ಮಹಿಳಾ ಜಾಗೃತಿ ಸಮಾವೇಶದಲ್ಲಿ ಪ್ರಜಾರತ್ನ ಪ್ರಶಸ್ತಿ ಪ್ರಧಾನ : ಹಳ್ಳಿಯ ಮಹಿಳೆಯರು ಸ್ವಾವಲಂಬಿಗಳಾಗಿ ಸಮಾಜದ ಮುಖ್ಯವಾಹಿನಿಗೆ ಬರುವಂತೆ ಕೆ.ಶ್ರೀನಿವಾಸಗೌಡ ಕರೆ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ ಆಗಸ್ಟ್ 3 : ಮಹಿಳೆಯರು ಸರ್ಕಾರದ ಸೌಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಅದರಲ್ಲೂ ಹಳ್ಳಿಯ ಮಹಿಳಯರು ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಸರ್ಕಾರ ಮಹಿಳೆಯರಿಗಾಗಿ ಇನ್ನಷ್ಟು ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಕೋಲಾರ ಶಾಸಕ ಕೆ.ಶ್ರೀನಿವಾಸಗೌಡ ಅಭಿಪ್ರಾಯಪಟ್ಟರು.
ಪ್ರಜಾ ಸೇವಾ ಸಮಿತಿ ಸಹಯೋಗದಲ್ಲಿ ಅಂಗನವಾಡಿ, ಅಕ್ಷರ ದಾಸೋಹ, ಆಶಾ, ವಿ.ಆರ್.ಡಬ್ಲೂ. ಎಂ.ಆರ್.ಡಬ್ಲೂ. ಕ್ಷೇಮಾಭಿವೃದ್ಧಿ ಸಮಿತಿಗಳು ಹಾಗೂ ಕಾರ್ಯಕ್ರಮವನ್ನು ಬೆಂಬಲಿಸಿ ರೈತ ನಾಯಕ ಪ್ರೊ. ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಹಯೋಗದಲ್ಲಿ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.
ಕೋಲಾರ ಕ್ಷೇತ್ರದಲ್ಲಿ ಮಹಿಳೆಯರಿಗಾಗಿ ಡಿ.ಸಿ.ಸಿ.ಬ್ಯಾಂಕ್ ನೀಡುವ ಸಾಲ ಸೌಲಭ್ಯವನ್ನು ಹಾಗೂ ಸರ್ಕಾರದ ಸೌಲಭ್ಯಗಳನ್ನು ಕಟ್ಟಡ ಕಡೆಯ ಬಡ ಕುಟುಂಬದ ಮಹಿಳೆಗೂ ತಲುಪಿಸುವಂತಹ ಕೆಲಸವನ್ನು ಮಾಡುತ್ತಿದ್ದೇನೆ ಅದನ್ನು ಮಹಿಳೆಯರು ಸದುಪಯೋಗಪಡಿಸಕೊಳ್ಳಬೇಕೆಂದು ಕರೆ ನೀಡಿದರು.


ಇದೇ ಸಂದರ್ಭದಲ್ಲಿ ಕಟ್ಟಕಡೆಯ ಮಹಿಳೆಯರನ್ನು ಗುರ್ತಿಸಿ ಪ್ರಜಾರತ್ನ ಪ್ರಶಸ್ತಿ ನೀಡಲಾಗಿದೆ ಇವರೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಕ್ಷೇತ್ರ ಸಲ್ಲಸಿದ ವ್ಯಕ್ತಿಗಳನ್ನು ಗುರ್ತಿಸಿ 150 ಮಂದಿಗೆ ಪ್ರಜಾರತ್ನ ಪ್ರಶಸ್ತಿಯನ್ನು ನೀಡಲಾಯಿತು. ಹಾಗೂ ಸಮಾವೇಶದಲ್ಲಿ ಪಾಲ್ಗೊಂಡ ಗಣ್ಯರಿಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿದರು.
ಕೋಲಾರ ಜಿಲ್ಲಾಧಿಕಾರಿ ಡಾ|| ಸೆಲ್ವಮಣಿ ರವರು ಮಾತನಾಡಿ ಮಹಿಳೆಯರು ಸ್ವಾವಲಂಭಿಗಳಾಗಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಮಹಿಳೆಯರು ಎಲ್ಲಾ ರಂಗದಲ್ಲೂ ಯಶ ಕಾಣಬೇಕು ಹಾಗೂ ಸಕಾರದ ಸೌಲಭ್ಯಗಳನ್ನು ಮಹಿಳೆಯರಿಗೆ ಸಮಯಕ್ಕೆ ಸರಿಯಾಗಿ ಸಿಗುವ ರೀತಿಯಲ್ಲಿ ತಲುಪಿಸಲು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೂ ತಿಳಿಸಿದ್ದೇನೆ ಜಿಲ್ಲಾಡಳಿತ ಕೂಡ ಮಹಿಳೆಯರಿಗೆ ಹೆಚ್ಚು ಒತ್ತು ನೀಡಲಿದೆ. ಯಾವುದೆ ಸಮಯದಲ್ಲೂ ಜಿಲ್ಲಾಧಿಕಾರಿಗಳ ಕಛೇರಿಗೆ ತಾವೇ ಖುದ್ದು ಬಂದು ತಮ್ಮ ಅಹವಾಲುಗಳನ್ನು ನೀಡಲು ತಿಳಿಸಿದರು. ಮಹಿಳೆಯರಿಗೆ ಯಾವುದೇ ಸಮಸ್ಯೆಯಾದಲ್ಲಿ ಜಿಲ್ಲಾಡಳಿತ ಎಲ್ಲಾ ರೀತಿಯ ನೆರವನ್ನು ನೀಡಲಿದೆ ಎಂದರು.
ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡೆಕ್ಕಾ ಕಿಶೋರ್ ಬಾಬುರವರು ಮಾತನಾಡಿ ಮಹಿಳಯರಿಗೆ ಯಾವುದೇ ರೀತಿಯ ಸಂದರ್ಭದಲ್ಲಿ ಕಾನೂನಿನ ನೆರವನ್ನು ನೀಡಲು ಪೊಲೀಸ್ ಇಲಾಖೆ ಸಂಪೂರ್ಣವಾಗಿ ಕಾರ್ಯ ನಿರ್ವಹಿಸುತ್ತಿದ್ದು, ದಿನದ 24 ಗಂಟೆಯೂ ಕೆಲಸ ಮಾಡುತ್ತಿದ್ದು, ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯ, ಅತ್ಯಾಚಾರ, ಶೋಷಣೆಯನ್ನು ಪ್ರತಿಭಟಿಸಲು ಯಾರಿಗೂ ಭಯಪಡದೆ ಸಂಬಂಧಪಟ್ಟ ಠಾಣೆಗೆ ಅಥವಾ ಕಂಟ್ರೋಲ್ ರೂಂಗೆ ಕರೆ ಮಾಡಿ ದೂರು ನೀಡಿದಲ್ಲಿ ಹತ್ತು ನಿಮಿಷದಲ್ಲಿ ನಿಮ್ಮ ನೆರವಿಗೆ ನಮ್ಮ ಪೊಲೀಸ್ ಇಲಾಖೆ ದಾವಿಸಲಿದೆ ಎಂದರು. ಹಳ್ಳಿಗಳಲ್ಲಿ ಮಾಡುವ ಕಳ್ಳಬಟ್ಟಿ ಸಾರಾಯಿ, ಬ್ಲಾಕ್‍ನಲ್ಲಿ ಸಾರಾಯಿ ಮಾರಾಟ ಮಾಡುತ್ತಿದ್ದರೆ ಸಂಬಂಧಟ್ಟ ಠಾಣೆಗೆ ತಿಳಿಸಲು ಕೋರಿದರು. ಯಾವುದೇ ಸಂದರ್ಭದಲ್ಲಿ ಮಹಿಳೆಯರಿಗೆ ತೊಂದರೆಯಾದಲ್ಲಿ ಪೊಲೀಸ್ ಇಲಾಖೆ ತಮ್ಮ ನೆರವಿಗೆ ದಾವಿಸಿ ತಮ್ಮ ರಕ್ಷಣೆಯನ್ನು ಮಾಡಲಿದೆ ಎಂದು ತಿಳಿಸಿದರು.
ಕೋಲಾರ ಚಿಕ್ಕಬಳ್ಳಾಪುರ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷರಾದ ಆಂಜನೇಯರೆಡ್ಡಿ ರವರು ಮಾತನಾಡಿ ಮಹಿಳೆಯರು ಸಮಾಜದ ಮುಖ್ಯ ವಾಹಿನಿಗೆ ಬಂದು ತಮ್ಮ ಒಂದು ಮೂಲಭೂತ ಹಕ್ಕುಗಳನ್ನು ಪಡೆಯಲು ಶಾಂತಿಯುತ ಹೋರಾಟಗಳನ್ನು ಒಟ್ಟಾಗಿ ಮಾಡಲು ಸಂಘಟಿತರಾಗಿ ನ್ಯಾಯಕ್ಕಾಗಿ ಹೋರಾಟ ಮಾಡಬೇಕು. ಶುದ್ಧ ಕುಡಿಯುವ ನೀರಿಗಾಗಿ ನಡೆಯುತ್ತಿರುವ ನಿರಂತರ ಹೋರಾಟವನ್ನು ಮಹಿಳೆಯರೂ ಸಹ ಅರಿತುಕೊಂಡು ಹೋರಾಟಕ್ಕೆ ಸಂಪೂರ್ಣವಾದ ಬೆಂಬಲವನ್ನು ನೀಡಬೇಕೆಂದು ಮನವಿ ಮಾಡಿದರು.
ಸಮಿತಿಗಳ ಸಂಸ್ಥಾಪಕ ಅಧ್ಯಕ್ಷರಾದ ಕಲ್ವಮಂಜಲಿ ಸಿ.ಶಿವಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ ಸಂಘಟನೆಯು ನಡೆದು ಬಂದ ದಾರಿ ಹಾಗೂ ಮಹಿಳಾ ಜಾಗೃತಿ ಸಮಾವೇಶದ ಉದ್ದೇಶಗಳನ್ನು ತಿಳಿಸಿಕೊಟ್ಟು, ಸುಮಾರು 25 ವರ್ಷಗಳಿಂದ ನಿರಂತರವಾಗಿ ಅಂಗವನಾಡಿ ಹೋರಾಟವನ್ನು ಮಾಡಿದ ಪ್ರತಿಫಲವಾಗಿ ಸುಮಾರು ಹನ್ನೊಂದು ಸಾವಿರ ವೇತನ ಹೆಚ್ಚಳವಾಗಿದೆ ಸಹಾಯಕೀಯರಿಗೆ ಆರು ಸಾವಿರ ಸಂಬಳ ಹೆಚ್ಚಳವಾಗಿದೆ. ಆಶಾ ಕಾರ್ಯಕರ್ತರ ಹೋರಾಟದ ಫಲವಾಗಿ ಐದು ಸಾವಿರ ವೇತನ ಹೆಚ್ಚಳವಾಗಿದೆ, ಅಕ್ಷರ ದಾಸೋಹ ನೌಕರರ ಸಮಿತಿಯು ಸುಮಾರು 4 ವರ್ಷದಿಂದ ಬೇಡಿಕೆಗಳನ್ನು ಈಡೇರಿಸಲು ಸರ್ಕಾರದ ಹಂತದಲ್ಲಿ ಹೋರಾಟವನ್ನು ನಡೆಸುತ್ತಿದ್ದು, 2018 ಬಜೆಟ್‍ನಲ್ಲಿ ಸಿದ್ಧರಾಮಯ್ಯನವರ ಸರ್ಕಾರ 500 ರೂಗಳನ್ನು ಹೆಚ್ಚಳ ಮಾಡಿದ್ದು ಬಿಟ್ಟರೆ ಇದುವರೆಗೂ ಬಂದಂತಹ ಸರ್ಕಾರಗಳು ಬಿಸಿಯೂಟ ನೌಕರರನ್ನು ಕಡೆಗಣಿಸುತ್ತಾ ಬಂದಿದ್ದಾರೆ. ಕರೋನಾ ಸಂದರ್ಭದಲ್ಲೂ ಎಲ್ಲಾ ರಂಗದ ನೌಕರರಿಗೂ ಕಟ್ಟಡ ಕಾರ್ಮಿಕ, ಕೂಲಿ ಕಾರ್ಮಿಕ, ಖಾಸಗಿ ಶಾಲಾ ಶಿಕ್ಷಕರಿಗೂ ಆಸರೆಯಾಗಿ ಸರ್ಕಾರ ನಿಂತಿದೆ. ಆದರೆ ಬಿಸಿಯೂಟ ನೌಕರರಿಗೆ ಮಾತ್ರ ಯಾವುದೇ ಸೌಲಭ್ಯ ಅಥವಾ ಯೋಜನೆ ನೀಡಿರುವುದಿಲ್ಲ ಇದನ್ನು ಖಂಡಿಸಿ ಮುಂದಿನ ದಿನಗಳಲ್ಲಿ ಪಿ.ಎಸ್.ಎಸ್. ಸಂಘಟನೆಯ ನೇತೃತ್ವದಲ್ಲಿ ಭಲಿಷ್ಠವಾದ ಹೋರಾಟವನ್ನು ಮಾಡಿ ಬಿಸಿಯೂಟ ನೌಕರರಿಗೆ ವೇತನ ಮತ್ತು ಇನ್ನಿತರ ಸೌಲಭ್ಯಗಳನ್ನು ನೀಡಬೇಕೆಂದು ಹೋರಾಟವನ್ನು ಮಾಡಲಾಗುವುದು ಅದಕ್ಕಾಗಿ ಮಹಿಳೆಯರು ಇನ್ನಷ್ಟು ಒಗ್ಗಟ್ಟಾಗಿ ಹೋರಾಟಕ್ಕೆ ಕರೆ ನೀಡಿದಾಗ ಬರಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ನರಸಾಪುರ ಎಸ್.ನಾರಾಯಣಸ್ವಾಮಿ, ಪತ್ರಕರ್ತರಾದ ಗೋಪಿನಾಥ್, ಕೆ.ಎಸ್.ಗಣೇಶ್, ಜಿ.ಜೆ.ಹಳ್ಳಿ ನಾರಾಯಣಸ್ವಾಮಿ, ಕಲ್ವಮಂಜಲಿ ರಾಮುಶಿವಣ್ಣ, ಜಿ.ನಾರಾಯಣಸ್ವಾಮಿ, ಕೊತ್ತಮಿರಿ ಮಂಜುನಾಥ್, ಕೊಲದೇವಿ ಗೋಪಾಲಕೃಷ್ಣಮೂರ್ತಿ, ನಾಗವೇಣಮ್ಮ, ಗಂಗರತ್ನಮ್ಮ, ಜಮುನಾರಾಣಿ, ನಿರ್ಮಲಾಬಾಯಿ, ಎಸ್.ಆರ್.ಲಕ್ಷ್ಮಮ್ಮ, ಸುಬ್ಬಲಕ್ಷ್ಮಮ್ಮ, ಕೋಡಿಹಳ್ಳಿ ಜ್ಯೋತಿ, ವನಿತ, ಮಮತ, ಅಮ್ಮಯ್ಯಮ್ಮ, ಲಕ್ಷ್ಮಿ, ಸುಜಾತಮ್ಮ, ಮಂಜುಳಮ್ಮ, ಮುನಿರತ್ನ, ಅಮರಾವತಿ, ರತ್ನಮ್ಮ, ನಾಗಮಣಿ, ಕವಿತ, ಅನಿತ, ಮುನಿಯಮ್ಮ, ಅನಿತಾಬಾಯಿ, ಶೋಭಾರಾಣಿ, ಶಶಿಕಲಾ, ರಾಮಸಂದ್ರ ತಿರುಮಲೇಶ್, ಬೆಟ್ಟಹೊಸಪುರ ಮುನಿರಾಜು, ಜಿಂಕೆ ಮಂಜುನಾಥ್, ಎಲ್.ಎನ್.ಬಾಬು, ಜಗನ್ನಾಥ್ ರೆಡ್ಡಿ, ಧನರಾಜ್, ಹನುಮಪ್ಪ, ಲೋಕೇಶ್, ಸತೀಶ್, ರಾಮು, ದೊಡ್ಡಕುರುಬರಹಳ್ಳಿ ಶಂಕರಪ್ಪ, ಕೊಲದೇವಿ ಗಂಗಾಧರ್, ಸುಣ್ಣಕಲ್ ಗಂಗಾಧರ್, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರಾದ ಬಸವರಾಜ್, ಅಶ್ವಥನಾರಾಯಣಗೌಡ, ಚಿಂತಾಮಣಿ ಸತ್ಯಣ್ಣ, ವೀಣ, ಹೋಳೂರು ನೇತ್ರ, ಕಣ್ಣೂರು ಮುನಿರಾಜು, ಪದ್ಮಮ್ಮ, ಎಮ್ಮೆನತ್ತ ಶೋಭ, ಪ್ರಮೀಳ, ಟೇಕಲ್ ಮಂಜುಳ, ಅಸಂಡಹಳ್ಳಿ ರತ್ನಮ್ಮ, ಶೈಲಮ್ಮ ಮುಂತಾದವರು ಹಾಜರಿದ್ದರು.