆರೆಗಳ ತವರು ಎಂದು ಪ್ರಸಿದ್ದಿ ಪಡೆದಿರುವ ಜಿಲ್ಲೆಯ ಜಲ ಮೂಲಗಳು ದಿನೇ ದಿನೇ ಒತ್ತುವರಿದಾರರ ದುರಾಸೆಗೆ ಬಲಿಯಾಗುತ್ತಿವೆ. ಹೈಕೋರ್ಟ್ ಆದೇಶದಂತೆ ಒತ್ತುವರಿ ತೆರವುಗೊಳಿಸಲು ವಿಶೇಷ ತಂಡ ರಚನೆ ಮಾಡಬೇಕೆಂದು ಮನವಿ ಮಾಡಿದರು.
ಮಹಿಳಾ ಜಿಲ್ಲಾಧ್ಯಕ್ಷ ಎ.ನಳಿನಿಗೌಡ ಮಾತನಾಡಿ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಜನ ಸಾಮಾನ್ಯರ ಕೆಲಸಗಳು ಆಮೆಗತಿಯಲ್ಲಿ ಸಾಗುತ್ತಿವೆ. ಚಿಕ್ಕ ಚಿಕ್ಕ ಸಮಸ್ಯೆಗೂ ಕೋರ್ಟ್ ಮೆಟ್ಟಲೇರಬೇಕಾಗಿದೆ. ಅದರಂತೆ ಜಿಲ್ಲಾದ್ಯಂತ ಸರ್ಕಾರಿ ಗೋಮಾಳ ದಿನೇ ದಿನೇ ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ಉದ್ದಿಮೆಗಳ ಪಾಲಗುತ್ತಿವೆ. ಅದರಿಂದ ಕುರಿಗಾಯಿಗಳಿಗೆ ಕುರಿ ಮೇಯಿಸಲು ತುಂಬಾ ಸಮಸ್ಯೆಗಳ ಜೊತೆಗೆ ಕೆರೆ, ಗುಂಡುತೋಪು, ರಾಜಕಾಲುವೆಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡುವ ತಾಲ್ಲೂಕು ಕಛೇರಿಗಳಲ್ಲಿ ಅವ್ಯಹಾರಕ್ಕೆ ಕಡಿವಾಣ ಹಾಕಿ ಜನ ಸ್ನೇಹಿ ಇಲಾಖೆಗಳನ್ನಾಗಿ ಮಾಡಬೇಕು. ಹಾಗೂ ಈಗಾಗಲೇ ಜಿಲ್ಲಾದ್ಯಂತ ಕೆರೆ, ಗುಂಡುತೋಪು, ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸುವಂತೆ 380 ಕೇಸುಗಳನ್ನು ಮಾನ್ಯ ಲೋಕಾಯುಕ್ತ ಹಾಗೂ ಭೂಕಬಳಿಕೆ ನ್ಯಾಯಾಲಯದಲ್ಲಿ ದಾಖಲಿಸಿರುವುದಾಗಿ ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ನೂತನ ಉಪ ವಿಭಾಗಾಧಿಕಾರಿ ಮೀನಾ ಆನಂದ್ ಪ್ರಕಾಶ್ ರವರು ಜನರ ಸಮಸ್ಯೆಗಳಿಗೆ ಸ್ಪಂಧಿಸುತ್ತೇನೆ. ಯಾವುದೇ ರೀತಿಯ ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ. ಕೆರೆ ರಾಜಕಾಲುವೆ ಗುಂಡುತೋಪು ತೆರವುಗೊಳಿಸಲು ಸಂಬಂಧಪಟ್ಟ ತಾಲ್ಲೂಕು ದಂಡಾಧಿಕಾರಿಗಳಿಗೆ ಸೂಚನೆ ನೀಡುವ ಭರವಸೆಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾಧ್ಯಕ್ಷ ಐತಂಡಹಳ್ಳಿ ಮಂಜುನಾಥ, ಹಸಿರು ಸೇನೆ ಜಿಲ್ಲಾಧ್ಯಕ್ಷ ಕಿರಣ್, ಜಿಲ್ಲಾ ಉಪಾಧ್ಯಕ್ಷ ಚಾಂದ್‍ಪಾಷ, ಕೋಲಾರ ತಾಲ್ಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ, ಮಾಲೂರು ತಾಲ್ಲೂಕು ಅಧ್ಯಕ್ಷ ಮಾಸ್ತಿ ವೆಂಕಟೇಶ್, ಯಲ್ಲಪ್ಪ, ತಿಮ್ಮಣ್ಣ, ಚಂದ್ರಪ್ಪ, ಆನಂದರೆಡ್ಡಿ, ಸುಪ್ರಿಂಚಲ, ಮುಂತಾದವರು ಇದ್ದರು.